ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ 8,587 ಟನ್ ಸಕ್ಕರೆ ರಫ್ತು

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಮದು ದರ ಕೋಟಾದಡಿ (ಟಿಆರ್‌ಕ್ಯು) ಅಗ್ಗದ ದರದಲ್ಲಿ ಅಮೆರಿಕಕ್ಕೆ 8,587 ಟನ್ ಕಚ್ಚಾ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಸೋಮವಾರ ಒಪ್ಪಿಗೆ ನೀಡಿದೆ.

ಈ ಕೋಟಾದಲ್ಲಿ ನಿಗದಿಪಡಿಸಿರುವ ಪ್ರಮಾಣ ಮುಗಿಯುತ್ತಿದ್ದಂತೆ, ಉಳಿದ ಸಕ್ಕರೆಗೆ ಹೆಚ್ಚುವರಿ ದರ ಪಾವತಿಸಬೇಕಾಗುತ್ತದೆ. ಇಂಡಿಯನ್ ಶುಗರ್ ಎಕ್ಸಿಮ್ ಕಾರ್ಪೊರೇಷನ್ ಸಕ್ಕರೆ ರಫ್ತು ಮಾಡಲಿದೆ ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ಪ್ರಕಟಣೆಯಲ್ಲಿ ತಿಳಿಸಿದೆ.

`ರಿಯಾಯ್ತಿ ಒಪ್ಪಂದದಡಿ' ಭಾರತವು ಪ್ರತಿ ವರ್ಷ ಅಮೆರಿಕಕ್ಕೆ ಸುಂಕ ರಹಿತವಾಗಿ 10 ಸಾವಿರ ಟನ್  ಸಕ್ಕರೆ ರಫ್ತು ಮಾಡುತ್ತದೆ.  ಭಾರತವು ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ ಸಕ್ಕರೆ ಉತ್ಪಾದಕ ದೇಶವಾಗಿದೆ. 2012-13ನೇ ಸಾಲಿನ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್-ಸೆಪ್ಟೆಂಬರ್)  230 ರಿಂದ 235 ಲಕ್ಷ ಟನ್ ಸಕ್ಕರೆ ಉತ್ಪಾದನೆ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT