ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ನೆನಪು ನಾಳೆ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಮೈಸೂರು: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಸಾಧನೆಗಳನ್ನು ಸ್ಮರಿಸಲು ಜೂನ್ 6ರಂದು ~ಸಂಸದರ ಅಂಗಳದಲ್ಲಿ ಅರಸು ನೆನಪು~ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಚ್. ವಿಶ್ವನಾಥ್, ~ಭೂ ಸುಧಾರಣೆ ಕಾಯ್ದೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಅರಸು,  ಬಡವರು ಮತ್ತು ಕಾರ್ಮಿಕ ವರ್ಗದವರಿಗೆ ನ್ಯಾಯ ಒದಗಿಸಿದ್ದಾರೆ. ಪಶ್ಚಿಮ ಬಂಗಾಳದಂತಹ ಕಮ್ಯುನಿಸ್ಟ್ ಆಡಳಿತವಿದ್ದ ರಾಜ್ಯದಲ್ಲಿಯೇ ಇಂತಹ ಕ್ರಾಂತಿ ಸಾಧ್ಯವಾಗಿರಲಿಲ್ಲ. ಆದರೆ ಅದನ್ನು ಅರಸು ಮಾಡಿ ತೋರಿಸಿದರು. ರಾಜ್ಯದ ಅಭ್ಯುದಯಕ್ಕೆ ಅರಸು ಕೊಡುಗೆ ಅನನ್ಯ~ ಎಂದರು.

~ಅರಸು ಅವರೊಂದಿಗೆ ಕಾರ್ಯನಿರ್ವಹಿಸಿದ ಸಚಿವರು, ಒಡನಾಡಿಗಳು, ರಾಜ್ಯದ ಬುದ್ಧಿಜೀವಿಗಳು, ಪತ್ರಕರ್ತರು, ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳು  ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ದಿನಗಳಲ್ಲಿ ಭೂನಿಯಂತ್ರಣ, ನಗರ ಮಿತಿ, ಕೃಷಿ ಭೂಮಿ ಕುರಿತ ವಿಷಯಗಳ ಕುರಿತು ಚಿಂತನೆ ನಡೆಯಲಿದೆ.

ಭಾಗವಹಿಸುವರು ತಮ್ಮ ಅನಿಸಿಕೆ, ಅನುಭವಗಳನ್ನು ಬರವಣಿಗೆ ಅಥವಾ ಮಾತುಗಳ ಮೂಲಕ ವ್ಯಕ್ತಪಡಿಸಲು ಅವಕಾಶವಿದೆ~ ಎಂದು ಹೇಳಿದರು.

~ಈ ವಿಚಾರ ವಿನಿಯಮ ಕಾರ್ಯಕ್ರಮದಲ್ಲಿ ಸಂವಾದಕ್ಕೇ ಹೆಚ್ಚು  ಒತ್ತು ಕೊಡಲಾಗುವುದು. ಯಾರೊಬ್ಬರನ್ನೂ ವಿಶೇಷ ಅತಿಥಿಯಾಗಿ, ಔಪಚಾರಿಕ ಅಧ್ಯಕ್ಷರಾಗಿ ಆಹ್ವಾನಿಸಲಾಗಿಲ್ಲ. ವಿಶಾಲ ದೃಷ್ಟಿಯ ಸಭ್ಯ ಚಿಂತಕರೇ ಗೋಷ್ಠಿಯ ಕಾರ್ಯನಿರ್ವಾಹಕರು. ಅರಸು ಅವರ ಅನುಪಮ ಸಮಾಜಸೇವೆಯನ್ನು ಸ್ಮರಿಸುವುದೇ  ಈ ಕಾರ್ಯಕ್ರಮದ ಉದ್ದೇಶ. ಸೋಮವಾರ (ಜೂ 6) ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ಮೈಸೂರು ವಿಶ್ವವಿದ್ಯಾಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ (ಹುಣಸೂರು ರಸ್ತೆ) ಕಾರ್ಯಕ್ರಮ ನಡೆಯಲಿದೆ~ ಎಂದು ವಿಶ್ವನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT