ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕವನ್ನು ಅಟ್ಟಾಡಿಸಿದ ಸುಂಟರಗಾಳಿ: 22 ಸಾವು

Last Updated 17 ಏಪ್ರಿಲ್ 2011, 10:15 IST
ಅಕ್ಷರ ಗಾತ್ರ

ಷಿಕಾಗೋ (ಎಎಫ್ ಪಿ): ಅಮೆರಿಕದ ದಕ್ಷಿಣ, ಕೇಂದ್ರ ಹಾಗೂ ಪೂರ್ವ ಭಾಗಗಳಲ್ಲಿ ಸತತ ಮೂರನೇ ದಿನ ಶಕ್ತಿಶಾಲಿ ಬಿರುಗಾಳಿಯಿಂದ ಎದ್ದ ಸರಣಿ ಸುಂಟರಗಾಳಿಗಳು ಕನಿಷ್ಠ 22 ಜನರನ್ನು ಬಲಿತೆಗೆದುಕೊಂಡಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಉತ್ತರ ಕರೋಲಿನಾದಲ್ಲಿ ಸಂಭವಿಸಿದ ಸುಂಟರಗಾಳಿಗಳ ಹಾವಳಿಗೆ ಸಿಲುಕಿ ಕನಿಷ್ಠ ಐವರು ಮೃತರಾದರೆ ಹಲವಾರು ಮನೆಗಳು, ಅಂಗಡಿ- ವ್ಯಾಪಾರ ಸಂಕೀರ್ಣಗಳು ಹಾನಿಗೊಂಡಿದ್ದು ವಿದ್ಯುತ್ ಕಡಿತಗೊಂಡಿದೆ ಎಂದು ಎನ್ ಬಿಸಿ ಟೆಲಿವಿಷನ್ ಶನಿವಾರ ವರದಿ ಮಾಡಿದೆ.

ಅಲಬಾಮಾದ ಮರೆಂಗೊ ಕೌಂಟಿಯಲ್ಲಿ ಒಬ್ಬ ಮೃತನಾದರೆ, ಅಟೌಗಾ ಮತ್ತು ವಾಷಿಂಗ್ಟನ್ ಕೌಂಟಿಯಲ್ಲಿ ಇತರ ಆರು ಜನ ಅಸು ನೀಗಿದ್ದಾರೆ ಎಂದು ಎಂಎಸ್ ಎನ್ ಬಿ ಸಿ ಟೆಲಿವಿಷನ್ ವರದಿ ಮಾಡಿದೆ.

ಬಿರುಗಾಳಿಯು ಮರಗಳನ್ನು ಉರುಳಿಸಿದ್ದಲ್ಲದೆ, ವಿದ್ಯುತ್ ವಯರುಗಳನ್ನು ತುಂಡರಿಸಿದೆ. ಹಲವಾರು ಮನೆಗಳ ಛಾವಣಿಗಳನ್ನೇ ಛಿದ್ರಗೊಳಿಸಿದೆ. ಹೆದ್ದಾರಿಗಳುದ್ದಕ್ಕೂ ಟ್ರ್ಯಾಕ್ಟರ್ ಟ್ರೇಲರ್ ಗಳು ಅಸ್ತವ್ಯಸ್ತವಾಗಿ ಬಿದ್ದವು.

ಬಿರುಗಾಳಿಯ ಪರಿಣಾಮವಾಗಿ ಮಿಸ್ಸಿಸ್ಸಿಪ್ಪಿ ಮತ್ತು ಅಲಬಾಮಾದಲ್ಲಿ ಶುಕ್ರವಾರ ಎರಡು ಡಜನ್ ಗಳಷ್ಟು ಸುಂಟರಗಾಳಿಗಳು ಸೃಷ್ಟಿಯಾಗಿದ್ದವು. ಇದಕ್ಕೆ ಹದಿನೈದು ದಿನಗಳ ಹಿಂದಷ್ಟೇ ಒಕ್ಲಹಾಮಾ, ಕನಾಸ್ ಮತ್ತು ಟೆಕ್ಸಾಸ್ ನಲ್ಲಿ 15 ಸುಳಿಗಾಳಿಗಳು ರಂಪಾಟ ನಡೆಸಿದ್ದವು ಎಂದು ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT