ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಹೆಚ್ಚುತ್ತಿರುವ ಹಸಿವು, ಬಡತನ!

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಷಿಕಾಗೊ (ಎಎಫ್‌ಪಿ): ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರು ಹೆಚ್ಚಾಗುತ್ತಿದ್ದಾರೆ. ವಾಸಕ್ಕೊಂದು ಮನೆ ಇಲ್ಲದೇ ಪರದಾಡುವವರ ಸಂಖ್ಯೆ ಏರುತ್ತಿದೆ! ಹಾಗಂತ ಸಮೀಕ್ಷೆಯೊಂದು ಹೇಳಿದೆ. ಅಮೆರಿಕದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ನಗರಗಳು ಹಾಗೂ ಸಾಮಾಜಿಕ ಸೇವಾ ಕೇಂದ್ರಗಳು ನಿರ್ಗತಿಕರಿಗೆ ಸಹಾಯಹಸ್ತ ಚಾಚಲು ಸೋತಿವೆ.

`2011ರಲ್ಲಿ ಇಲ್ಲಿ ಶೇ 7ರಷ್ಟು ನಿರ್ಗತಿಕರ ಸಂಖ್ಯೆ ಹೆಚ್ಚಿದೆ. ಸಹಾಯ ಕೇಳುವ ಶೇ 19ರಷ್ಟು ಜನರಿಗೆ ನಿರಾಸೆಯೇ ಗತಿ' ಎನ್ನುತ್ತದೆ ಸಾಮಾಜಿಕ ಸೇವಾ ನಿರ್ವಹಣಾ ಸಂಸ್ಥೆಯ ಸಮೀಕ್ಷೆ.

`ಫಿಲಡೆಲ್ಫಿಯಾದಲ್ಲಿ ನಾನು ನಿತ್ಯವೂ ಹಸಿವಿನಿಂದ ಬಳಲುತ್ತಿರುವ ಹಾಗೂ ನಿರ್ಗತಿಕ ಜನರನ್ನು ನೋಡುತ್ತೇನೆ' ಎಂದು ಮೇಯರ್ ಮೈಕೆಲ್ ನಟ್ಟರ್ ಹೇಳುತ್ತಾರೆ.

`ನಿರ್ಗತಿಕರ ನೆರವಿನ ನಿಧಿಯನ್ನು ಕಾಂಗ್ರೆಸ್ ಕಡಿತ ಮಾಡುತ್ತಿರುವುದು ಒಪ್ಪತಕ್ಕದ್ದಲ್ಲ. ಬಡವರಿಗೆ ಬೇಕಾಗಿರುವುದು ಉದ್ಯೋಗ. ಸಂಪಾದನೆಗೊಂದು ದಾರಿ ಸಿಕ್ಕರೆ ಅವರು ತಮ್ಮ ಕುಟುಂಬವನ್ನು ನಡೆಸಬಹುದು. ಕಾಂಗ್ರೆಸ್ ಸಮತೋಲಿತ ಬಜೆಟ್ ಮಂಡಿಸಿದರೆ ಇವೆಲ್ಲ ಕಾರ್ಯರೂಪಕ್ಕೆ ಬರಲು ಸಾಧ್ಯ' ಎನ್ನುವುದು ನಟ್ಟರ್ ಅಭಿಪ್ರಾಯ.

ಶೇ 30ರಷ್ಟು ವಯಸ್ಕ ನಿರ್ಗತಿಕರು ಮಾನಸಿಕ ರೋಗಿಗಳಾಗಿದ್ದಾರೆ. ಶೇ 18ರಷ್ಟು ಮಂದಿ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಶೇ 16ರಷ್ಟು ಜನರು ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಶೇ 13ರಷ್ಟು ವಯೋವೃದ್ಧರು ಹಾಗೂ ಶೇ 4ರಷ್ಟು ಎಚ್‌ಐವಿ ಪೀಡಿತರು ಇದ್ದಾರೆ ಎನ್ನುವ ಆತಂಕಕಾರಿ ಅಂಶವನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT