ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಾದ ಯೋಧನಿಗೆ ಇರಾನ್‌ನಲ್ಲಿ ಗಲ್ಲು ಶಿಕ್ಷೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಟೆಹರಾನ್ (ಎಎಫ್‌ಪಿ):  ಇರಾನ್‌ನಲ್ಲಿ ಗೂಢಚರ್ಯೆ ನಡೆಸುತ್ತಿದ್ದ ಎಂಬ ಆರೋಪದ ಮೇರೆಗೆ ಅಮೆರಿಕಾದ ಮಾಜಿ ಯೋಧ ಅಮೀರ್ ಮಿರ್ಜೈ ಹೆಕ್ಮತಿ (28) ಎಂಬಾತನಿಗೆ ಇರಾನ್‌ನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಇರಾನ್‌ನ ಪೌರತ್ವವನ್ನೂ ಹೊಂದಿದ್ದ ಈತ ಸಿಐಎ ಪರ ಕೆಲಸ ಮಾಡುತ್ತಿದ್ದು, ಇರಾನ್‌ನಲ್ಲಿ ಭಯೋತ್ಪಾದಕತೆಯನ್ನು ಹರಡುವಲ್ಲಿ ಪ್ರಯತ್ನ ನಡೆಸಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಅಮೆರಿಕ ದಲ್ಲಿರುವ ಹಿಕ್ಮತ್ ಕುಟುಂಬ ಆತ ಇರಾನ್‌ನಲ್ಲಿರುವ ತನ್ನ ಅಜ್ಜಿ ಯನ್ನು ನೋಡಲು ಹೋಗಿದ್ದ ಹೊರತು ಗೂಢಚಾರಿಯಾಗಿ ಅಲ್ಲ ಎಂಬ ಹೇಳಿಕೆ ನೀಡಿ ಆರೋಪವನ್ನು ತಳ್ಳಿ ಹಾಕಿದೆ. ಈ ನಡುವೆ ಹೆಕ್ಮತಿಯನ್ನು ಬಿಡುಗಡೆ ಮಾಡಲು ಅಮೆರಿಕ ಆಗ್ರಹಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT