ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಬ್‌ಗೆ ಆಸ್ಟ್ರೇಲಿಯಾ ವಿವಿ ಪ್ರಶಸ್ತಿ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್(ಪಿಟಿಐ): ಆಸ್ಟ್ರೇಲಿಯಾದ ಲಾ ಟ್ರೊಬ್ ವಿಶ್ವವಿದ್ಯಾಲಯ ಮೊದಲ ಬಾರಿಗೆ ಘೋಷಿಸಿರುವ `ಜಾಗತಿಕ ನಾಗರಿಕ' ಪ್ರಶಸ್ತಿಗೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಬಚ್ಚನ್ ಹೆಸರಲ್ಲಿ ಪಿ.ಎಚ್‌ಡಿ ಸಂಶೋಧನಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿಯೂ ವಿವಿ ಘೋಷಿಸಿದೆ. 4ವರ್ಷಗಳ ಅವಧಿಯ ವಿದ್ಯಾರ್ಥಿ ವೇತನದ ಒಟ್ಟು ಮೊತ್ತ ರೂ.13,75,000.

70 ವರ್ಷದ ಈ ನಟನಿಗೆ ಇಲ್ಲಿ ಮೇ 22ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಸಾಧಾರಣ ನಾಯಕತ್ವ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುವ ಬಚ್ಚನ್ ಅವರ ಪ್ರತಿಭೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು  ಲಾ ಟ್ರೋಬ್ ವಿಶ್ವವಿದ್ಯಾಲಯದ ಕುಲಪತಿ  ಪ್ರೊ. ಜಾನ್ ರೋಸನ್‌ಬರ್ಗ್ ಮಂಗಳವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT