ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಷಿಕಾಗೊ (ಎಪಿ): ಅಮೆರಿಕದಲ್ಲಿ ಮೇಲಿಂದ ಮೇಲೆ ಗುಂಡಿನ ದಾಳಿ ಪ್ರಕ­ರ­ಣಗಳು ವರದಿಯಾಗುತ್ತಿವೆ. ನೌಕಾ­ಪ­ಡೆಗೆ ಸೇರಿದ ಹಡಗುಕಟ್ಟೆಯಲ್ಲಿ ನಡೆದ ದಾಳಿಯ ನೆನಪು ಮಾಸುವ ಮುನ್ನವೇ ಷಿಕಾಗೊದಲ್ಲಿ ಇಂಥದ್ದೇ ಘಟನೆ ನಡೆದಿದೆ.

ಇಲ್ಲಿನ ಪಾರ್ಕ್‌ನಲ್ಲಿ ಅಪ­ರಿಚಿತ ಬಂದೂಕು­ಧಾರಿಗಳು ಗುರು­­ವಾರ ತಡ ರಾತ್ರಿ ನಡೆಸಿದ ಗುಂಡಿನ ದಾಳಿಗೆ 3 ವರ್ಷದ ಮಗು ಸೇರಿ 11 ಮಂದಿ ಗಾಯ­­ಗೊಂಡಿ­ದ್ದಾರೆ.

‘ಮಗುವಿನ ಸ್ಥಿತಿ ಚಿಂತಾಜನಕ­ವಾ­ಗಿದೆ’  ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಇನ್ನಿಬ್ಬರು ಗಾಯಾ­ಳುಗಳು ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

‌‘ಕಾರ್ನೆಲ್‌ ಸ್ಕ್ವೇರ್‌ ಪಾರ್ಕ್‌ನತ್ತ ತಿರುಗುವ ಮುನ್ನ ದುಷ್ಕರ್ಮಿಗಳು ನನ್ನತ್ತ ಗುಂಡು ಹಾರಿಸಿದರು. ನಂತರ ಅಲ್ಲಿದ್ದ ಜನರ ಮೇಲೂ ದಾಳಿ ನಡೆಸಿ­ದರು. ನಾನು ಹೇಗೋ ತಪ್ಪಿಸಿಕೊಂಡು ಮನೆಯೊಳಗೆ ಓಡಿಹೋದೆ’ ಎಂದು ಪ್ರತ್ಯಕ್ಷದರ್ಶಿ ಜೂಲಿಯನ್‌್ ಹ್ಯಾರಿಸ್‌ ಅವರು ‘ದಿ ಷಿಕಾಗೊ ಟೈಮ್ಸ್‌’ ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಗುಂಡಿನ ದಾಳಿ ನಡೆದಾಗ ನನ್ನ ಅಪಾರ್ಟ್‌್ ಮೆಂಟ್‌ನಲ್ಲಿದ್ದೆ. ಏನಾ­ಯಿತು ಎಂದು ನೋಡಲು ಕೆಳಗೆ ಬಂದೆ. ಬಹಳಷ್ಟು ಜನ ದಿಕ್ಕಾಪಾಲಾಗಿ ಓಡು­ತ್ತಿದ್ದರು’ ಎಂದು 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಫ್ರಾನ್ಸಿಸ್ ಜಾನ್‌ (70) ತಿಳಿಸಿದ್ದಾರೆ.
‘ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶ­ದಲ್ಲಿ ಗುಂಡಿನ ದಾಳಿ ಹೆಚ್ಚಾಗುತ್ತಿದೆ’ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT