ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕಾವತಿ ನಾಲೆ ಶುದ್ಧೀಕರಣಕ್ಕೆ ಚಿಂತನೆ

Last Updated 24 ಸೆಪ್ಟೆಂಬರ್ 2013, 9:59 IST
ಅಕ್ಷರ ಗಾತ್ರ

ರಾಮನಗರ:  ‘ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಮೂರು- ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗಿ ರುವ ಅರ್ಕಾವತಿ ನಾಲೆಯನ್ನು ಶುದ್ಧೀಕರಿಸಿ, ಅದನ್ನು ಪ್ರವಾಸಿ ತಾಣ ವಾಗಿಸುವ ಚಿಂತನೆ ಇದ್ದು, ಈ ಬಗ್ಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿ ಸುವುದಾಗಿ’ ಜಿಲ್ಲಾಧಿಕಾರಿ ವಿ.ಶ್ರೀರಾಮ ರೆಡ್ಡಿ ಅವರು ಸಚಿವ ವಿನಯ್‌ ಕುಮಾರ್‌ ಸೊರಕೆ ಅವರಿಗೆ ತಿಳಿಸಿದರು.

ಪ್ರಾಧಿಕಾರದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ದಿ ಕಾರ್ಯಗಳ ಕುರಿತು ಸಚಿವರು ಸೋಮವಾರ ಕೈಗೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

‘ನರ್ಮದಾ ನದಿ ಶುದ್ಧೀಕರಣ ಮಾದರಿಯಲ್ಲಿ ಅರ್ಕಾವತಿ ನದಿಯನ್ನು ಶುದ್ಧೀಕರಿಸುವ ಯೋಚನೆ ಇದೆ. ಬೈರಮಗಂಲ ಜಲಾಶಯಕ್ಕೆ ಬೆಂಗ ಳೂರಿನಿಂದ ವೃಷಭಾವತಿ ನದಿ ಮೂಲಕ ಹರಿದು ಬರುವ ಕಲುಷಿತ ನೀರನ್ನು ಶುದ್ಧೀಕರಿಸಿ, ರಾಮನಗರದ ಅರ್ಕಾವತಿ ನಾಲೆಗೆ ಅದನ್ನು ಸರಬರಾಜು ಮಾಡ ಬಹುದು.  ಇಲ್ಲಿ ಅತ್ಯಾಧುನಿಕ ರೀತಿಯಲ್ಲಿ ಉದ್ಯಾನ, ಕಾರಂಜಿ, ಬೋಟಿಂಗ್‌ ಮೊದಲಾದ ಸೌಲಭ್ಯವನ್ನು ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡ ಬಹುದು’ ಎಂದು ಅವರು ವಿವರಿಸಿದರು.

ಆರ್‌ಸಿಯುಡಿಎ ಪ್ರಭಾರಿ ಆಯುಕ್ತ ಜಯಮಾಧವ ಮಾತನಾಡಿ, ಪ್ರಾಧಿ ಕಾರವು ಇದುವರೆಗೂ ಮೂರು ಬಡಾವಣೆ ನಿರ್ಮಿಸಿದ್ದು, 1,837 ನಿವೇಶನಗಳನ್ನು ಒದಗಿಸಿದೆ. 1,700 ನಿವೇಶನಗಳು ನೋಂದಣಿಗೊಂಡಿದ್ದು, ಪ್ರಾಧಿಕಾರಕ್ಕೆ ಇದುವರೆಗೂ ರೂ 63.40 ಕೋಟಿ ಆದಾಯ ಬಂದಿದೆ. ಇದರಲ್ಲಿ 62.98 ಕೋಟಿ ಖರ್ಚಾಗಿದ್ದು, 42 ಲಕ್ಷ ಅನುದಾನ ಉಳಿದಿದೆ ಎಂದು ಮಾಹಿತಿ ನೀಡಿದರು.

ಪ್ರಾಧಿಕಾರದ ವ್ಯಾಪ್ತಿಯಲ್ಲಿ 2 ಅನಧಿಕೃತ ಬಡಾವಣೆಗಳು ನಿರ್ಮಾಣ ಗೊಳ್ಳುತ್ತಿದ್ದು, ಇವುಗಳ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಆಗ ಪ್ರತಿಕ್ರಿಯಿಸಿದ ಸಚಿವರು ಈ ಅನಧಿಕೃತ ಬಡಾವಣೆಗಳು ತಲೆ ಎತ್ತದಂತೆ ಕ್ರಮ ವಹಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT