ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಪ್ರದೇಶ ಒತ್ತುವರಿ ಕಠಿಣ ಕ್ರಮಕ್ಕೆ ಒತ್ತಾಯ

Last Updated 7 ಜೂನ್ 2011, 6:40 IST
ಅಕ್ಷರ ಗಾತ್ರ

ಮಡಿಕೇರಿ: ಕಕ್ಕಬೆ, ನೆಲಜಿ, ಪೇರೂರು ಇಗ್ಗುತ್ತಪ್ಪ ದೇವರ ಬನ (ಮಲ್ಮ)ಕ್ಕೆ ಸೇರಿದ ಜಾಗ ಹಾಗೂ ಮೀಸಲು ಅರಣ್ಯ ಪ್ರದೇಶವನ್ನು ಕೆಲವು ಜನರು ಅಕ್ರಮ ವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇವರು ವಿರುದ್ಧ ಕಠಿಣ ಕ್ರಮ ಜರು ಗಿಸಬೇಕೆಂದು ಕಾವೇರಿ ಸೇನೆ ಆಗ್ರಹಿಸಿದೆ.

ನಗರದಲ್ಲಿರುವ ಅರಣ್ಯ ಭವನದ ಎದುರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿದ ನಂತರ ಮಾತ ನಾಡಿದ ಕಾವೇರಿ ಸೇನೆಯ ಪ್ರಧಾನ ಸಂಚಾಲಕ ಕೆ.ಎ. ರವಿಚಂಗಪ್ಪ, `ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ರಸ್ತೆ, ಹೆಲಿಪ್ಯಾಡ್, ಕೆರೆ ನಿರ್ಮಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಿ~ ಎಂದು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿ ದರು.

ಪದಿ ನಾಲ್ಕುನಾಡು ಮೀಸಲು ಅರಣ್ಯ ದಲ್ಲಿ ಅಂದಾಜು ಐದು ಕಿ.ಮೀ. ರಸ್ತೆ ನಿರ್ಮಾಣ ಮಾಡಿರುವುದಲ್ಲದೆ, ಹೆಲಿ ಪ್ಯಾಡ್ ನಿರ್ಮಿಸಲು ಒತ್ತುವರಿದಾರರು ಮುಂದಾಗಿದ್ದಾರೆ. ಸರ್ವೆ ನಂ. 1/1, ಹಾಗೂ 1/2 ರ ದೇವರಕಾಡು ಹಾಗೂ ಸರ್ವೆ ನಂ 300 ರ ಮೀಸಲು ಅರಣ್ಯ ದಲ್ಲಿ ಈ ಅಕ್ರಮ ಎಸಗಲಾಗಿದೆ ಆರೋಪಿಸಿದರು.

ಈ ಸ್ಥಳದಲ್ಲಿ ಕೆರೆ ನಿರ್ಮಿಸಲು ನೂರಾರು ಮರಗಳನ್ನು ಹನನ ಮಾಡ ಲಾಗಿದೆ. ದೇವರಕಾಡಿನಲ್ಲಿ ರಸ್ತೆ ನಿರ್ಮಿಸಲಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್, ಈಗಾಗಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಮಳೆಯ ಕಾರಣ ಈ ಕಾರ್ಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಷ್ಟರಲ್ಲೇ ಸ್ಥಳ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಂಭು ಕಾರ್ಯಪ್ಪ, ಸೋಮಣ್ಣ, ರಘು ಮಾಚಯ್ಯ, ಶೇಷಪ್ಪ ರೈ, ಕಲ್ಕಂದೂರು ಮಾದಪ್ಪ, ಹೊಸಬೀಡು ಪ್ರದೀಪ್, ಮಂದಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT