ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸಾಲಿ ರೈಡ್ ನಿಧನ

Last Updated 24 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಮೆರಿಕದ ಪ್ರಥಮ ಮಹಿಳಾ ಗಗನಯಾನಿ ಸಾಲಿ ರೈಡ್ ಸೋಮವಾರ ನಿಧನರಾಗಿದ್ದಾರೆ.

ಅವರಿಗೆ 61 ವರ್ಷ ವಯಸ್ಸಾಗಿತ್ತು. 1978ರಲ್ಲಿ ನಾಸಾ ಸೇರಿದ ರೈಡ್, ಆಕಾಶ ನೌಕೆ ಚಾಲೆಂಜರ್‌ನಲ್ಲಿ ತೆರಳಿದ ತಂಡದ ಸದಸ್ಯರಲ್ಲೊಬ್ಬರಾಗಿದ್ದರಲ್ಲದೆ 32ನೇ ವಯಸ್ಸಿಗೆ ಗಗನಯಾನಕ್ಕೆ ತೆರಳಿದ ಅಮೆರಿಕದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ರೈಡ್ ನಿಧನಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಂತಾಪ ಸೂಚಿಸ್ದ್ದಿದಾರೆ. ರೈಡ್,  ಮಕ್ಕಳಿಗಾಗಿ 5ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT