ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕರಣಕ್ಕೆ ಕುಟೀರ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಿಮ್ಮ ಮನೆಯನ್ನು ಸಾಂಪ್ರದಾಯಿಕ ವಸ್ತುಗಳಿಂದ ಅಲಂಕರಿಸಬೇಕು ಎಂಬ ಆಸೆಯಿದೆಯೇ? ಹಾಗಿದ್ದರೆ ನೀವು ಕ್ರಾಫ್ಟ್ ಕೌನ್ಸಿಲ್ ಆಯೋಜಿಸಿರುವ ಕುಟೀರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಲೇಬೇಕು.

ಏನಿದೆ ಕುಟೀರದಲ್ಲಿ..
ಅತ್ಯಾಕರ್ಷಕ ಕಿನ್ನಾಳ ಗೊಂಬೆಗಳು, ಬಾಳೆ ದಿಂಡಿನಿಂದ ಮಾಡಿರುವ ಮ್ಯಾಟ್‌ಗಳು, ಬ್ಯಾಗ್‌ಗಳು, ಚನ್ನಪಟ್ಟಣದ ಗೊಂಬೆಗಳು, ಟೆರ್ರಾಕೋಟ ಆಭರಣಗಳು, ವಾರಣಾಸಿಯ ಕಲಾವಿದರು ತಯಾರು ಮಾಡಿರುವ ವಿವಿಧ ರೀತಿಯ ಗೊಂಬೆಗಳು, ದೆಹಲಿಯ ಕ್ರಿಸ್ಟಲ್ ಕಲಾಕೃತಿಗಳು, ಶಂಖ ಚಿಪ್ಪಿನಿಂದ ಮಾಡಿರುವ ಹೂಗಳು, ವಿವಿಧ ರೀತಿಯ ಅಲಂಕಾರಿಕ ವಸ್ತುಗಳು, ಗುಜರಾತಿನ ಸಾಂಪ್ರದಾಯಿಕ ಸಿದ್ಧ ಉಡುಪುಗಳು, ಬಿಹಾರದ ಕೋಸಾ ಸಿಲ್ಕ್ ಸೀರೆ, ತಂಜಾವೂರಿನ ಕಲೆ, ಕಾಶ್ಮೀರಿ ಶಾಲುಗಳು, ಮುಖ್ಯವಾಗಿ ದೇಶದ ವಿವಿಧ ಭಾಗಗಳಿಂದ ಬಂದಿರುವ ನಶಿಸುವ ಅಂಚಿನಲ್ಲಿರುವ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿನ ಹಳ್ಳಿಗಳ ಮನೆಯ ಮೇಲೆ ಬಿಡಿಸಲಾಗಿರುವ ಚಿತ್ತಾರದ ಕಲೆಗಳು, ಆದಿವಾಸಿಗರ ಗೊಂಡ ಚಿತ್ರಕಲೆಗಳು ಒಳಗೊಂಡಂತೆ ವಿವಿಧ ಕಲಾ ಪ್ರಕಾರಗಳನ್ನು ಇಲ್ಲಿ ನೋಡಬಹುದು.

ವೈಶಿಷ್ಟ್ಯ ಏನು?
 
ಎಲಿಫಂಟ್ ಗ್ರಾಸ್‌ನಿಂದ ಮಾಡಿರುವ ಮ್ಯಾಟ್‌ಗಳು, ಹೂ ಬುಟ್ಟಿ, ಗಂಜೀಫಾ ಕಲೆ, ರಾಜಸ್ತಾನದ ಸಾಂಪ್ರದಾಯಿಕ ಚಿತ್ರಕಲೆ, ಅಲ್ಲೆಮನೆ ಗುಳಿ, ಪಗಡೆ ಆಟ ಸೇರಿದಂತೆ ಇಂದಿನ ಮಕ್ಕಳು ನೋಡದೆ ಇರುವ ಆಟಿಕೆಗಳು ಸಾಮಾನುಗಳು, ತೊಗಲು ಗೊಂಬೆಗಳು, ಮಧುರೈನ ಸಾಂಪ್ರದಾಯಿಕ ಸುಗಂಧಿ ಸೀರೆಗಳು, ಬಿದರಿ ಆಭರಣಗಳು, ಲಂಬಾಣಿ ಕಲಾವಿದರು ತಯಾರಿಸಿರುವ ವಿವಿಧ ರೀತಿಯ ಸಾಂಪ್ರದಾಯಿಕ ವಸ್ತುಗಳು, ಕಲ್ಲಿನಿಂದ ಮಾಡಿರುವ ನಂದಿ ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಕೊಳ್ಳುವವರ ಪ್ರತಿಕ್ರಿಯೆ ಸಹ ಉತ್ತಮವಾಗಿದೆ ಎನ್ನುತ್ತಾರೆ ಮಿರ್ಜಾಪುರದಿಂದ ಬಂದಿರುವ ವ್ಯಾಪಾರಿಯೊಬ್ಬರು. ಅಳಿವಿನ ಅಂಚಿನಲ್ಲಿರುವ ವಿವಿಧ ಕಲಾ ಪ್ರಕಾರಗಳನ್ನು ತನ್ಮೂಲಕ ನಗರದ ಜನರಿಗೆ ಪರಿಚಯ ಮಾಡಿಸುವುದು ಕುಟೀರದ ಉದ್ದೇಶ ಎನ್ನುತ್ತಾರೆ ಸಂಯೋಜಕಿ ನಿರ್ಮಲಾ ಹಿರಣ್ಣಯ್ಯ. ಈಗಾಗಲೇ ಆರಂಭವಾಗಿರುವ ಈ ಪ್ರದರ್ಶನ ಶನಿವಾರ (ಫೆ.26) ಮುಕ್ತಾಯ.
ಸ್ಥಳ: ಚಿತ್ರಕಲಾ ಪರಿಷತ್, ಕುಮಾರ ಕೃಪಾ ರಸ್ತೆ. ಬೆಳಿಗ್ಗೆ 10.30 ರಿಂದ ಸಂಜೆ 8.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT