ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ನೋಟ್ ಪುಸ್ತಕ, ಗೈಡ್ ವಶ

Last Updated 10 ಏಪ್ರಿಲ್ 2013, 5:54 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಸಂಗ್ರಹಿಸಿ ಇಡಲಾಗಿದ್ದ ನೋಟ್ ಪುಸ್ತಕ, ಫೈಲ್ ಮತ್ತು ಗೈಡ್‌ಗಳನ್ನು ಮಂಗಳವಾರ ಚುನಾವಣಾ ಧಿಕಾರಿಗಳು ವಶಪಡಿಸಿಕೊಂಡರು.

ಶಾಸಕ ಎ.ಮಂಜು ಅವರ ಭಾವಚಿತ್ರ ಹೊಂದಿರುವ ನೋಟ್ ಪುಸ್ತಕ ಮತ್ತು ಗೈಡ್‌ಗಳನ್ನು ಸಂಗ್ರಹಿಸಲಾಗಿದೆ.  ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪ್ರೊಬೇಷನರಿ ಉಪವಿಭಾಗಾಧಿಕಾರಿ ಸುನೀಲ್ ಕುಮಾರ್ ಪರಿಶೀಲಿಸಿ ವಸ್ತುಗಳನ್ನು ವಶಪಡಿಸಿಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 7500 ನೋಟ್ ಪುಸ್ತಕ, 270 ಗೈಡ್ ಮತ್ತು 16 ಫೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಿಕ್ಷಕ ಭವನದ ಕಾರ್ಯದರ್ಶಿ ವಿರುದ್ಧ ದೂರು ದಾಖಲಿಸಿಕೊಳ್ಳುವುದಾಗಿ ಎಂದು ಹೇಳಿದರು.

ಜೆಡಿಎಸ್ ಪ್ರತಿಭಟನೆ: ಪ್ರಕರಣ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಬಂಧನಕ್ಕೆ ಆಗ್ರಹಿಸಿ ಜೆಡಿಎಸ್ ಕಾರ್ಯ ಕರ್ತರು  ಪ್ರತಿಭಟನೆಗೆ ಮುಂದಾದರು. ಬಿಇಒ ಪಕ್ಷಪಾತ ನೀತಿ ಅನುಸರಿಸು ತ್ತಿದ್ದಾರೆ. ಶಾಸಕರ ಕೈಗೊಂಬೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳು ಮತ್ತು ಪೊಲೀಸರು ಸಮಾಧಾನಗೊಳಿಸಲು ಪ್ರಯತ್ನಿಸಿದರೂ ಕಾರ್ಯಕರ್ತರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಬಿಇಒ ರೇವಣ್ಣ ಅವರಿಂದ ಹೇಳಿಕೆ ಪಡೆಯಲು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಉಪ್ಪಾರ ಮುಖಂಡರ ಆಕ್ರೋಶ: ಈ ಮಧ್ಯೆ ಬಿಇಒ ಅವರನ್ನು ಬಂಧಿಸ ಲಾಗಿದೆ ಎಂಬ ವದಂತಿ ಹಬ್ಬಿದ್ದರಿಂದ ಉಪ್ಪಾರ ಜನಾಂಗದ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ರೇವಣ್ಣ ಬಿಡುಗಡೆಗೆ ಆಗ್ರಹಿಸಿದರು. ಠಾಣೆ ಮುಂದೆ ಧರಣಿ ಕುಳಿತು ಘೋಷಣೆ ಕೂಗಿದರು. ಸ್ಥಳಕ್ಕೆ ಆಗಮಿಸಿದ ಹೊಳೆನರಸೀಪುರ ಡಿವೈಎಸ್‌ಪಿ ಪ್ರದೀಪ್‌ಕುಮಾರ್ ಪ್ರತಿಭ ಟನಾಕಾರರನ್ನು ಸಮಾಧಾನಗೊಳಿ ಸಿದರು.

ಬಿಇಒ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ವಸ್ತುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರಿಂದ ಮಾಹಿತಿ ಪಡೆಯಲು ಠಾಣೆಗೆ ಕರೆಸಿಕೊಳ್ಳಲಾಗಿದೆ. ವದಂತಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ನಂತರ ಧರಣಿ ನಿರತರು ವಾಪಸ್ಸಾದರು.
ಈ ಘಟನೆ ಖಂಡಿಸಿ ಪ್ರತಿಭಟನೆ ನಡೆ ಸಲಾಗುವುದು ಎಂದು ಉಪ್ಪಾರ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT