ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ:ಮತ್ತೊಂದು ಸ್ಫೋಟ ಐದು ಸಾವು

Last Updated 18 ಏಪ್ರಿಲ್ 2013, 13:31 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ/ಐಎಎನ್ಎಸ್) : ಇಲ್ಲಿನ ಟೆಕ್ಸಾಸ್ ನಗರದ ವೆಸ್ಟ್ ಪಟ್ಟಣದ ರಾಸಾಯನಿಕ ಗೊಬ್ಬರ ಕಾರ್ಖಾನೆಯೊಂದರಲ್ಲಿ ಬುಧವಾರ ರಾತ್ರಿ 8:50ಕ್ಕೆ  ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 40 ಜನರ ಸ್ಥಿತಿ ಚಿಂತಾಜನಕವಾಗಿದ್ದು, 60ರಿಂದ 70ಮಂದಿ ಸಾವನ್ನಪ್ಪಿರುವ ಶಂಕೆಯನ್ನು  ಅಗ್ನಿ ಶಾಮಕ ಸಿಬ್ಬಂದಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಲವಾರು ಮಂದಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕರ್ತರೂ ಕೂಡ ನಾಪತ್ತೆಯಾಗಿದ್ದಾರೆಂದು ಹೇಳಲಾಗಿದೆ.  ಗಾಯಳುಗಳನ್ನು ಆರು ಹೆಲಿಕಾಪ್ಟರ್ ನಲ್ಲಿ  ಆಸ್ಪತ್ರೆಗೆ ಸಾಗಿಸಲಾಗಿದೆ.

ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಸ್ಫೋಟದಿಂದ ನೂರಾರು ಮನೆಗಳು ನಾಶವಾಗಿವೆ. ಸುತ್ತ ಮುತ್ತ ವಾಸವಾಗಿದ್ದ 2,600 ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಸ್ಫೋಟದ ತಿವ್ರತೆ ಎಷ್ಟಿತ್ತೆಂದರೆ 2.1 ರಷ್ಟು ಪ್ರಮಾಣದ ಭೂಕಂಪ ಇದರಿಂದ ಸಂಭವಿಸಿತು.  ಬೃಹತ್ ಗಾತ್ರದ  ಬೆಂಕಿಯ ಉಂಡೆಗಳು ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದವು. ಕಾರ್ಖಾನೆಯ ಆವರಣದ ಎಲ್ಲಾ ಕಡೆ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿತ್ತು.

ಬಾಸ್ಟನ್ ನಲ್ಲಿ ಮೊನ್ನೆ ಉಗ್ರರು ಸಿಡಿಸಿದ    ಬಾಂಬ್ ಸ್ಫೋಟದಿಂದ ಇಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಅಮೆರಿಕದಲ್ಲಿ ಮತ್ತೊಂದು ಸ್ಫೊಟ ಸಂಭವಿಸಿರುವುದು ಅಲ್ಲಿನ ಜನತೆಯನ್ನು  ಆತಂಕಕ್ಕೆ ದೂಡಿದೆ. ಆದರೆ ಇದೊಂದು ಉಗ್ರರ ಕೃತ್ಯ ಅಲ್ಲ  ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT