ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮತ್ತೊಂದು ಚಂಡಮಾರುತ ಸಾಧ್ಯತೆ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಿಯಾಮಿ (ಎಎಫ್‌ಪಿ):  ಅಪಾಯಕಾರಿಯಾದ ಪ್ರಬಲ ಚಂಡಮಾರುತವೊಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಮೆರಿಕದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮೆಕ್ಸಿಕೊ ಕರಾವಳಿಯಲ್ಲಿ ತೈಲ ಸಂಗ್ರಹಿಸುತ್ತಿರುವ ಕಂಪೆನಿಗಳು ತಮ್ಮ ನೌಕರರನ್ನು ಸ್ಥಳಾಂತರಗೊಳಿಸಲು ಪ್ರಾರಂಭಿಸಿವೆ.

ಅಲ್ಲದೇ, ಮುನ್ಸೂಚನೆಯ ಹಿನ್ನೆಲೆಯಲ್ಲಿ ಲೂಸಿಯಾನ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೊಷಿಸಲಾಗಿದೆ.
ಕರಾವಳಿ ಪ್ರದೇಶಗಳಾದ ಪಾಸ್ಕಾಗೌಲಾ, ಮಿಸಿಸ್ಸಿಪ್ಪಿಯಿಂದ  ಸಬೀನಾ ಪಾಸ್, ಟೆಕ್ಸಾಸ್‌ವರೆಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಚಂಡಮಾರುತ ಮುನ್ಸೂಚನಾ ಕೇಂದ್ರ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಅಪ್ಪಳಿಸಿದ್ದ ಭೀಕರ ಐರಿನ್ ಚಂಡಮಾರುತ ಸೃಷ್ಟಿಸಿದ್ದ ಪ್ರವಾಹದಿಂದ ಅಮೆರಿಕದ ಈಶಾನ್ಯ ಭಾಗಗಳು ಚೇತರಿಸಿಕೊಳ್ಳುತ್ತಿವೆ.

ತಾತ್ಕಾಲಿಕವಾಗಿ `ಟ್ರಾಪಿಕಲ್ ಡಿಪ್ರೆಷನ್ 13~ ಎಂದು ಹೆಸರಿಸಲಾಗಿರುವ ಚಂಡಮಾರುತ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿರುವ ಚಂಡಮಾರುತ ಕೇಂದ್ರ, 2005ರಲ್ಲಿ ಕತ್ರಿನಾ ಚಂಡಮಾರುತ ಧ್ವಂಸಗೊಳಿಸಿದ್ದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಬಹುದು ಎಂದೂ ಹೇಳಿದೆ.

ಮುನ್ಸೂಚನೆಯ ಹಿನ್ನೆಲೆಯಲ್ಲಿ ಲೂಸಿಯಾನ ಗವರ್ನರ್ ಬಾಬ್ಬಿ ಜಿಂದಾಲ್ ಅವರು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

`ರಾಜ್ಯದಲ್ಲಿ ಗಾಳಿಯಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೃಹತ್ ಗಾತ್ರದ ಅಲೆಗಳು ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯೂ ಇದ್ದು, ಆ ಭಾಗದಲ್ಲಿ ಹಠಾತ್ ಪ್ರವಾಹ ಸೃಷ್ಟಿಯಾಗಬಹುದು~ ಎಂದು ಜಿಂದಾಲ್ ಹೇಳಿದ್ದಾರೆ.

ಮುನ್ಸೂಚನೆಯ ಪ್ರಕಾರ, ಕೆಲವು ಭಾಗಗಳಲ್ಲಿ 12ರಿಂದ 15 ಇಂಚು ಮಳೆಯಾಗುವ ನಿರೀಕ್ಷೆಯೂ ಇದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT