ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ ಖೈದಾ ನಿರ್ನಾಮ ಸನ್ನಿಹಿತ- ಘೋಷಣೆ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಕಾಬೂಲ್/ವಾಷಿಂಗ್ಟನ್ (ಪಿಟಿಐ): ಯುದ್ಧಪೀಡಿತ ಆಫ್ಘಾನಿಸ್ತಾನಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, `ಈ ದೇಶದಲ್ಲಿ ನಮ್ಮ ಕೆಲಸ ಪೂರ್ಣಗೊಂಡಿದೆ. ಅಲ್‌ಖೈದಾವನ್ನು ನಿರ್ನಾಮ ಮಾಡುವ ಗುರಿ ಹತ್ತಿರದಲ್ಲಿದೆ~ ಎಂದು ಹೇಳಿದರು.

`ಯುದ್ಧದ ಕಾರ್ಮೋಡಗಳ ಮಧ್ಯೆಯೇ ಸುಮಾರು ಒಂದು ದಶಕದ ಕಾಲ ದೂರ ಸಾಗಿ ಬಂದಿದ್ದೇವೆ. ಆಫ್ಘಾನಿಸ್ತಾನದಲ್ಲಿ ಈಗ ಹೊಸ ಬೆಳಕನ್ನು ಕಾಣುವ ನಿರೀಕ್ಷೆಯಲ್ಲಿ ಇದ್ದೇವೆ~ ಎಂದರು.
ಇಲ್ಲಿನ ಬಗ್ರಾಮ್ ವಾಯು ನೆಲೆಯಿಂದ ಅವರು ಮಾಡಿದ ಭಾಷಣವನ್ನು ಅಮೆರಿಕದಲ್ಲಿ ನೇರ ಪ್ರಸಾರ ಮಾಡಲಾಗಿತ್ತು.  ಲಾಡೆನ್ ಹತ್ಯೆಗೆ ವರ್ಷ ಸಂದ ಸಂದರ್ಭದಲ್ಲಿಯೇ ಒಬಾಮ ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದರು.

ಒಪ್ಪಂದಕ್ಕೆ ಸಹಿ: ಒಬಾಮ  ಹಾಗೂ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಅವರು ನೂತನ ಕಾಬೂಲ್-ವಾಷಿಂಗ್ಟನ್  ಸಹಭಾಗಿತ್ವ ಒಪ್ಪಂದಕ್ಕೆ (ಎಸ್‌ಪಿಎ)    ಸಹಿ ಹಾಕಿದರು.2014ರಲ್ಲಿ ಅಮೆರಿಕ ನೇತೃತ್ವದ ನ್ಯಾಟೊ ಪಡೆಯನ್ನು ಆಫ್ಘಾನಿಸ್ತಾನದಿಂದ ವಾಪಸ್ ಪಡೆದ ಬಳಿಕ ಅಲ್ಲಿನ ಸೇನೆಗೆ ಅಮೆರಿಕ ಪಡೆಯು ತರಬೇತಿ ನೀಡಲು  ಹಾಗೂ ಭಯೋತ್ಪಾದನೆ ನಿಗ್ರಹ ಹೋರಾಟದಲ್ಲಿ ನೆರವು ನೀಡುವುದಕ್ಕೆ ಈ ಒಪ್ಪಂದವು ಅವಕಾಶ ನೀಡುತ್ತದೆ.
 

ಉಗ್ರರ ದುಷ್ಕೃತ್ಯ: ಎಂಟು ಸಾವು
ಕಾಬೂಲ್ (ಐಎಎನ್‌ಎಸ್): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಇಲ್ಲಿಗೆ ಭೇಟಿ ನೀಡಿ ಹಿಂತಿರುಗಿದ ಒಂದು ಗಂಟೆ ನಂತರ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಎಂಟು ಜನ ಮೃತಪಟ್ಟಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಂತರ ರಾಷ್ಟ್ರೀಯ ಸಂಘಟನೆಗಳ ಉದ್ಯೋಗಿಗಳ ವಸತಿ ಸಮುಚ್ಚಯದ ಸಮೀಪ ಉಗ್ರರು ಎರಡು ಸ್ಫೋಟ ನಡೆಸಿದ್ದಾರೆ. ಜಲಾಲಾಬಾದ್ ರಸ್ತೆಯಲ್ಲಿರುವ `ಗ್ರೀನ್ ವಿಲೇಜ್~ ಎಂದು ಕರೆಯುವ ಪುಲ್-ಐ-ಚರಖಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಬೆಳಿಗ್ಗೆ 6.15ರ ಹೊತ್ತಿಗೆ ಆತ್ಮಹತ್ಯಾ ಕಾರ್ ಬಾಂಬ್ ದಾಳಿ ನಡೆಸಲಾಗಿದೆ.
 ಇದೇ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಭಾರಿ ಗುಂಡಿನ ಚಕಮಕಿ ಕೂಡ ನಡೆದಿದೆ. ಒಬ್ಬ ನೇಪಾಳದ ಭದ್ರತಾ ಸಿಬ್ಬಂದಿ ಮತ್ತು ಐವರು ನಾಗರಿಕರು ಮೃತಪಟ್ಟಿದ್ದಾರೆ.
ಆತ್ಮಾಹತ್ಯಾ ದಾಳಿಕೋರ  ಕೂಡ ಮೃತಪಟ್ಟಿದ್ದಾನೆ. ಈ ಪ್ರದೇಶದ ಸಮೀಪವೇ ಅಮೆರಿಕ ಮತ್ತು ನ್ಯಾಟೊ ಮಿತ್ರ ಪಡೆಗಳ ಶಿಬಿರ ಕೂಡ ಇದೆ. ಸದ್ಯ ಈ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸುತ್ತುವರಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT