ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜೆಂಟಿನಾ ರೈಲು ಅಪಘಾತ: 49 ಸಾವು

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬ್ಯೂನಸ್ ಐರಿಸ್ (ಎಎಫ್‌ಪಿ): ಅರ್ಜೆಂಟಿನಾ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಪ್ರಯಾಣಿಕರ ರೈಲೊಂದು ಬುಧವಾರ ರೈಲ್ವೆ ನಿಲ್ದಾಣದ  ಪ್ಲಾಟ್‌ಫಾರಂನ ಅಂತ್ಯದಲ್ಲಿ ಗೋಡೆಗೆ ಅಪ್ಪಳಿಸಿ ಕನಿಷ್ಠ 49 ಜನ ಸತ್ತಿದ್ದು, 675ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನಗರದ ಹೊರವಲಯದ ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದ್ದು ರೈಲಿನ ಬ್ರೇಕ್ ವಿಫಲವಾಯಿತು ಎನ್ನಲಾಗಿದೆ. ರೈಲು ಜನರಿಂದ ತುಂಬಿ ತುಳುಕುತ್ತ್ದ್ದಿದರಿಂದ ಅಪಘಾತದ ಪರಿಣಾಮ ಮತ್ತಷ್ಟು ಭೀಕರವಾಯಿತು.

ಜನರ ಚೀರಾಟ, ತಳ್ಳಾಟ, ಚೆಲ್ಲಾಡಿದ ದೇಹಗಳು, ಹರಿದ ರಕ್ತದಿಂದಾಗಿ ಅಲ್ಲಿನ ಸನ್ನಿವೇಶ ಹೃದಯವಿದ್ರಾವಕವಾಗಿತ್ತು ಎಂದು ಪ್ರಯಾಣಿಕನೊಬ್ಬ ಹೇಳಿದ್ದಾನೆ. ಈ ದುರಂತದ ಹಿನ್ನೆಲೆಯಲ್ಲಿ ಸರ್ಕಾರ ಎರಡು ದಿನಗಳ ಶೋಕಾಚರಣೆಯ ಘೋಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT