ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವಿಳಂಬ ನೀತಿ

ದೇವಯಾನಿಗೆ ಹೆಚ್ಚಿನ ರಾಜತಾಂತ್ರಿಕ ರಕ್ಷಣೆ
Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮನೆ ಕೆಲಸ­ದಾಕೆಗೆ ನೀಡಬೇಕಾದ ವೇತನ­ದಲ್ಲಿ ವಂಚನೆ ಮಾಡಲಾಗಿದೆ ಎಂದು ಭಾರತದ ರಾಜತಾಂತ್ರಿಕ ಅಧಿಕಾರಿ  ದೇವ­­ಯಾನಿ ಖೋಬ್ರಾಗಡೆ ಅವರನ್ನು ಸಾರ್ವಜನಿಕವಾಗಿ ಬಂಧಿಸಿ ಅವಮಾನಿ­ಸಿದ ಪ್ರಕರಣದಲ್ಲಿ ಅಮೆರಿಕ ದಿನ­ಕ್ಕೊಂದು ವರಸೆ ತೆಗೆಯುತ್ತಲೇ ಇದೆ.

ಖೋಬ್ರಾಗಡೆ ಬಂಧನ ಪ್ರಕರಣ­ದಲ್ಲಿ ಕ್ಷಮೆ ಕೇಳುವುದಿಲ್ಲ ಎಂದು  ಹೇಳಿ­ರುವ ಅಮೆರಿಕ, ಇದೀಗ  ಅವರನ್ನು ವಿಶ್ವಸಂಸ್ಥೆಗೆ ವರ್ಗಾಯಿಸಿದ್ದ­ರಿಂದ ಅವರಿಗೆ ನೀಡಬೇಕಾದ ಹೆಚ್ಚಿನ ರಾಜ­ತಾಂತ್ರಿಕ ರಕ್ಷಣೆಗೆ ಸಂಬಂಧಿಸಿದ ಅರ್ಜಿ ಇನ್ನೂ  ಪರಿಶೀಲನೆಯ ಹಂತದಲ್ಲಿದೆ ಎಂದು  ಹೇಳಿದೆ.

‘ದೇವಯಾನಿ ಅವರಿಗೆ ಹೆಚ್ಚಿನ ರಾಜತಾಂತ್ರಿಕ ರಕ್ಷಣೆ ಒದಗಿಸುವ ಸಂಬಂಧದ ಅರ್ಜಿಯ  ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದನ್ನು ಹೇಳ­ಲಾ­ಗದು’ ಎಂದು ಅಮೆರಿಕದ ವಿದೇ­ಶಾಂಗ ಇಲಾಖೆ ವಕ್ತಾರರೊಬ್ಬರು ತಿಳಿಸಿದ್ದಾರೆ.

ಡಿ.20 ರಂದು ವಿಶ್ವಸಂಸ್ಥೆಯಿಂದ ಕಳಿಸಲಾದ ಅರ್ಜಿ­ಯನ್ನು ಅಮೆರಿಕ ಸ್ವೀಕರಿಸಿದೆ. ಸಾಮಾನ್ಯವಾಗಿ ಇಂತಹ ಅರ್ಜಿ ಬಂದಾಗ  ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚು ಸ­ಮಯ ತೆಗೆ­ದು­ಕೊಳ್ಳ­ಲಾ­ಗಿದೆ. ಈ ಹಿಂದಿನ ಮನ­­ವಿಗಳಂತೆ ದೇವ­ಯಾನಿ ಅವರ ಅರ್ಜಿ­ಪರಿಗಣಿ­ಸ­ಲಾ­ಗದು ಎಂದು ವಕ್ತಾರರು ಹೇಳಿದ್ದಾರೆ.

ಸ್ಥಳೀಯ ವೇತನಕ್ಕೆ ಅನುಗುಣವಾಗಿ: ವಿಶ್ವದಾ­ದ್ಯಂತ ವಿವಿಧ ದೇಶಗಳಲ್ಲಿ ಕಾರ್ಯ­ನಿರ್ವ­ಹಿಸುವ  ತನ್ನ ರಾಯ ಭಾರಿಗಳ ವೇತನ ಸ್ಥಳೀಯ ಕಾನೂನಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅಮೆರಿಕದ ವಕ್ತಾರರೊಬ್ಬರು ಹೇಳಿದ್ದಾರೆ.

ದೇವಯಾನಿ ಅವರನ್ನು ಬಂಧಿಸಿದ ನಂತರ ನವದೆಹಲಿ­ಯಲ್ಲಿ ಕಾರ್ಯನಿ­ರ್ವ­ಹಿಸುವ ಅಮೆರಿಕದ ರಾಯಭಾರಿ­ಗಳಿಗೆ ನೀಡಲಾಗುವ ವೇತನದ ವಿವರ­ವನ್ನು ಭಾರತ ಕೇಳಿತ್ತು. ಅಮೆರಿಕದ ರಾಯಭಾರ ಕಚೇರಿ ಗಳಲ್ಲಿ ಕೆಲಸ ಮಾಡುವ ಭಾರತದ ಸಿಬ್ಬಂದಿಗಳಾದ ಅಡುಗೆ ಮತ್ತು ಚಾಲಕರಿಗೆ ರೂ.12,000ದಿಂದ ರೂ. 15,000 ವರೆಗೆ ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಪ್ರತಿ ಗಂಟೆಗೆ ರೂ. 587 (9.47 ಡಾಲರ್‌) ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT