ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿಪುರ: ಸಂಭ್ರಮದ ರಥೋತ್ಸವ

Last Updated 5 ಜನವರಿ 2012, 7:50 IST
ಅಕ್ಷರ ಗಾತ್ರ

ಬಳ್ಳಾರಿ: ಸದ್ಗುರು ಮಹಾದೇವ ತಾತನವರ 24ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ತಾಲ್ಲೂಕಿನ ಅಲ್ಲಿಪುರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ರಥೋತ್ಸವದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ಭಾಗವಹಿಸಿದರು.

ಸಕಲ ಜಾನಪದ ನೃತ್ಯ ಮತ್ತು ಮಂಗಲ ವಾದ್ಯಗಳೊಂದಿಗೆ ನಡೆದ ಮಹದೇವ ತಾತನವರ ರಥೋತ್ಸವ ದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಜಯಘೋಷ ಮೊಳಗಿಸಿದರು.

ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಗಂಗೆ ತಂದ ಬಳಿಕ ಮಹಿಳೆಯರ ಪೂರ್ಣಕುಂಭದೊಂದಿಗೆ ನಡೆದ ಮಡಿತೇರು ಎಳೆಯುವ ಕಾರ್ಯಕ್ರಮದಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಎಸ್. ಗುರುಲಿಂಗನಗೌಡ, ಮಹಾರುದ್ರಗೌಡ, ಆರ್.ಎಚ್.ಎಂ. ಚೆನ್ನಬಸಯ್ಯ, ವಿರೂಪಾಕ್ಷಯ್ಯಸ್ವಾಮಿ, ಗೋವಿಂದ ರಾಜುಲು ಮತ್ತಿತರರು ಭಾಗವಹಿಸಿದ್ದರು.

ವಿಶೇಷ ಪೂಜೆ, ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತಲ್ಲದೆ, ರಥೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ  ನಗರದ ವಿವಿಧೆಡೆಯಿಂದ ಉಚಿತ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಪ್ರವಚನ ಪ್ರಾರಂಭೋತ್ಸವ ಇಂದು
ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಇದೇ 5ರಂದು ಸಂಜೆ 7ಕ್ಕೆ ಬಸವ ದರ್ಶನ ಪ್ರವಚನ ಪ್ರಾರಂಭೋತ್ಸವ ನಡೆಯಲಿದೆ.

ಧಾರವಾಡದ ಮಹದೇವದೇವರು ಪ್ರವಚನ ನೀಡಲಿದ್ದು, ದೊಡ್ಡಬಸವ ಗವಾಯಿ ಸಂಗೀತಸೇವೆ ನೀಡುವರು.
ಕರೇಗುಡ್ಡ ಹಿರೇಮಠದ ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕರಾದ ಜಿ. ಸೋಮಶೇಖರರೆಡ್ಡಿ, ಮೃತ್ಯುಂಜಯ ಜಿನಗಾ ಭಾಗವಹಿಸಲಿದ್ದಾರೆ.

ಪ್ರವಚನವು ಜ. 25ರವರೆಗೆ ನಿತ್ಯ ಸಂಜೆ 7ರಿಂದ 9ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT