ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಸಂಪತ್ತು ಕೃಷಿಯ ಕರುಳಬಳ್ಳಿ: ರಾಜಣ್ಣ

Last Updated 20 ಜುಲೈ 2013, 8:23 IST
ಅಕ್ಷರ ಗಾತ್ರ

ಶಹಾಪುರ: ಬಿಸಿಲಿನ ಹೊಡೆತಕ್ಕೆ ತತ್ತರಿಸಿ ಹೋಗುತ್ತಿರುವ ನಾವು ಸಸಿಗಳನ್ನು ನೆಡುವುದರ ಮೂಲಕ ಭೂಮಿಯನ್ನು ತಂಪಾಗಿಸಬೇಕಾಗಿದೆ. ಪ್ರತಿ ಶಾಲೆಯ ಮಕ್ಕಳು ಒಂದೊಂದು ಸಸಿಯನ್ನು ನೆಟ್ಟು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ        ಆರ್.ರಾಜಣ್ಣ ಹೇಳಿದರು.

ತಾಲ್ಲೂಕಿನ ಖಾನಾಪುರ ಗ್ರಾಮದ  ಕೆರೆ ದಂಡೆಯ ಬಳಿ ಶುಕ್ರವಾರ ಅರಣ್ಯ ಇಲಾಖೆ, ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಾಮ ಪಂಚಾಯಿತಿ, ನಿಸರ್ಗ ವಿವಿದೊದ್ದೇಶ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರುಕರಣದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತ ಮುಖಂಡ ಭಾಸ್ಕರರಾವ ಮುಡಬೂಳ, ಅರಣ್ಯ ಕೃಷಿಯ ಕರುಳ ಬಳ್ಳಿಯಾಗಿದೆ. ಮನುಷ್ಯ ಸ್ವಾರ್ಥ ಸಾಧನೆಗೆ ಮರಗಳನ್ನು ಕಡಿದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಮರಗಳನ್ನು ನೆಟ್ಟು ಹಸಿರೀಕರಣದತ್ತ ದಾಪುಗಾಲು ಹಾಕುವುದು ಅಗತ್ಯವಾಗಿದೆ.

ಸಮೃದ್ದಿಯ ನೀರು ಇರುವ ಕೆರೆ, ಹಳ್ಳ, ಕಾಲುವೆ ಪಕ್ಕದಲ್ಲಿ ಸಸಿಗಳನ್ನು ನೆಡುವುದು ತುಂಬಾ ಉಪಯುಕ್ತವಾಗುತ್ತದೆ ಎಂದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಿಂಗರಾವ ಮುತಾಲಿಕ್, ಅರಣ್ಯ ಅಧಿಕಾರಿ ಬಸವರಾಜ ಡಾಂಗೆ, ಮಹ್ಮದ ಅಸದ್,  ಎ.ವೈ.ಪದ್ಮಾಕರ್, ಮಲ್ಲಯ್ಯ ಪೊಲಂಪಲ್ಲಿ, ಕೃಷ್ಣಾ ಸುಬೇದಾರ, ಗ್ರಾಪಂ ಅಧ್ಯಕ್ಷ ದೌಲತ್ ಹುಸೇನಿ, ರಾಜಕುಮಾರ ಹೊಸ್ಮನಿ, ಮೋನಪ್ಪ ಅನವಾರ, ತಾಪಂ ಸದಸ್ಯೆ ಯಂಕಮ್ಮ ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT