ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಗುರುತಿಸಿದ್ದು ಒಳ್ಳೆ ಬೆಳವಣಿಗೆ: ಕೃಷ್ಣ

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಹಖಾನಿ ಉಗ್ರ ಜಾಲ ನಡುವೆ ಪರಸ್ಪರ ಸಂಬಂಧ ಇರುವುದನ್ನು ಅಮೆರಿಕದ ಆಡಳಿತ ಪರಿಗಣಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಎಸ್‌ಎಸ್‌ಐಯು ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿದೆ ಎಂದು ಅಮೆರಿಕ ಹೇಳಿದ ನಂತರ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ವಿವಾದದ ನಡುವೆಯೇ ಎಸ್.ಎಂ ಕೃಷ್ಣ ಈ ಹೇಳಿಕೆ ನೀಡಿದ್ದಾರೆ.

`ಐಎಸ್‌ಐಗೆ ಉಗ್ರರೊಂದಿಗೆ ಸಂಬಂಧವಿದೆ ಎಂದು ನಾವು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇವೆ. ಆದರೆ ಈಗ ಅಮೆರಿಕಕ್ಕೆ ಕೂಡ ಅದು ಮನವರಿಕೆ ಆಗಿರುವುದು ಸಂತಸ ತಂದಿದೆ~ ಎಂದು ಕೃಷ್ಣ ಹೇಳಿದ್ದಾರೆ.

`ಈ ವಿಚಾರದಲ್ಲಿ ನಮ್ಮ ನಿಲುವು ಈಗ ಸಮರ್ಥನೆಗೊಂಡಿದೆ ಎಂದು ನನಗನ್ನಿಸುತ್ತದೆ~ ಎಂದು ಸಚಿವರು ಹೇಳಿದ್ದಾರೆ.

ಪಾಕಿಸ್ತಾನ ಸೇನಾ ಗುಪ್ತಚರ ಸಂಸ್ಥೆ ಐಎಸ್‌ಐಯು ಹಖಾನಿ ಉಗ್ರ ಸಂಘಟನೆಗೆ ಬೆಂಬಲ ಮಾತ್ರ ನೀಡುತ್ತಿಲ್ಲ;  ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆ ಮೇಲೆ ದಾಳಿ ನಡೆಸಲೂ ಅದು ಕುಮ್ಮಕ್ಕು ನೀಡುತ್ತಿದೆ ಎಂದು ಅಮೆರಿಕ ಇತ್ತೀಚೆಗೆ ಆರೋಪಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT