ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ಸಲ್ಲಿಕೆಗೆ ‘ಎಸ್ಕಾಂ’ಗೆ ಮತ್ತಷ್ಟು ಕಾಲಾವಕಾಶ

ವಿದ್ಯುತ್‌ ದರ ಪರಿಷ್ಕರಣೆ
Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಸರಬರಾಜು ಕಂಪೆನಿಗಳ (ಎಸ್ಕಾಂ) ಕೋರಿಕೆಯನ್ನು ಮನ್ನಿ­ಸಿರುವ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ), ವಿದ್ಯುತ್‌ ದರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಗಡುವನ್ನು ಇದೇ 13ರವರೆಗೆ ವಿಸ್ತರಿಸಿದೆ. ನಿಯಮ ಪ್ರಕಾರ ಎಲ್ಲ ಎಸ್ಕಾಂಗಳು, ವಿದ್ಯುತ್‌ ದರ ಪರಿಷ್ಕರಣೆಯ ಅರ್ಜಿಗಳನ್ನು ಮುಂದಿನ ಹಣಕಾಸು ವರ್ಷ ಆರಂಭವಾಗುವ 120 ದಿನಗಳ ಮುನ್ನವೇ (ಅಂದರೆ ಡಿ. 1ರ ಒಳಗೆ) ಸಲ್ಲಿಸಬೇಕು. ಈ ಬಗ್ಗೆ ಆಯೋಗವು ಅಕ್ಟೋಬರ್‌ 30ರಂದು ಎಸ್ಕಾಂಗಳಿಗೆ ಪತ್ರ ಬರೆದಿತ್ತು.

ಆದರೆ, ಎಸ್ಕಾಂಗಳು ಎರಡು ವಾರ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್‌  ಸಹಕಾರ ಸಂಘ 31 ದಿನಗಳ ಸಮಯ ಕೇಳಿದ್ದವು.  ಈ ಹಿನ್ನೆಲೆಯಲ್ಲಿ ಎಸ್ಕಾಂ­ಗಳಿಗೆ ಡಿ. 13 ಹಾಗೂ ಹುಕ್ಕೇರಿ ಸಹ­ಕಾರ ಸಂಸ್ಥೆಗೆ ಡಿ.31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಎನ್‌. ಶ್ರೀರಾಮನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT