ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಬೃಹತ್ ವೈದ್ಯಕೀಯ ಹಗರಣ

Last Updated 18 ಫೆಬ್ರುವರಿ 2011, 15:30 IST
ಅಕ್ಷರ ಗಾತ್ರ

ಬಾಸ್ಟನ್ (ಪಿಟಿಐ): ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಲಾದ ವೈದ್ಯಕೀಯ ವಿಮಾ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಂಧಿಸಿರುವ 111 ಮಂದಿಯಲ್ಲಿ ಭಾರತೀಯ ಮೂಲದ ಕನಿಷ್ಠ 6 ಜನ ಸೇರಿದ್ದಾರೆ.

ಅವರನ್ನು ಷಿಕಾಗೊದ ವೈದ್ಯಕೀಯ ಕ್ಲಿನಿಕ್ ಒಂದರ ಅಧ್ಯಕ್ಷ ಮತ್ತು ಮಾಲೀಕ ಜಸ್ವಿಂದರ್ ರಾಯ್ ಛಬ್ಬರ್, ಡೆಟ್ರಾಯಿಟ್‌ನ ವಿಷ್ಣು ಪ್ರದೀಪ್, ರಾಮ್ ನರೇಶ್ ರಾಜುಲಪತಿ, ಸೂರ್ಯ ನಲ್ಲಾನಿ ಹಾಗೂ ಇತರರು ಎನ್ನಲಾಗಿದೆ.

‘ನಕಲಿ ಲೆಕ್ಕ ತೋರಿಸಿ ವೈದ್ಯಕೀಯ ವೆಚ್ಚ ಪಡೆದಿರುವುದು, ಸುಳ್ಳು ರೋಗಗಳ ದಾಖಲು, ಅಕ್ರಮ ಹಣ ಸಕ್ರಮ ಯತ್ನ ಮತ್ತಿತರ ಆರೋಪಗಳ ಮೇಲೆ 9 ನಗರಗಳಿಗೆ ಸೇರಿದ ವೈದ್ಯರು, ನರ್ಸ್‌ಗಳು, ಆರೋಗ್ಯ ಸುರಕ್ಷಾ ವೃತ್ತಿಪರರನ್ನು ವಶಕ್ಕೆ ಪಡೆಯಲಾಗಿದೆ. ಎಫ್‌ಬಿಐ ಹಾಗೂ ಮಾನವಿಕ ಸೇವಾ ಇಲಾಖೆ ಒಟ್ಟಾಗಿ ಈ ಕಾರ್ಯಾಚರಣೆ ನಡೆಸಿವೆ’ ಎಂದು ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ ಆರೋಗ್ಯ ಮತ್ತು ಮಾನವಿಕ ಸೇವಾ ಕಾರ್ಯದರ್ಶಿ ಕ್ಯಾಥಲೀನ್ ಸೆಬಿಲಿಯಸ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಸರ್ಕಾರದ ವಿಮಾ ಯೋಜನೆ ‘ಮೆಡಿಕೇರ್’ನಲ್ಲಿ ಈ ಹಗರಣದ ಜಾಲ ಬಯಲಾಗಿದೆ. ಹಿರಿಯ ಅಮೆರಿಕನ್ನರು ಮತ್ತು ಅಂಗವಿಕಲರಿಗೆ ಈ ಯೋಜನೆ ಅನ್ವಯವಾಗುತ್ತದೆ. ಇದರಡಿ ವೈದ್ಯರು, ನರ್ಸ್‌ಗಳು, ಆರೋಗ್ಯ ಸುರಕ್ಷಾ ಕಂಪೆನಿಗಳು ಜಂಟಿಯಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 225 ದಶಲಕ್ಷ ಡಾಲರ್‌ಗೂ ಹೆಚ್ಚು ವಂಚಿಸಿರುವುದಾಗಿ ಹೇಳಲಾಗಿದೆ. ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9.54 ಲಕ್ಷ ವೈದ್ಯರಲ್ಲಿ ಭಾರತೀಯ ಮೂಲದ 60 ಸಾವಿರ ಮಂದಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT