ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಪಂದ್ಯ ಆಡಿದ ಯುವರಾಜ್

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಹಲವು ತಿಂಗಳ ಬಿಡುವಿನ ಬಳಿಕ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲೇ 47 ರನ್ ಗಳಿಸಿದರು.

ಇಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತ 19 ವರ್ಷ ವಯಸ್ಸಿನೊಳಗಿನ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೆಎಸ್‌ಸಿಎ ಇಲೆವೆನ್ ತಂಡವನ್ನು ಪ್ರತಿನಿಧಿಸಿದರು. `ಯುವಿ~ 70 ಎಸೆತಗಳಲ್ಲಿ 47 ರನ್ ಗಳಿಸಿದರು. ಕೆಲವು ಬೌಂಡರಿಗಳ ಜೊತೆ ಒಂದು ಸಿಕ್ಸರ್ ಈ ಇನಿಂಗ್ಸ್ ಒಳಗೊಂಡಿತ್ತು.

ನಗರದ ಹೊರವಲಯದ ಮಹದೇವಪುರದಲ್ಲಿ ಈ ಪಂದ್ಯ ನಡೆಯಿತು. ಐದು ಓವರ್ ಬೌಲ್ ಮಾಡಿದ ಯುವರಾಜ್ 30 ಓವರ್‌ಗಳವರೆಗೆ ಫೀಲ್ಡಿಂಗ್ ಕೂಡಾ ನಡೆಸಿದರು. `ಎಂಟು ತಿಂಗಳ ಬಿಡುವಿನ ಬಳಿಕ ಮೊದಲ ಪಂದ್ಯವನ್ನಾಡಿದೆ. 70 ಎಸೆತಗಳಲ್ಲಿ 47 ರನ್ ಗಳಿಸಿದೆ. 30 ಓವರ್‌ಗಳವರೆಗೆ ಕ್ಷೇತ್ರರಕ್ಷಣೆ ಮಾಡಿದೆ. ಕೆಟ್ಟ ಆರಂಭ ಅಲ್ಲ!!~ ಎಂದು ಯುವರಾಜ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.

ಯುವರಾಜ್ ಸಿಂಗ್ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಿರುವ ಭಾರತ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT