ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮೂವರ ಸೆರೆ

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಖನೌ: ಇಲ್ಲಿ ಓದುತ್ತಿರುವ ಅಮೆರಿಕದ ವಿದ್ಯಾರ್ಥಿನಿಯೊಬ್ಬಳಿಗೆ ಟೆಂಪೊ ಚಾಲಕ ಸೇರಿ ಮೂವರು ಯುವಕರು ಲೈಂಗಿಕ ಕಿರುಕುಳ ನೀಡಿದ ಘಟನೆ ಶನಿವಾರ ರಾತ್ರಿ  ನಡೆದಿದೆ. ಈ ಯುವಕರನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಕಳುಹಿಸಲಾಗಿದೆ.

ಶನಿವಾರ ರಾತ್ರಿ ಲಖನೌನ ತುಲಿಯಾಗಂಜ್‌ ಪ್ರದೇಶದಲ್ಲಿ ಈ ಯುವತಿ ಟೆಂಪೊ ಹತ್ತಿದ್ದಳು. ಟೆಂಪೊದಲ್ಲಿದ್ದ  ಎಲ್ಲಾ ಪ್ರಯಾಣಿಕರು ಇಳಿದು ಹೋದ ಮೇಲೆ ಟೆಂಪೊ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಲೈಂಗಿಕ ಕಿರುಕುಳ ನೀಡಿದರು. ಸಹಾಯಕ್ಕಾಗಿ ಕೂಗಿದಾಗ ಟೆಂಪೊವಿನ ಟೇಪ್‌ ರೆಕಾರ್ಡರ್‌ ಶಬ್ದ ಹೆಚ್ಚಿಸಿದರು. ಇದರಿಂದ ಭಯಗೊಂಡು ಚಲಿಸುತ್ತಿದ್ದ ಟೆಂಪೊದಿಂದ ಹಾರಿ ಬಚಾವಾಗಿರುವುದಾಗಿ ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಯುವತಿ ನೀಡಿದ ಟೆಂಪೊ ಸಂಖ್ಯೆ ಆಧರಿಸಿ  ಚಾಲಕ ವೀರು ಮತ್ತು ಆತನ ಸ್ನೇಹಿತ ರಾಜನ್‌ ಹಾಗೂ ಆಯುಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿ ಅಮೆರಿಕದ ಪ್ರಜೆಯಾಗಿದ್ದು, ಗೋಕಲೆ ಮಾರ್ಗದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇಲ್ಲಿನ ಇಂದಿರಾ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT