ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

Last Updated 15 ಜನವರಿ 2012, 10:00 IST
ಅಕ್ಷರ ಗಾತ್ರ

ಕಾರವಾರ: ಒಂದು ವರ್ಷ ಎರಡು ತಿಂಗಳು ಕೆಲಸ ಮಾಡಲು ಬಹಳ ದೊಡ್ಡ ಅವಧಿಯೇನಲ್ಲ. ಆದರೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಹೇಳಿದರು.

ಇಲ್ಲಿಯ ವಾರ್ತಾ ಇಲಾಖೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಡಳಿತ ನಡೆಸುವ ಸಂದರ್ಭದಲ್ಲಿ ನನ್ನಿಂದ ಅತಿರೇಕದ ವರ್ತನೆಗಳು ಆಗಿದಲ್ಲಿ ಅನ್ಯತಾ ಭಾವಿಸಬಾರದು ಎಂದರು.

ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಜಿಲ್ಲೆಯ, ಸಚಿವರು, ಸಂಸದರು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಂದಲೂ ಸಲಹೆ, ಮಾರ್ಗದರ್ಶಗಳನ್ನು ಪಡೆದು ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಹಿರಿಯ ಪತ್ರಕರ್ತ ಆರ್.ಎಸ್. ಹಬ್ಬು ಮಾತನಾಡಿ, ನಿರಾಶ್ರಿತರ ಸಮಸ್ಯೆ ಪರಿಸರ ಮತ್ತು ಸಂಸ್ಕೃತಿಯ ಬಗ್ಗೆ ಕಾಳಜಿಯುಳ್ಳ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಅವರದ್ದು. ಪತ್ರಕರ್ತನಾಗಿ ಬಹಳಷ್ಟು ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ ಇಂತಹ ಜನಪರ ಜಿಲ್ಲಾಧಿಕಾರಿಯನ್ನು ನೋಡಿರಲಿಲ್ಲ ಎಂದರು.

ಇಲ್ಲಿಯ ಕಡಲತೀರದಲ್ಲಿರುವ 13 ಎಕರೆ ಜಮೀನು ಕಡಲ್ಗಾವಲು ಪಡೆಗೆ ಸರ್ಕಾರ ನೀಡಿದಾಗ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳೇ ಆಸಕ್ತಿ ವಹಿಸಿ ಜನರ ಭಾವನೆಗಳಿಗೆ ಸ್ಪಂದಿಸಿ, ಜಮೀನು ಕಡಲ್ಗಾವಲು ಪಡೆಯ ಪಾಲಾಗದಂತೆ ನೋಡಿಕೊಂಡರು. ಪರಿಸರದ ವಿಷಯದಲ್ಲೂ ಜಿಲ್ಲಾಧಿಕಾರಿ ಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿ ದ್ದರು ಎಂದು ಹಬ್ಬು ಹೇಳಿದರು.

ಪತ್ರಕರ್ತ ಮಂಜೂರ ಫಾಹಿಮ್ ಮಾತನಾಡಿದರು. ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ. ಪತ್ರಕರ್ತ ಟಿ.ಬಿ.ಹರಿಕಾಂತ, ಸಿ.ಡಿ.ಜೋಶಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕೆ.ಎಚ್. ನರಸಿಂಹಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT