ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಬರೆ ಬಟ್ಟೆ- ಭಕ್ತರ ಮುಜುಗರ

Last Updated 21 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಕಾರವಾರ: ಕುಮಟಾ ತಾಲ್ಲೂಕಿನ ಗೋಕರ್ಣ ಪೌರಾಣಿಕ, ಧಾರ್ಮಿಕ ಪುಣ್ಯಕ್ಷೇತ್ರವಾಗಿ ಎಷ್ಟು ಮಹತ್ವ ಪಡೆ ದಿದೆಯೋ ಪ್ರವಾಸಿ ಕ್ಷೇತ್ರವಾಗಿಯೂ ಇತ್ತೀಚಿನ ದಿನಗಳಲ್ಲಿ ಅಷ್ಟೇ ಮಹತ್ವ ಪಡೆಯುತ್ತಿದೆ. ಕುಡ್ಲೆ, ಓಂ, ಪ್ಯಾರಾ ಡೈಸ್, ಹಾಫ್‌ಮೂನ್ ಬೀಚ್‌ಗಳಿಗೆ ಬರುವ ದೇಶಿ-ವಿದೇಶಿ ಪ್ರವಾಸಿಗರಿಗೆ ಇದಕ್ಕೆ ಸಾಕ್ಷಿ.

ಧಾರ್ಮಿಕ ಕ್ಷೇತ್ರವಾಗಿರುವ ಗೋಕರ್ಣದಲ್ಲಿ ಸೋಮವಾರ ಶಿವರಾತ್ರಿ ಪೂಜೆಗೆಂದು ಬಂದ ಭಕ್ತರ ಸಮೂಹ ಒಂದೆಡೆಯಾದರೆ. ಅರೆಬರೆ ಬಟ್ಟೆ ಧರಿಸಿ ಭಕ್ತರ ಮಧ್ಯೆ ನುಸುಳಿ ಹೋಗುತ್ತಿರುವ ವಿದೇಶಿ ಪ್ರವಾಸಿಗ ದಂಡು ಇನ್ನೊಂದೆಡೆ. ತನು-ಮನ ಶುದ್ಧಿಯೊಂದಿಗೆ ಮಹಾ ಬಲೇಶ್ವರನ ದರ್ಶನಕ್ಕೆ ಸಾಲಿನಲ್ಲಿ ನಿಂತ ಭಕ್ತರ ಸನೀಹದಿಂದ ಅರೆಬರೆ ಬಟ್ಟೆ ಧರಿಸಿದ ವಿದೇಶಿಗರು ಹಾದು ಹೋಗುತ್ತಿದ್ದರಿಂದ ಭಕ್ತರು ಮುಜುಗರಪಟ್ಟರು.
ದೇವಸ್ಥಾನದ ಆವರಣದಲ್ಲಿ ಭಕ್ತರ ಸಮೂಹ ನೋಡಿ ವಿದೇಶಿ ಪ್ರವಾಸಿ ಗರೂ ಆಶ್ಚರ್ಯಪಟ್ಟರು.

ಕೆಲ ವಿದೇಶಿ ಗರು ಭಕ್ತರಿಗೆ ಹಾಯ್...ಹಾಯ್... ಎಂದು ಹೇಳುತ್ತ ಮುಂದೆ ಸಾಗಿದರೆ ಮತ್ತೆ ಕೆಲವರು ದೇವರ ದರ್ಶನಕ್ಕೆ ಕಾದಿದ್ದವರ ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿದ್ದರು. ಗಾಂಧಿ ಟೋಪಿ ಧರಿಸಿ ದವರಿಂದ ಟೋಪಿಯನ್ನು ಪಡೆದ ವಿದೇಶಿಗರು ಅದನ್ನು ಹಾಕಿಕೊಂಡು ಅವರ ಜೊತೆ ನಿಂತು ಪೋಟೊ ತೆಗೆದು ಕೊಳ್ಳುತ್ತಿರುವ ದೃಶ್ಯ ಸಾಮಾನ್ಯ ವಾಗಿತ್ತು.

ರಥಬೀದಿಯಲ್ಲಿ ಬಂದ ಆನೆ ನೋಡಿದ ಭಕ್ತರು ಬಾಳೆಹಣ್ಣು, ಕಾಣಿಕೆ ಗಳನ್ನು ಸಮರ್ಪಿಸಿದರು. ಇದನ್ನು ನೋಡಿದ ವಿದೇಶಿಗರೂ ಬಾಳೆಹಣ್ಣು, ಕಾಣಿಕೆ ನೀಡಿ ಅನೆಯಿಂದ ಆಶೀರ್ವಾದ ಪಡೆದರು.

 `ಗೋಕರ್ಣದಲ್ಲಿ ಈ ಬಾರಿ ತುಂಬಾ ಜನ ಸಮೂಹ ಇದೆ. 22 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಹಿಂದೆಂದೂ ಇಷ್ಟು ಜನಸಂಖ್ಯೆ ನೋಡಿರಲಿಲ್ಲ~  ಎಂದು ಹಾಲಂಡ್ ಪ್ರವಾಸಿ ಕೃಷ್ಣ (ಮೂಲ ಹೆಸರು ಹ್ಯಾರಿ) `ಪ್ರಜಾ ವಾಣಿ~ಗೆ ತಿಳಿಸಿದರು.

`ಧಾರ್ಮಿಕ ಕ್ಷೇತ್ರ ಎಂದರೆ ಆಧ್ಯಾ ತ್ಮದ ಭಾವನೆಯಿಂದ ಬರುವವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇಂತಹ ಸ್ಥಳಗಳಲ್ಲಿ ವಿದೇಶಿ ಪ್ರವಾಸಿಗರು ಅಸಹ್ಯ ಪಡುವ ರೀತಿಯಲ್ಲಿ ಬಟ್ಟೆಯನ್ನುಟ್ಟು ಕೊಂಡು ಬರುವುದು ಧಾರ್ಮಿಕ ಪುಣ್ಯ ಕ್ಷೇತ್ರಕ್ಕೆ ಶೋಭೆ ತರುವುದಿಲ್ಲ. ಕಾಲ ಗತಿಸಿದಂತೆ ಇಲ್ಲಿ ದೈವಿ ಭಾವನೆಯಿಂದ ಬರುವವರೇ ಕಡಿಮೆ ಆಗುತ್ತಾರೆ~ ಎಂದು ಶಿವಪೂಜೆಗೆ ಹಾವೇರಿಯಿಂದ ಬಂದ ಶಂಕ್ರಪ್ಪ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT