ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಬಿಟ್ಟು ಕದಲದ ಕಾಡಾನೆಗಳು

Last Updated 6 ಆಗಸ್ಟ್ 2013, 6:58 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಅಣಜೂರು - ಜೇನುಬೈಲು ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೋಮ ವಾರ ಅರಣ್ಯ ಇಲಾಖೆಯ ಸಿಬ್ಬಂದಿ ಅರ ಣ್ಯಕ್ಕೆ ಓಡಿಸುವ ಕಾರ್ಯ  ನಡೆಸಿದರು.

ಭಾನುವಾರ ಹಗಲಿನಲ್ಲಿ ಮುದ್ರೆಮನೆ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಆನೆಗಳ ತಂಡ, ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 234ರ ವಿಲ್ಲುಪುರಂ - ಮಂಗ ಳೂರು ರಸ್ತೆಯನ್ನು ದಾಟಿ, ಸೋಮ ವಾರ ಮುಂಜಾನೆಯ ವೇಳೆಗೆ ಜೇನು ಬೈಲು ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಅರಣ್ಯ ಪ್ರವೇಶಿ ಸಿದವು. ಕಾಡಾನೆಗಳನ್ನು ಕಾಡಿ ಗಟ್ಟಲು ಸಿದ್ಧತೆ ಮಾಡಿಕೊಂಡಿದ್ದ ಅರಣ್ಯ ಇಲಾ ಖೆಯ ಸಿಬ್ಬಂದಿ, ಕಾಡಾನೆಗಳು ಜೇನು ಬೈಲು ಗ್ರಾಮಕ್ಕೆ ಆಗಮಿಸಿರುವ ಮಾಹಿತಿ ತಿಳಿದು, ಬೆಳಗ್ಗೆ ಎಂಟು ಗಂಟೆಗೆ ಜೇನು ಬೈಲು ಗ್ರಾಮದ ಸರ್ಕಾರಿ ಶಾಲೆಯ ಬಳಿ ಯಿಂದಲೇ ಕಾರ್ಯಚರಣೆ ನಡೆಸಿದರು.

ಕಾಡಾನೆಯನ್ನು ಅಣಜೂರು, ಬೆಟ್ಟದ ಮನೆ ಮೂಲಕ ಅವುಗಳು ಬಂದಿದ್ದ ಮಾರ್ಗದ ಮೂಲಕ ಸಕಲೇ ಶಪುರದತ್ತ ಓಡಿಸಲು ಯೋಜನೆ ರೂಪಿಸಿಕೊಳ್ಳ ಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಸಿಡಿಸಿದ ಪಟಾಕಿ ಸದ್ದಿಗೆ ಪ್ರತಿ ಕ್ರಿಯಿಸಿದ ಆನೆಗಳು ಮೊದಲು ಸಿಬ್ಬಂದಿ ಯೋಜನೆ ಯಂತೆಯೇ ಅಣಜೂರು ಭಾಗದತ್ತ ತೆರಳಿದವು. ಆದರೆ ಶಾಲಾ ಮುಂಭಾಗದ ಅರಣ್ಯ ಮುಗಿದು, ಕಾಫಿ ತೋಟ ಸಿಕ್ಕದ ತಕ್ಷಣ ಮತ್ತೊಂದು ಮಾರ್ಗದಲ್ಲಿ ಹಿಂತಿರುಗಿ ಪುನಃ ಅರಣ್ಯ  ಹೊಕ್ಕಿದವು.

ಎರಡನೇ ಬಾರಿಗೆ ಜೇನುಬೈಲು ಗ್ರಾಮದ ಅಕೇಶಿಯಾ ಪ್ಲಾಂಟೇಶನ್ ಬಳಿಯಿಂದ ಅರಣ್ಯ ಹೊಕ್ಕಿದ್ದ ಕಾಡಾನೆ ಗಳನ್ನು ಕಾಡಿನಿಂದ ಓಡಿಸಲಾಯಿತು. ಅರಣ್ಯದ ಸಮೀಪವಿರುವ ಕಾಲು ದಾರಿಯ ಮೂಲಕ ಸಾಗಿಬಂದ ಮೂರೂ ಕಾಡಾನೆಗಳು, ಕಾಫಿ ತೋಟದ ಬೇಲಿ ಬದಿಯಲ್ಲಿಯೇ ಸಾಗಿ, ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ, ಸಿಡಿ ಮದ್ದುಗಳನ್ನು ಸಿಡಿಸುತ್ತಿದ್ದ ಎರಡೂ ಬದಿ ಯನ್ನು ಬಿಟ್ಟು, ಮಧ್ಯ ಭಾಗದಲ್ಲಿಯೇ ಮತ್ತೆ ಅರಣ್ಯಕ್ಕೆ ಆಗಮಿಸಿದವು. ಮೂರು ಬಾರಿ ಜೇನುಬೈಲು ಅರಣ್ಯದಿಂದ ಹೊರ ಡಿಸುವ ಕಾರ್ಯಚರಣೆ ಯಶಸ್ಸಾಗಲಿಲ್ಲ.

ಅರಣ್ಯದ ಮಧ್ಯಭಾಗಕ್ಕೆ ಬಂದು ನಿಂತ ಆನೆಗಳು ಎಷ್ಟೇ ಪ್ರಯತ್ನಿಸಿದರೂ, ಜಾಗಬಿಟ್ಟು ಕದಲಲಿಲ್ಲ. ಇದೇ ವೇಳೆಗೆ ಸುರಿ ಮಳೆ ಸುರಿದಿದ್ದರಿಂದ ಸಂಜೆ ಯವ ರೆಗೂ ಅರಣ್ಯ ಬಿಟ್ಟು ಹೊರ ಡುತ್ತ ವೆಯೇ ಎಂದು ಕಾವಲು ನಡೆಸಿ ದರೂ, ಕಾಡಾನೆಗಳು ಅರಣ್ಯಬಿಟ್ಟು ಹೊರ ಬರಲಿಲ್ಲ.

ಸಂಜೆಯ ನಂತರ ಕಾರ್ಯಾ ಚರಣೆಯನ್ನು ಮುಂದು ವರೆಸಲಾಗಿತ್ತು. ಕಾರ್ಯಾಚರಣೆಗೆ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ರವಿರಾಜ್‌ನಾರಾಯಣ, ಮೂಡಿ ಗೆರೆ ವಲಯ ಅರಣ್ಯಾಧಿಕಾರಿ ಸುದ ರ್ಶನ್, ಆಲ್ದೂರು ವಲಯ ಅರಣ್ಯಾ ಧಿಕಾರಿ ಅಬ್ದುಲ್ ಅಜೀಜ್, ಸಂಚಾರಿ ದಳದ ವಲಯ ಅರಣ್ಯಾ ಧಿಕಾರಿ ಎಸ್. ಎಂ. ಪುರದಪ್ಪ ಸಿಬ್ಬಂದಿ ಗಳಾದ ಏಕಾಂತಪ್ಪ, ಪರಮೇಶ್, ಸಂದೀಪ್,  ಬಸವರಾಜು, ದೀಪಕ್ ಸೇರಿದಂತೆ 60 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT