ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯತ್ತ ಕೊಂಡಯ್ಯುವ ಭರವಸೆ

Last Updated 1 ಮೇ 2012, 6:25 IST
ಅಕ್ಷರ ಗಾತ್ರ

ನರಗುಂದ: ಟಿಎಪಿಸಿಎಂಎಸ್ ಸಂಸ್ಥೆ ಯನ್ನು ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮೂಲಕ ಅದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಸಿ.ಸಿ.ಪಾಟೀಲ ಹೇಳಿದರು. ಪಟ್ಟಣದಲ್ಲಿ ಸೋಮವಾರ ಟಿಎಪಿಸಿಎಂಎಸ್‌ನ ಅಧ್ಯಕ್ಷರಾಗಿ ಎಫ್‌ಆರ್ ಪಾಟೀಲರು ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ  ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತ ನಾಡಿದರು.

  ಟಿಎಪಿಸಿಎಂಎಸ್ ಫಲಿತಾಂಶ ಹರ್ಷ ತಂದಿದ್ದು, ನ್ಯಾಯಾಲಯದ ಆದೇಶ ದಂತೆ ಎಲ್ಲ ಪ್ರಕ್ರಿಯೆ ನಡೆಯುವ ಮೂಲಕ ಅಧ್ಯಕ್ಷರ ಆಯ್ಕೆ ನಡೆದಿದೆ.  ಸಂಘವು ಹಿಂದಿನ ಆಡಳಿತ ಮಂಡಳಿ ಯಲ್ಲಿ ನಷ್ಟದಲ್ಲಿತ್ತು. ಈಗ ಆಡಳಿತಾಧಿಕಾರಿ ಸಮಯದಲ್ಲಿ 57 ಲಕ್ಷ ರೂಪಾಯಿಗಳು ಸಂಗ್ರಹವಾಗಿದೆ. ಟಿಎಪಿಸಿಎಂಎಸ್‌ನಲ್ಲಿ ರಾಜಕೀಯ ದ್ವೇಷಕ್ಕೆ  ಅವಕಾಶ ನೀಡದೇ ನೂತನ ಆಡಳಿತ ಮಂಡಳಿ ತಮ್ಮ ಕಾರ್ಯವನ್ನು ಮುಂದುವರಿಸಬೇಕು. ಸಂಸ್ಥೆಯ ಆಗು ಹೋಗುಗಳ ಬಗ್ಗೆ ಕಾನೂನು ತನ್ನದೆ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದರು.  

  ಅವಿರೋಧ ಆಯ್ಕೆ: ಸೋಮವಾರ ಪಟ್ಟಣದ  `ದಿ ನರಗುಂದ  ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ~ದ ಅಧಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಫ್.ಆರ್ ಪಾಟೀಲರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣಾಧಿಕಾರಿ ಇಕ್ಬಾಲ್ ಅಹ್ಮದ್ ತಿಳಿಸಿದರು. 

 ಈ ಸಂದರ್ಭದಲ್ಲಿ ನೂತನ ನಿರ್ದೇಶಕ ರಾದ ಎಂ.ಬಿ.ಜ್ಞಾನೋಪಂತ , ಶಂಕ್ರ ಗೌಡ ಯಲ್ಲಪ್ಪಗೌಡ್ರ  ಎ.ಎಂ. ಹುಡೇದ, ತಿಪ್ಪಣ್ಣ ಕಲಹಾಳ, ರುದ್ರಗೌಡ ಆಡೂರು, ಸಿ.ಎಸ್.ಪಾಟೀಲ,  ಎನ್.ಕೆ.ಸೋಮಾಪುರ, ಎಂ.ಎಂ. ಮುಳ್ಳೂರು, ಕೆಸಿಸಿ ಬ್ಯಾಂಕ್ ನಿರ್ದೇಶಕ  ನಿಂಗಣ್ಣ ಗಾಡಿ, ಜಿ.ಪಂ ಸದಸ್ಯ ಎಂ.ಎಸ್.ಪಾಟೀಲ, ಬಿಜೆಪಿ ಅಧ್ಯಕ್ಷ ಚಂದ್ರು ದಂಡಿನ, ಡಾ.ಪ್ರಭು ಹೂಗಾರ, ಶಿವಪ್ಪ ಬೋಳಶೆಟ್ಟಿ, ಎಸ್.ಬಿ.ಕರಿಗೌಡ್ರ, ಎಚ್.ಎನ್.ಪಾಟೀಲ, ರಾಜುಗೌಡ ಪಾಟೀಲ, ರಾಮಚಂದ್ರ ಪವಾರ   ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT