ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅರ್ಹರಿಗೆ ಗೌರವ ದೊರೆತರೆ ಪ್ರಶಸ್ತಿ ಮೌಲ್ಯ ಹೆಚ್ಚಳ'

Last Updated 22 ಏಪ್ರಿಲ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: `ಅರ್ಹರಿಗೆ ಪ್ರಶಸ್ತಿಗಳು ದೊರೆತರೆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯಪಟ್ಟರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ವತಿಯಿಂದ ನಗರದಲ್ಲಿ ಈಚೆಗೆ ನಡೆದ ಅಭಿನಂದನಾ ಸಮಾರಂಭ ಮತ್ತು ಶಿಶುನಾಳ ಶರೀಫ್ ಅವರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾರಾಯಣರಾವ್‌ರಾವ್ ಮಾನೆ ಅವರಿಗೆ `ಸಂತ ಶಿಶುನಾಳ ಪ್ರಶಸ್ತಿ' ಮತ್ತು ಗಾಯಕಿ ಬಿ.ಕೆ.ಸುಮಿತ್ರ ಅವರಿಗೆ `ನಾಡೋಜ' ಪ್ರಶಸ್ತಿ ಲಭಿಸಿದೆ. ಇದು ಆ ಪ್ರಶಸ್ತಿಗಳಿಗೂ ಭೂಷಣ, ಪ್ರಶಸ್ತಿ ಪಡೆದವರಿಗೂ ಘನತೆ ತರುತ್ತದೆ. ಅರ್ಹ ಪ್ರತಿಭಾವಂತರಿಗೆ ಈ ಪ್ರಶಸ್ತಿಗಳು ಸಂದಾಯವಾಗಿವೆ ಎಂದರು.

ಸುಗಮ ಸಂಗೀತವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ ನವೆಂಬರ್‌ನಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೋದಯ ಕವಿಗಳ ಕಾವ್ಯಗಳ ಗಾಯನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಕರ್ನಾಟಕ ಸುಗಮ ಸಂಗೀತದಲ್ಲಿ ಸಂತೋಷದ ಹಾಡುಗಳನ್ನು ದುಃಖದ ಧಾಟಿಯಲ್ಲಿ ದುಃಖದ ಹಾಡುಗಳನ್ನು ಸಂತೋಷದ ಧಾಟಿಯಲ್ಲಿ ಹಾಡುವುದರ ಕುರಿತು ನನಗೆ ಅಸಮಾಧಾನವಿದೆ ಎಂದರು.

ಜನಪದ ಸಂಗೀತಕ್ಕೆ ನಾದದಂತಹ ಒಂದು ಭಾಷೆ ಇದೆ. ಆದ್ದರಿಂದ, ಸುಗಮ ಸಂಗೀತದಲ್ಲಿ ಕೂಡ ಸ್ಥಿರ ಭಾವವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಾಯಕಾರದ ನಾರಾಯಣರಾವ್ ಮಾನೆ, ಬಿ.ಕೆ.ಸುಮಿತ್ರ, ಕೊಳಲು ವಾದಕ ಸುಂದರಮೂರ್ತಿ, ಲಯವಾದ್ಯ ಕಲಾವಿದ ಬಾಲಸುಬ್ರಹ್ಮಣ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT