ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಉದ್ದಿಮೆ ಸ್ಥಾಪನೆ; ಭಾರತೀಯ ಮೂಲದವರು ಮುಂದು

Last Updated 3 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಅಮೆರಿಕಕ್ಕೆ ವಲಸೆ ಬಂದವರು ಉದ್ದಿಮೆ ಸ್ಥಾಪಿಸುವ ಪ್ರಮಾಣ ಕಡಿಮೆ ಆಗುತ್ತಿದ್ದರೂ ಭಾರತೀಯ ಮೂಲದವರು ಸ್ಥಾಪಿಸಿರುವ ಉದ್ದಿಮೆಗಳು ಅಮೆರಿಕದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ.

ಉದ್ದಿಮೆ ಸ್ಥಾಪನೆ, ನಿರ್ವಹಣೆಯಲ್ಲಿ ಕೌಶಲ ಗಳಿಸಿರುವ ಭಾರತೀಯ ಉದ್ಯಮಿಗಳು, ಅಮೆರಿಕದಲ್ಲಿರುವ ಇತರ ವಲಸಿಗ ಉದ್ಯಮಿಗಳಿಗಿಂತ ಮುಂಚೂಣಿಯಲ್ಲಿದ್ದಾರೆ. 2006-12ರ ಅವಧಿಯಲ್ಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಬಂಧಿ ಉದ್ದಿಮೆಗಳಲ್ಲಿ ಭಾರತೀಯ ಮೂಲದವರ ಪ್ರಮಾಣ ಶೇ 33.2ರಷ್ಟಿದೆ ಎಂದು ವರದಿ ತಿಳಿಸಿದೆ.

`2005ಕ್ಕೆ ಹೋಲಿಸಿದರೆ ಭಾರತೀಯ ಮೂಲದವರು ಸ್ಥಾಪಿಸಿರುವ ಉದ್ದಿಮೆಗಳ ಪ್ರಮಾಣದಲ್ಲಿ ಶೇ 7ರಷ್ಟು ಏರಿಕೆ ಆಗಿದೆ~ ಎಂದು ಕೌಫ್‌ಮನ್ ಪ್ರತಿಷ್ಠಾನ `ಅಮೆರಿಕದ ಹೊಸ ಉದ್ಯಮಿಗಳು ಆಗ ಮತ್ತು ಈಗ~ ಎಂಬ  ತನ್ನ ಸಮೀಕ್ಷೆಯ 32 ಪುಟಗಳ ವರದಿಯಲ್ಲಿ ಹೇಳಿದೆ.

ಉಳಿದ ದೇಶದವರು ಸ್ಥಾಪಿಸುವ ಉದ್ಯಮಗಳ ಪ್ರಮಾಣದಲ್ಲಿ ಇಳಿಮುಖವಾದರೂ ಭಾರತೀಯರ ಉದ್ಯಮ ಸ್ಥಾಪನೆ ನಿರಂತರವಾಗಿ ಮುಂದುವರೆದಿದೆ ಎಂದೂ ವರದಿ ಶ್ಲಾಘಿಸಿದೆ. ಅಮೆರಿಕದಲ್ಲಿ ಉದ್ದಿಮೆ ಸ್ಥಾಪಿಸುವ ವಲಸಿಗರಲ್ಲಿ ಭಾರತೀಯರು (ಶೇ 32.2) ಮುಂಚೂಣಿಯಲ್ಲಿದ್ದರೆ, ಚೀನಿಯರು (ಶೇ 8.1) ನಂತರದ ಸ್ಥಾನದಲ್ಲಿದ್ದಾರೆ. ಬ್ರಿಟನ್ (ಶೇ 6.3), ಕೆನಡಾ (ಶೇ 4.2), ಜರ್ಮನಿ (3.9), ಇಸ್ರೇಲ್ (3.5), ರಷ್ಯಾ(ಶೇ 2.4), ಕೊರಿಯಾ (ಶೇ 2.2), ಆಸ್ಟ್ರೇಲಿಯಾ (ಶೇ 2) ಮತ್ತು  ನೆದರ್‌ಲೆಂಡ್ (ಶೇ 2) ಉದ್ಯಮಿಗಳು ಕೊನೆ ಸ್ಥಾನದಲ್ಲಿದ್ದಾರೆ.

ಅಮೆರಿಕದಲ್ಲಿರುವ ವಲಸಿಗ ಉದ್ಯಮಿಗಳಿಗೆ ಹೋಲಿಸಿದಲ್ಲಿ ಭಾರತೀಯ ಉದ್ಯಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಮೇಲುಗೈ ಸಾಧಿಸಿದ್ದಾರೆ. ಕ್ಯಾಲಿಫೋರ್ನಿಯಾ, ಮೆಸಾಚುಸೆಟ್ಸ್, ಟೆಕ್ಸಾಸ್, ನ್ಯೂಯಾರ್ಕ್, ಫ್ಲಾರಿಡಾ, ನ್ಯೂಜೆರ್ಸಿ ನಗರಗಳು ಭಾರತೀಯ ಉದ್ಯಮಿಗಳ ನೆಚ್ಚಿನ ತಾಣಗಳಾಗಿವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT