ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥನೀತಿ

Last Updated 11 ಜೂನ್ 2011, 19:30 IST
ಅಕ್ಷರ ಗಾತ್ರ

ಚಿಂತಾಮಣಿಯ ಕೃಷಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಹ.ಸೋಮಶೇಖರ ಅವರು ಅರ್ಥಶಾಸ್ತ್ರದ ಕುರಿತ ತಮ್ಮ ಬಿಡಿ ಲೇಖನಗಳ ಮೂಲಕ ಪತ್ರಿಕೆಯ ಓದುಗರಿಗೆ ಪರಿಚಿತರು.

`ಹಿಂದುಳಿದ ವರ್ಗಗಳ ಹೋರಾಟ ಮತ್ತು ತಾತ್ವಿಕ ಚಿಂತನೆ~, `ಲೋಹಿಯಾ~ ಹಾಗೂ `ಅರ್ಥ ಸಂದರ್ಭ~ ಅವರ ಈವರೆಗಿನ ಕೃತಿಗಳು. ಅವರ ಅರ್ಥ ಚಿಂತನೆಯ ಮುಂದುವರಿದ ಕೃತಿ, ಇದೀಗ ಪ್ರಕಟಗೊಂಡಿರುವ `ಅರ್ಥನೀತಿ~.

ಅಧ್ಯಯನದ ಅನುಕೂಲಕ್ಕಾಗಿ ಇಲ್ಲಿನ ಮೂವತ್ತುಮೂರು ಲೇಖನಗಳು ಮೂರು ವಿಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ವಿಭಾಗದಲ್ಲಿ ಆಧುನಿಕ ಭಾರತದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಲೇಖನಗಳಿವೆ. ಎರಡನೇ ಭಾಗದ ಬರಹಗಳು ವಿಶ್ವ ಆರ್ಥಿಕ ನೀತಿ-ಚಟುವಟಿಕೆಗಳಿಗೆ ಮೀಸಲು. ಮೂರನೇ ಭಾಗದ ಲೇಖನಗಳು ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳ ಹಿನ್ನೆಲೆಯಲ್ಲಿ ಮೂಡಿಬಂದಿವೆ.

ಸೋಮಶೇಖರ ಅವರ ಬರಹಗಳು ಆಧುನಿಕ ಅರ್ಥ ಪ್ರಪಂಚವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಈ ನಿಟ್ಟಿನಲ್ಲಿ ಅವರು ಸರಳವಾದ ಭಾಷೆಯನ್ನು ರೂಢಿಸಿಕೊಂಡಿದ್ದು, ಸಾಕಷ್ಟು ಮಾಹಿತಿಯೊಂದಿಗೆ ತಮ್ಮ ವಿಚಾರಗಳನ್ನು ಆಕರ್ಷಕಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಅರ್ಥನೀತಿ
ಲೇ: ಡಾ. ಹ. ಸೋಮಶೇಖರ;
ಪು: 140; ಬೆ: ರೂ.140;
ಪ್ರ: ಲೋಹಿಯಾ ಪ್ರಕಾಶನ, `ಕ್ಷಿತಿಜ~, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ- 583 103.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT