ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಕೈಜೋಡಿಸಲು ಯುವಕರಿಗೆ ಸಲಹೆ

Last Updated 28 ಜನವರಿ 2012, 11:30 IST
ಅಕ್ಷರ ಗಾತ್ರ

ಮುಧೋಳ: ದೇಶದ ಅಭಿವೃದ್ಧಿಗೆ ಯುವಕರೂ  ಕೈಜೋಡಿಸಬೇಕು ಎಂದು  ತಹಶೀಲ್ದಾರ ಶಂಕರಗೌಡ ಸೋಮನಾಳ ಕರೆ ನೀಡಿದರು.

ಇಲ್ಲಿನ ರನ್ನ ಕ್ರೆಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ತಾಪಂ ಅಧ್ಯಕ್ಷೆ ಬಾಯಕ್ಕ ಕುಂಬಾರ, ಉಪಾಧ್ಯಕ್ಷ ಡಾ: ಶಿವಾನಂದ ಹುದ್ದಾರ, ಸ್ವಾತಂತ್ರ್ಯ ಯೋಧ ಎನ್.ಟಿ.ಶಹಾ, ತಾಪಂ ಇಒ ಡಾ.ವಿ.ಕೆದೇಶಪಾಂಡೆ,  ಜಿ.ಎಲ್.ಬಿ.ಸಿ ಎಂಜಿನಿಯರ್ ಯು.ಎಸ್.ಕುಲಕರ್ಣಿ, ಪಿಡಿಬ್ಲೂಡಿ ಎಂಜಿನಿಯರ್ ನಾಡಗೌಡ, ಜಿ.ಪಂ. ಎಂಜಿನಿಯರ್ ಸುರೇಂದ್ರ ದೊಡಮನಿ, ಪುರಸಭೆ ಮುಖ್ಯಾಧಿಕಾರಿ ರಮೇಶ ಸುಣಗಾರ, ಸಿ.ಪಿ.ಐ ಎಸ್.ಎಸ್.ಸಜ್ಜನ, ಸಮಾಜ ಕಲ್ಯಾಣಾಧಿಕಾರಿ ಡಿ.ಕೆ. ಹೊಸಮನಿ  ಉಪಸ್ಥಿರಿದ್ದರು.

ನಾಡೋಜ ಪ್ರಶಸ್ತಿ ಪುರಸ್ಕೃತ ಪಾರಿಜಾತ ಕಲಾವಿದೆ ಯಲ್ಲವ್ವ ರೊಡ್ಡಪ್ಪನವರ, ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದ ಐಶ್ವರ್ಯ ಚವ್ಹಾಣ, ವರ್ಷಿಣಿ ಜೈನಾಪೂರ, ಕುಮಾರಿ ಅತ್ತಾರ, ನೀಲಾಬಿಕಾ, ಕುಸ್ತಿಯಲ್ಲಿ ಸಾಧನೆ ಮಾಡಿದ ಅನಿಲ ಗೌಳಿ, ಅಂಗಲವಿಕಲರ ಕ್ರೆಡಾ ಕೂಟದಲ್ಲಿ ಸಾಧನೆ ಮಾಡಿದ ಚನ್ನಗಿರೆಪ್ಪ. ಪರಸಪ್ಪಗೋಳ, ಕರಾಟೆ ಚಾಂಪಿಯನ್ ಬೀಬಿ ಆಯಿಷಾ ನದಾಫ್, ಖೋಖೋದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ರೇಣುಕಾ ಭವಾನಿ, ಕಸವಿಲೇವಾರಿ ನಿರ್ವಹಣೆ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿನಾಯಕ ಚವ್ಹಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸ್ವಾತಂತ್ರ್ಯ ಯೋಧರಿಗೆ ಸನ್ಮಾನಿಸಿ ಗೌರವಿಸ ಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಬಾಡಗಂಡಿ ಸ್ವಾಗತಿಸಿದರು, ಎಸ್. ಎಸ್. ದೇಶಪಾಂಡೆ  ನಿರೂಪಿ ಸಿದರು,   
        
ವಿವಿಧೆಡೆ ಗಣರಾಜ್ಯೋತ್ಸವ: ತಾಲ್ಲೂಕಿನಾದ್ಯಂತ ಗಣರಾಜ್ಯೋತ್ಸವ ವನ್ನು ವಿಜ್ರಂಭಣೆಯಿಂದ ಆಚರಿಸ ಲಾಯಿತು.  ಸಹರಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜು ಬಾಗವಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು., ಪುರಸಭೆಯ ಆವರಣದಲ್ಲಿ ಪುರಸಭೆ ಅಧ್ಯಕ್ಷ ರಾಜು ಪಾಲೋಜಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷೆ ಇಂದಿರಾ ಗುಣದಾಳ,ರಮೇಶ ಸುಣಗಾರ ಉಪಸ್ಥಿತರಿದ್ದರು.  ರನ್ನ ಸಕ್ಕರೆ ಕಾರ್ಖಾನೆಯಲ್ಲಿ ಅಧ್ಯಕ್ಷ ಆರ್.ಎಸ್.ತಳೇವಾಡ ಧ್ವಜಾರೋಹಣ ನೆರವೇರಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್.ಪೂಜಾರ, ಹಾಗೂ ನಿರ್ದೇಶಕರು ಭಾಗವಹಿಸಿದ್ದರು
`ಸಂವಿಧಾನ ಗೌರವಿಸಿ~
ಬಾದಾಮಿ: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಜರುಗಿದ 63ನೆಯ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸರ್ವಶಿಕ್ಷಣ ಅಭಿಯಾನದಿಂದ ಅಂಗವಿಕಲ ಮಕ್ಕಳಿಗೆ ಟ್ರೈಸಿಕಲ್, ವೀಲ್ ಚೇರ್ ಮತ್ತಿತರ ಸಾಧನ ಸಲಕರಣೆಗಳನ್ನು ಶಾಸಕರು ವಿತರಿಸಿದರು.

ತಹಶೀಲ್ದಾರ ಮಹೇಶ ಕರ್ಜಗಿ ಧ್ವಜಾರೋಹಣ ನೆರವೇರಿಸಿದರು. ತಾ.ಪಂ.   ಅಧ್ಯಕ್ಷೆ ಸುಶೀಲಾಬಾಯಿ ಹೆಬ್ಬಳ್ಳಿ, ಪುರಸಭೆ ಅಧ್ಯಕ್ಷೆ ಶಾಂತಮ್ಮ ಅಮರಗೋಳ, ಜಿ.ಪಂ. ಸದಸ್ಯ ಎನ್. ಎಸ್. ಬೊಮ್ಮನಗೌಡರ, ಎ.ಎಂ. ಹಿರೇಮಠ, ಎಸ್.ಜಿ. ಬೀರನೂರ, ಎನ್.ಎಸ್. ಮಠ, ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಆರ್. ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ  ಹಾಜರಿದ್ದರು.

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಐತಿಹಾಸಿಕ ನಗರದಲ್ಲಿ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಐತಿಹಾಸಿಕ ಬಾವನ್ನ ಬಡೆ ಕೋಟೆ ಮೇಲೆ ನ್ಯಾಯಾಧೀಶ ಎಂ.ಎಂ.ಪಾಟೀಲ ಧ್ವಜಾರೋಹಣ ನೆರವೇರಿಸಿದರು. ವೀರಪುಲಿಕೇಶಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಥಮಿಕ ಶಾಲೆಯ ಕಾರ್ಯಾಧ್ಯಕ್ಷೆ ಉಮಾದೇವಿ ಪಟ್ಟಣಶೆಟ್ಟಿ, ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಬಿ.ಚಿಮ್ಮನಕಟ್ಟಿ, ವೀರಶೈವ ವಿದ್ಯಾವರ್ಧಕ ಸಂಸ್ಥೆಯಲ್ಲಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಧ್ವಜಾರೋಹಣ ನೆರವೇರಿಸಿ ವಂದನೆ ಸ್ವೀಕರಿಸಿದರು.
ಗಣರಾಜ್ಯೋತ್ಸವ
ಕೂಡಲಸಂಗಮ: ಕೂಡಲಸಂಗಮದ ಸರಕಾರಿ ಕಚೇರಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ 63ನೇ ಗಣರಾಜೋತ್ಸವ ಆಚರಿಸಲಾಯಿತು.
ಪೊಲೀಸ್ ಉಪ ಠಾಣೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಎ.ಸಿ.ಕುರಿ ಧ್ವಜಾರೋಹಣ ನೆರವೇರಿಸಿದರು.  ಎಂ.ಎಂ. ಸೋಮನಕಟ್ಟಿ, ರಮೇಶ ಡಿ.ಎನ್, ಕೆ.ವೈ.ಬಿರಾದಾರ ಉಪಸ್ಥಿತರಿದ್ದರು.
ಸರಕಾರಿ ಉಪಕರಣಾಕಾರ ಮತ್ತು ತರಬೇತಿ ಕೇಂದ್ರದಲ್ಲಿ  ವಿದ್ಯಾರ್ಥಿ ಗುರುರಾಜ ದೇಸಾಯಿ ಧ್ವಜಾರೋಹಣ ನೆರವೇರಿಸಿದರು.
ಪಶು ಇಲಾಖೆ  ಇಲಾಖೆಯ ಕಚೆರಿಯಲ್ಲಿ   ಪಶು ಇಲಾಖೆಯ ಪರಿವೀಕ್ಷಕ ಜೆ.ಎಸ್.ಪಾಟೀಲ ಧ್ವಜಾರೋಹಣ ಮಾಡಿ ಮಾತನಾಡಿದರು.

ಬಂದು ಮುಲ್ಲಾ, ಮಹಾಂತೇಶ ಎಮ್ಮಿ ಮುಂತಾದವರು ಉಪಸ್ಥಿತರಿದ್ದರು.
ಹೆಸ್ಕಾಂ (ಕೆ.ಇ.ಬಿ )ಕಚೇರಿ ಆವರಣದಲ್ಲಿ ಶಾಖಾ ಅಧಿಕಾರಿ ಯಮನಪ್ಪ ಅಂಬಿಗೇರ  ಧ್ವಜಾರೋಹಣ ನೆರವೇರಿಸಿದರು. ಮಹಾಂತೇಶ ಕುರಿ, ಎಸ್.ಎ. ಮುಜಾವರ, ಮಹಾಂತೇಶ ಗೊರವರ, ಜಿ.ಎ. ಹಲಕಾವಟಗಿ, ಮಲ್ಲು ವಕ್ರ, ವಂದಾಲಿ, ಪ್ರಕಾಶ ಹೋಕ್ರಾಣಿ, ವಿ.ಆರ್. ನಾಯಕ, ಜಗದೀಶ ಬಾಗೇವಾಡಿ, ಎಸ್.ಎಸ್.ಕಾಳಗಿ, ಎನ್.ಟಿ. ಮಕಾಶಿ ಉಪಸ್ಥಿತರಿದ್ದರು.

ಸಂಗಮೇಶ್ವರ ಶಿಶು ವಿಹಾರ ಮತ್ತು ಪ್ರಾಥಮಿಕ ಶಾಲೆಯಲ್ಲಿ   ಮುಖ್ಯ ಶಿಕ್ಷಕಿ ಎಸ್.ಐ.ನಾವಲಗಿ ಧ್ವಜಾರೋಹಣ ಮಾಡಿದರು. ವಿ.ವಿ.ಮಹಾಲಿಂಗಪೂರ, ಎಚ್.ಎಸ್.ಕನ್ನೂರ, ಬಸವರಾಜ ನಾಲತವಾಡ ಮುಂತಾದವರು ಉಪಸ್ಥಿತರಿದ್ದರು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

ಧ್ವಜಾರೋಹಣ
ಗುಳೇದಗುಡ್ಡ: ಇಲ್ಲಿನ ಪುರಸಭೆ ಆವರಣದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.  ಪುರಸಭೆ ಅಧ್ಯಕ್ಷೆ ಲಲಿತಾ ಗಾಜಿ (ದನ್ನೂರ) ಧ್ವಜಾರೋಹಣ  ನೆರವೇರಿಸಿದರು. ಉಪಾಧ್ಯಕ್ಷ ಮುರುಗೇಶ ರಾಜನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಕಮಲು ಮಾಲಪಾಣಿ, ಪ್ರಕಾಶ ಮುರಗೋಡ, ಸಿದ್ದು ಅರಕಾಲಚಿಟ್ಟಿ, ರಾಘವೇಂದ್ರ ಗೌಡರ, ಭುವನೇಶ್ವರಿ ಹಾದಿಮನಿ, ಮಾಜಿ ಅಧ್ಯಕ್ಷ ಟಿ.ಎಸ್. ಕೊಳ್ಳಿ, ವಿಶೇಷ ತಹಶೀಲ್ದಾರ ಪಿ.ವಿ. ದೇಸಾಯಿ, ಕಂದಾಯ ನಿರೀಕ್ಷಕ ಬಸವರಾಜ ಮೇಟಿ, ಎ.ಎಂ. ಕೊಡಕೇರಿ, ಎಂ.ಜಿ. ಕಲಕೇರಿ, ಗೃಹರಕ್ಷಕ ಹಾಗೂ ಆರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.

ಹೆಸ್ಕಾಂ ಕಚೇರಿ: ನಗರದ ಹೆಸ್ಕಾಂ ಕಾರ್ಯಾಲಯದ ಆವರಣದಲ್ಲಿ  ಎಂಜಿನಿಯರ್ ಗೋಪಾಲ ನಾಯಕ ಧ್ವಜಾರೋಹಣ ನೆರವೇರಿಸಿದರು. ಹಿರಿಯ ಲೆಕ್ಕಾಧಿಕಾರಿ ಬಿ.ಜಿ. ಚಿಕ್ಕಾಡಿ, ಜೆ.ಟಿ. ವಾಸನದ, ಮುನ್ನಾ ಕೊಣ್ಣೂರ, ವೈ.ಜಿ. ಬ್ಯಾಡಗಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪ್ರಾಚಾರ್ಯ ಆರ್.ಎಸ್. ದಡ್ಡಿ ನೆರವೇರಿಸಿದರು. ಕಾಲೇಜು ಸುಧಾರಣಾ ಸಮಿತಿ ಅಶೋಕ ಹೆಗಡಿ, ಕುರಹಟ್ಟಿ, ಮಾಳಗಿ, ಉಪಪ್ರಾಚಾರ್ಯ ಆರ್.ಎಫ. ಮುಧೋಳ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಾಲಯದಲ್ಲಿ ಗಣರಾಜೋತ್ಸವದ ಧ್ವಜಾ ರೋಹಣವನ್ನು ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕರನಂದಿ ನೆರವೇರಿಸಿದರು. ಪುರಸಭೆ ಉಪಾಧ್ಯಕ್ಷ ಮುರಗೇಶ ರಾಜನಾಳ, ಗಣೇಶ ಶೀಲವಂತ, ಪ್ರಧಾನ ಕಾರ್ಯದರ್ಶಿ ಸಿದ್ದರಾಮಯ್ಯ ಪುರಾಣಿಕಮಠ ಉಪಸ್ಥಿತರಿದ್ದರು.

ತಹಶೀಲ್ದಾರ ಕಚೇರಿ ಆವರಣದಲ್ಲಿ ವಿಶೇಷ ತಹಶೀಲ್ದಾರ ಪಿ.ವಿ. ದೇಸಾಯಿ ಧ್ವಜಾರೋಹಣನೆರವೇರಿಸಿದರು. ಕಂದಾಯ ನಿರೀಕ್ಷಕ ಬಸವರಾಜ ಮೇಟಿ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT