ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅರ್ಹರಿಗೆ ಯೋಜನೆ ಲಾಭ ದೊರಕಲಿ'

Last Updated 3 ಜುಲೈ 2013, 5:23 IST
ಅಕ್ಷರ ಗಾತ್ರ

ಕೂಡ್ಲಿಗಿ: ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿ ಗಳು ಇನ್ನೂ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಶಾಸಕ ಬಿ.ನಾಗೇಂದ್ರ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ  ನಡೆದ ಪ್ರಗತಿ ಪರಿಶೀಲಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

ಕಳೆದ ಐದು ವರ್ಷಗಳ್ಲ್ಲಲಿ ಸಾಧಿಸಿದ ಅಭಿವೃದ್ಧಿಗಿಂತ ಎರಡು ಪಟ್ಟು ಅಭಿವೃದ್ಧಿಯನ್ನು ಕ್ಷೇತ್ರದ್ಲ್ಲಲಿ ಸಾಧಿಸ ಬೇಕಾಗಿದೆ. ಅದಕ್ಕೆ ಬೇಕಾದ ಅನು ದಾನ, ಸೌಲಭ್ಯವನ್ನು ಒದಗಿಸಲಾ ಗುವುದು ಎಂದರು.

ಗ್ರಾಮೀಣ ಪ್ರದೇಶದ್ಲ್ಲಲಿ ಕುಡಿಯುವ ನೀರಿನ ಪೈಪ್‌ಗಳ ಪಕ್ಕದಲ್ಲಿ ಗುಂಡಿಗಳು ಉಂಟಾಗಿ ಅಥವಾ ಚರಂಡಿ ನೀರು ಪೈಪ್‌ಗಳಲ್ಲಿ ಸೇರಿಕೊಂಡು ಕುಡಿಯುವ ನೀರು ಕಲುಷಿತಗೊಂಡು, ಜನರಲ್ಲಿ ವಾಂತಿ, ಭೇದಿ ಪ್ರಕರಣಗಳು ಕಂಡು ಬರುತ್ತಿವೆ. ಅಶುದ್ಧ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು. ಕ್ಷೇತ್ರದ್ಲ್ಲಲಿನ ಬಡಜನರಿಗೆ ಮಂಜೂರಾದ ಆಶ್ರಯ ಮನಗೆಳು ಅರ್ಹರಿಗೆ ಲಭಿಸಬೇಕು ಎಂದು ಹೇಳಿದರು.

ತಾಲ್ಲೂಕು ಆಡಳಿತದ್ಲ್ಲಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಯಾರಾ ದರೂ ಆಸಕ್ತರು ಇ್ಲ್ಲಲಿ ಕಾರ್ಯ ನಿರ್ವಹಿ ಸಲು ಬರುವಂತಿದ್ದರೆ, ಅವರನ್ನು ಇ್ಲ್ಲಲಿಗೆ ವರ್ಗಾವಣೆ ಮಾಡಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

2 ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ನೆನೆಗುದಿಗೆ ಬಿದ್ದಿದ್ದು, ಈಗಾಗಲೇ ಮುಗಿದಿರುವ ಕಾಮಗಾರಿ ಗಳನ್ನು ಸ್ಥಳ ಪರಿಶೀಲನೆ ನಡೆಸಬೇಕು. ಬಾಕಿ ಇರುವ 3 ಕೋಟಿ ರೂಪಾಯಿ ಬಿಡುಗಡೆ ಮಾಡಿಸಿ, ನೂತನ ಕ್ರಿಯಾ ಯೋಜನೆಯನ್ನು ರೂಪಿಸಿ, ಜನರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚಿಸಿದರು.

ಶಿಶು ಅಭಿವೃದ್ಧಿ, ಶಿಕ್ಷಣ, ನಾಗರಿಕ ಸರಬರಾಜು, ಕೃಷಿ, ವಿದ್ಯುತ್, ಸಾರಿಗೆ ಸೇರಿದಂತೆ ಅನೇಕ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಭಾರಿ ಕಾರ್ಯನಿರ್ವಾಹಣಾ ಧಿಕಾರಿ ಸೈಯದ್ ಹಜರತ್ ಷಾಹ, ತಹಶೀಲ್ದಾರ್ ಜವರೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT