ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ತನಿಖೆಯಿಂದ ಆತಂಕ ನಿವಾರಣೆ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಎಎಫ್‌ಪಿ): ಸಮೀಪದ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ `ಸಂಶಯಾಸ್ಪದ ವಸ್ತು~ವೊಂದು ಶನಿವಾರ ಸಂಜೆ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ತಜ್ಞರು ಕೂಲಂಕಷವಾಗಿ ತನಿಖೆ ನಡೆಸಿ ನಂತರ ಆತಂಕ ನಿವಾರಿಸಿದರು.

`ಶನಿವಾರ ಸಂಜೆ ಸುಮಾರು 4.30ಕ್ಕೆ ವಿಮಾನ ನಿಲ್ದಾಣದಲ್ಲಿ `ವಸ್ತು~ವೊಂದು ಪತ್ತೆಯಾಗಿತ್ತು. ಈ ಕಾರಣದಿಂದ ನಿಲ್ದಾಣದಲ್ಲಿ ಸರಕುಗಳನ್ನು ತುಂಬಿದ್ದ ಕಂಟೈನರ್ ಇದ್ದ ಪ್ರದೇಶದ ಸುತ್ತ ಇದ್ದ ಜನರನ್ನು ತೆರವುಗೊಳಿಸಲಾಗಿತ್ತು~ ಎಂದು ಡಲ್ಲೆಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ರಾಬರ್ಟ್ ಯಿಂಗ್ಲಿಂಗ್ ಹೇಳಿದ್ದಾರೆ.

ತೆರವು ಗೊಳಿಸಿದ ಪ್ರದೇಶದಲ್ಲಿದ್ದ ನಿಲ್ದಾಣದ `ಬಿ~ ಅಂಗಳದಲ್ಲಿ ಕೆಲವು ಗೇಟ್‌ಗಳು ಇದ್ದಿದ್ದರಿಂದ ತಪಾಸಣೆಗಾಗಿ ನಾಲ್ಕು ಗಂಟೆಗಳ ಕಾಲ ಅವುಗಳನ್ನು ಮುಚ್ಚಲಾಗಿತ್ತು ಎಂದು ಯಿಂಗ್ಲಿಂಗ್ ತಿಳಿಸಿದ್ದಾರೆ.
9/11 ದಾಳಿಯ ಹತ್ತನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಭಾವ್ಯ ಉಗ್ರರ ದಾಳಿಯನ್ನು ತಡೆಯಲು ಮುನ್ನೆಚ್ಚರಿಕೆಯಾಗಿ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT