ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ರಾಜತಾಂತ್ರಿಕ ಸಿಐಎ ಗೂಢಚಾರ

Last Updated 21 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಇಬ್ಬರು ಪಾಕ್ ಪ್ರಜೆಗಳನ್ನು ಗುಂಡಿಕ್ಕಿ ಕೊಂದ ನಂತರ ಪಾಕಿಸ್ತಾನ ಮತ್ತು ಅಮೆರಿಕದ ಮಧ್ಯೆ ಹೊಸ ರಾಜಂತಾಂತ್ರಿಕ ಸಮಸ್ಯೆಗೆ ಕಾರಣವಾಗಿರುವ ವಿವಾದಿತ ರಾಜತಾಂತ್ರಿಕ ರೇಮೆಂಡ್ ಡೇವಿಸ್ ಅವರು ‘ಅಮೆರಿಕದ ಗೂಢಚರ್ಯ ಸಂಸ್ಥೆ ಸಿಐಎ ಏಜೆಂಟ್’ ಎಂಬ ವಿಷಯ ಈಗ ಬಹಿರಂಗಗೊಂಡಿದೆ. 

ಡೇವಿಸ್ ಅಮೆರಿಕದ ಸಿಐಎ ವಿಶೇಷ ಪಡೆಯಲ್ಲಿ ಹತ್ತು ವರ್ಷ ಯೋಧರಾಗಿ ಕೆಲಸ ಮಾಡಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

ಈ ವಿಷಯ ಗೊತ್ತಿದ್ದರೂ ಒಬಾಮ ಆಡಳಿತದ ಮನವಿಯ ಮೇರೆಗೆ ಅಮೆರಿಕದ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಇದನ್ನು ಮುಚ್ಚಿಟ್ಟಿವೆ. ಪಂಜಾಬ್ ಕಾನೂನು ಸಚಿವ ರಾಣಾ ಸನಾವುಲ್ಲಾ ಮತ್ತು ಪಾಕ್ ಗೂಢಚರ್ಯ ಸಂಸ್ಥೆ ಐಎಸ್‌ಐ ಕೂಡ ಈ ವಿಷಯವನ್ನು ದೃಢಪಡಿಸಿವೆ ಎಂದು ಗಾರ್ಡಿಯನ್ ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT