ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಭೂಮಿ ನೀಡೋದು ಅಸಾಧ್ಯ

Last Updated 4 ಜುಲೈ 2012, 8:20 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಅರಕೆರೆ ಗ್ರಾಮದ ಸರ್ವೇ ನಂ. 104ರ 1600 ಎಕರೆ ಜಮೀನಿನ ಪೈಕಿ 80 ಎಕರೆಯನ್ನು ಮಾತ್ರ ಬಗರ್‌ಹುಕುಂ ಸಾಗುವಳಿದಾರರಿಗೆ ನೀಡಬಹುದು ಎಂದು ಸರ್ಕಾರ ಆದೇಶಿಸಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಅರಣ್ಯ ಪ್ರದೇಶದಲ್ಲಿನ ಭೂಮಿಯನ್ನು ಸಾಗುವಳಿದಾರರಿಗೆ ನೀಡುವ ಪ್ರಶ್ನೆಯೇ ಇಲ್ಲ ಎಂದು ತಹಶೀಲ್ದಾರ್ ಎ.ಎಂ. ಶೈಲಜಾ ಪ್ರಿಯದರ್ಶಿನಿ ಸ್ಪಷ್ಟಪಡಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಎದುರು ಸೋಮವಾರ ಬಗರ್‌ಹುಕುಂ ಸಾಗುವಳಿದಾರರು ನಡೆಸಿದ ಪ್ರತಿಭಟನೆಯಲ್ಲಿ ಮುಖಂಡರಿಂದ ಅರ್ಜಿ ಸ್ವೀಕರಿಸಿ, ಅವರು ಸಾಗುವಳಿದಾರರಿಗೆ ಸರ್ಕಾರದ ಆದೇಶ ಸಾರಾಂಶ ವಿವರಿಸಿದರು. 

ಅರಕೆರೆ ಗ್ರಾಮದ ಸರ್ವೇ ನಂ. 104ರ 1600 ಎಕರೆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು 1920ರ  ಮೈಸೂರು ರಾಜ್ಯದ ಗೆಜೆಟಿಯರ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. 1991ರ ಕರ್ನಾಟಕ ಸರ್ಕಾರ  ಆದೇಶದ ಪ್ರಕಾರ ಈ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಲಾಗಿತ್ತು.

ಆದರೆ, ಮತ್ತೆ ಸರ್ಕಾರದ ಆದೇಶದ ಅನ್ವಯ 1992ರಲ್ಲಿ ಅರಣ್ಯ ಇಲಾಖೆಗೆ ಮರು ವರ್ಗಾವಣೆ ಮಾಡಲಾಯಿತು. ಈ ಕಾರಣಕ್ಕಾಗಿ ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ನೀಡಲು ಸಾಧ್ಯವಾಗದು ಎಂದು ಅವರು ಪ್ರತಿಭಟನಾಕಾರರಿಗೆ ಮಾಹಿತಿ ನೀಡಿದರು.

ಈಚೆಗೆ ಕುಂದೂರು ಗುಡ್ಡದ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದರ ದಾಳಿಯಿಂದ ಹಲವರು ಗಾಯಗೊಂಡಿದ್ದಾರೆ.  ಜಮೀನು ಉಳುಮೆ ಮಾಡಿ, ಹೆಚ್ಚು ಆಹಾರ ಬೆಳೆಯಬೇಕು ಎಂಬ ಕಾರಣಕ್ಕೆ ಪ್ರಾಣಿಗಳು ಬಲಿಯಾಗಬೇಕೆ? ಎಂದು ಶೈಲಜಾ ಪ್ರಶ್ನಿಸಿದರು.

ತಾಲ್ಲೂಕಿನ ಅರಕೆರೆ ಗ್ರಾಮದಿಂದ ಬೆಳಿಗ್ಗೆ ಹೊರಟ ಬಗರ್‌ಹುಕುಂ ಸಾಗುವಳಿದಾರರ ಪಾದಯಾತ್ರೆ ಮಧ್ಯಾಹ್ನ ತಾಲ್ಲೂಕು ಕಚೇರಿ ತಲುಪಿತು.

ನಂತರ, ತಾಲ್ಲೂಕು ಕಚೇರಿ ಎದುರು ನಡೆದ ಸಭೆಯನ್ನುದ್ದೇಶಿಸಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಎಂ. ಸಿದ್ದಪ್ಪ, ಬಿ. ಸಿದ್ದಪ್ಪ, ಎ.ಆರ್. ಚಂದ್ರಶೇಖರಪ್ಪ ಮಾತನಾಡಿದರು.

ಬಗರ್‌ಹುಕುಂ ಸಾಗುವಳಿದಾರರ ಪಾದಯಾತ್ರೆಯಲ್ಲಿ ಎಚ್.ಬಿ. ಅಣ್ಣಪ್ಪ, ರೇವಣಸಿದ್ದಪ್ಪ, ಕುಳಗಟ್ಟೆ ಚಂದ್ರಪ್ಪ, ಕ್ಯಾಸಿನಕೆರೆ ಶೇಖರಪ್ಪ, ಅರಕೆರೆ ಮಧು, ರಮೇಶ್ ತರಗನಹಳ್ಳಿ, ಜಿ.ಎಸ್. ಬಸವರಾಜ್, ಪ್ರೇಮ್‌ಕುಮಾರ್ ಭಂಡಿಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT