ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆಗೆ ಜಮೀನು ಪರಭಾರೆ: ದಾಖಲೆ ಇಲ್ಲ

Last Updated 21 ಸೆಪ್ಟೆಂಬರ್ 2013, 5:59 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ (ಶಿವನಸಮುದ್ರ) ಸರ್ವೆ ನಂ.1ರ  ವ್ಯಾಪ್ತಿಯ ಜಮೀನು ಅರಣ್ಯ ಎಂದು ಘೋಷಣೆಯಾದ ಬಗ್ಗೆ ಯಾವುದೇ ದಾಖಲೆ ಇಲ್ಲ.

ಈ ಜಮೀನನ್ನು ಅರಣ್ಯ ಇಲಾಖೆಗೆ ವಹಿಸಿದ ಬಗ್ಗೆ ಸರ್ಕಾರದ ಅಧಿಸೂಚನೆ ಆದೇಶ ಅರಣ್ಯ ಇಲಾಖೆ ಬಳಿ ಇದ್ದಲ್ಲಿ ತಮ್ಮ ಅವಗಾಹನೆಗೆ ಸಲ್ಲಿಸಬಹುದು ಎಂದು ಉಪವಿಭಾಗಾ­ಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ಜಿಲ್ಲಾಧಿಕಾರಿಗಳಿಗೆ ಗುರುವಾರ ವರದಿ ನೀಡಿದ್ದಾರೆ.

ಸತ್ತೇಗಾಲ ಸರ್ವೆ ನಂ.1ರಲ್ಲಿನ ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಡ­ಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸತ್ತೇಗಾಲ (ಶಿವನಸಮುದ್ರ) ಸರ್ವೆ ನಂ.1ನ್ನು ಕಾಡು ಎಂದಿರುವುದನ್ನು ಸರ್ಕಾರಿ ಖರಾಬು ಎಂದು ದಾಖಲಿಸಿರುವ ಬಗ್ಗೆ ನಡೆದಿರುವ ಕಡತವನ್ನು ವರರಿ ಜೊತೆ ನೀಡಲು ಸೆ.16ರಂದು ಪತ್ರಬರೆದಿದ್ದರು.

ಕೊಳ್ಳೇಗಾಲ ತಾಲ್ಲೂಕು ಪಾಳ್ಯ ಹೋಬಳಿ ಸತ್ತೇಗಾಲ ಗ್ರಾಮವು ಇನಾಂ ಗ್ರಾಮವಾಗಿದ್ದು, ಈ ಗ್ರಾಮದ ಸರ್ವೆ ನಂಬರ್‌ 1ರಲ್ಲಿ ಒಟ್ಟು 1360.25 ಸೆಂಟ್ಸ್‌ ಜಮೀನು ಫೂಟ್‌ ಖರಾಬಿನಲ್ಲಿರುತ್ತದೆ. ಆಕಾರ್‌ ಬಂದ್‌ ಪ್ರಕಾರ ಒಟ್ಟು ವಿಸ್ತೀರ್ಣವು ಬ ಕರಾಬಿನಲ್ಲಿರುತ್ತದೆ.

ಈ ಗ್ರಾಮವು ಇನಾಂ ಗ್ರಾಮ ಆಗಿದ್ದು 1977ರ ಇನಾಂ ರದ್ದಿಯಾತಿ ಕಾಯ್ದೆಯ ಪ್ರಕಾರ ಗ್ರಾಮದ ಎಲ್ಲಾ ಜಮೀನುಗಳು ಸರ್ಕಾರಕ್ಕೆ ನಿಹಿತವಾ­ಗುತ್ತದೆ.

ಅದರಂತೆ ಸರ್ವೆ ನಂ. 1ರ ಜಮೀನು ಸರ್ಕಾರಕ್ಕೆ ನಿಹಿತವಾಗುತ್ತದೆ.
ಆಕಾರ್‌ಬಂದ್‌ ಪ್ರಕಾರ ಸರ್ವೆ ನಂ.1 ಪೋಡಾಗದೇ ಪೂರ್ತಿ ಜಮೀನು ಬ ಖರಾಬಿನಲ್ಲಿದ್ದ ಕಾರಣ ಸದರಿ ಜಮೀನು ಯಾರಿಗೂ ಯಾವುದೇ ರೀತಿಯ ಹಕ್ಕು ಬಾಧ್ಯತೆಗಳಿರುವುದಿಲ್ಲವೆಂದು ಆರ್‌ಟಿಸಿ ಯಲ್ಲಿ ಸರ್ಕಾರಿ ಖರಾಬು (ಫೂಟ್ ಖರಾಬು) ಎಂದು ದಾಖಲಿಸುವಂತೆ ಹಿಂದಿನ ಉಪವಿಭಾಗಾಧಿಕಾರಿ ಸತ್ಯಭಾಮ ಮತ್ತು ಎ.ಬಿ. ಬಸವರಾಜು ಅವರು ಆದೇಶಿಸಿರುತ್ತಾರೆ.

ಸತ್ತೇಗಾಲ ಗ್ರಾಮದ ಸರ್ವೆ ನಂ.1ರ ಜಮೀನು ಆಕಾರ್‌ಬಂದ್‌ನಲ್ಲಿ ಖರಾಬು ಕಲಂನಲ್ಲಿ ನಮೂದಾಗಿರುವುದರಿಂದ ಖರಾಬು ಎಂದು ನಮೂದಿಸಿ ಆಕಾರ್‌­ಬಂದ್‌ ನಂತೆ ವಿಸ್ತೀರ್ಣ ಸರಿಪಡಿಸುವ ಬಗ್ಗೆ ತಹಶೀಲ್ದಾರ್‌ ವರದಿ ಸಲ್ಲಿಸಿದ ಮೇರೆ ವರದಿ ಮತ್ತು ದಾಕಲಾತಿಗಳನ್ನು ಪರಿಶೀಲಿಸಿ ಸರ್ವೆ ನಂಬರ್‌ 1ರ ಆರ್‌ಟಿಸಿ ಯಲ್ಲಿ ಖರಾಬ್‌ ಎಂದು ದಾಖಲಿಸಲು ಆದೇಶಿಸಲಾಗಿದೆ.

ಈ ಸಂಬಂಧಿತ, ಕಡತದೊಡನೆ ವರದಿ ಸಲ್ಲಿಸಿದ ಪ್ರತಿಯನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT