ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಭಾವಿ ಕುಟುಂಬಕ್ಕೆ ₨ 10 ಲಕ್ಷ

Last Updated 4 ಡಿಸೆಂಬರ್ 2013, 8:32 IST
ಅಕ್ಷರ ಗಾತ್ರ

ಕಂಕಣವಾಡಿ (ರಾಯಬಾಗ): ಕಬ್ಬಿಗೆ ಸೂಕ್ತ ಬೆಲೆಗಾಗಿ ಆಗ್ರಹಿಸಿ, ಆತ್ಮಹತ್ಯೆ ಮಾಡಿಕೊಂಡ ರೈತ ವಿಠ್ಠಲ ಅರಭಾವಿ ಅವರ ಕುಟುಂಬಕ್ಕೆ ಮಂಗಳವಾರ ಇಲ್ಲಿ ₨ 10 ಲಕ್ಷ ಪರಿಹಾರ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ವಿಠ್ಠಲ ಅವರ ಪತ್ನಿಯರಾದ ಸಿದ್ಧವ್ವ  ಮತ್ತು ಮುತ್ತವ್ವ ಹಾಗೂ ಮಕ್ಕಳಾದ ಭೀಮಪ್ಪ ಮತ್ತು ರಾಘು ಅವರಿಗೆ ಚೆಕ್‌ ನೀಡಿದರು.

‘ವಿಠ್ಠಲ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರ ಎಲ್ಲಾ ವಿಧದ ಸಹಾಯ, ಸೌಲಭ್ಯ ನೀಡಲಿದ್ದು,  ಗ್ರಾಮ ಪಂಚಾಯ್ತಿಯಿಂದ ಮನೆ ನಿರ್ಮಿಸಿ ಕೊಡುವ ಕುರಿತು ಪರಿಶೀಲಿಸ ಲಾಗುತ್ತಿದೆ. ಕುಟುಂಬದಲ್ಲಿ ಒಬ್ಬರಿಗೆ ನೌಕರಿ ಕೊಡುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತೂ ಪರಿಶೀಲಿಸ ಲಾಗುವುದು. ಚೆಕ್ಕನ್ನು ಜಂಟಿ ಖಾತೆಗೆ ನೀಡಲಾಗಿದ್ದು, ಹಣದ ಸದು ಪಯೋಗ ಮಾಡಿಕೊಳ್ಳಿರಿ’ ಎಂದು ಜಾರಕಿಹೊಳಿ ಅವರು ವಿಠ್ಠಲ ಅರಭಾವಿ ಕುಟುಂಬ ದವರಿಗೆ ಚೆಕ್‌ ನೀಡಿದ ನಂತರ ಹೇಳಿದರು.


ನೌಕರಿಗೆ ಆಗ್ರಹ: ಮೃತ ರೈತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡುವಂತೆ ಗ್ರಾಮದ ಮುಖಂಡ ಅರ್ಜುನ ನಾಯ್ಕವಾಡಿ ಅವರು ಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಎನ್‌.ಜಯರಾಂ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಡಾ.ರುದ್ರೇಶ  ಘಾಳಿ, ತಹಶೀಲದಾರ ಶಿವಾನಂದ ಸಾಗರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಗೌಡ ಪಾಟೀಲ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಅರ್ಜುನ ನಾಯ್ಕವಾಡಿ, ರೈತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಕೆಂಪಣ್ಣ ಮಳವಾಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT