ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್‌ಖೈದಾಗೆ ತಗ್ಗಿದ ಬೆಂಬಲ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಅಂತರರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆಯಾಗಿ ಒಂದು ವರ್ಷದ ಬಳಿಕ ಇದೀಗ ಆತನ ಸಂಘಟನೆಯಾದ ಅಲ್-ಖೈದಾ ಕುರಿತು ಮುಸ್ಲಿಂ ರಾಷ್ಟ್ರಗಳಲ್ಲಿ ಬೆಂಬಲ ಕಡಿಮೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಈಜಿಪ್ಟ್, ಪಾಕಿಸ್ತಾನ, ಟರ್ಕಿ ಮತ್ತು ಲೆಬನಾನ್‌ನಂತಹ ಮುಸ್ಲಿಂ ರಾಷ್ಟ್ರಗಳು ಅಲ್-ಖೈದಾ ವಿರುದ್ಧ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ ಎಂದು ಈ ರಾಷ್ಟ್ರಗಳಲ್ಲಿ ಇತ್ತೀಚೆಗೆ ಪೀವ್ ರೀಸರ್ಚ್ ಸೆಂಟರ್‌ನ ಗ್ಲೋಬಲ್ ಆ್ಯಟಿಟ್ಯೂಡ್ ಪ್ರಾಜೆಕ್ಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ದಾಳಿ ಸಂಚು: ಅಶ್ಲೀಲ ಚಿತ್ರ ವಿಡಿಯೊದಲ್ಲಿ ಇದ್ದ ಸುಮಾರು ನೂರಕ್ಕೂ ಅಧಿಕ ಅಲ್-ಖೈದಾ ದಾಖಲೆಗಳು ಆ ಸಂಘಟನೆಯು 2008ರ ಮುಂಬೈ ದಾಳಿ ಮಾದರಿಯಲ್ಲಿ ಯುರೋಪ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು ಎನ್ನುವುದನ್ನು ಬಹಿರಂಗಪಡಿಸಿವೆ. ಪತ್ತೆಯಾದ ದಾಖಲೆಗಳಲ್ಲಿ  ವಿವಿಧ ಭಾಷೆಯಲ್ಲಿ ಪಿಡಿಎಫ್ ರೂಪದಲ್ಲಿರುವ ಉಗ್ರರ ತರಬೇತಿ ಕೈಪಿಡಿಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಹೆಸರು ಬದಲಾವಣೆ:  ತನ್ನ ಕೊನೆಯ ದಿನಗಳಲ್ಲಿ ಅಮೆರಿಕದ ಡ್ರೋಣ್ ದಾಳಿಯಿಂದಾಗಿ ಪ್ರಮುಖ ನಾಯಕರು ಸಾಯುತ್ತಿದ್ದುದರಿಂದ ಕಂಗೆಟ್ಟಿದ್ದ  ಲಾಡೆನ್, ತನ್ನ ಸಂಘಟನೆಯ ಹೆಸರನ್ನು ಬದಲಿಸಲು ಚಿಂತನೆ ನಡೆಸಿದ್ದ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋಣ್ ದಾಳಿ ಸಮರ್ಥನೆ
ವಾಷಿಂಗ್ಟನ್ (ಪಿಟಿಐ):
ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ನಡೆಸಿದ ಡ್ರೋಣ್ ದಾಳಿಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ, ಕುಖ್ಯಾತ ಭಯೋತ್ಪಾದಕರನ್ನು ಹತ್ಯೆ ಮಾಡಲು ನಡೆಸಿದ ನ್ಯಾಯಯುತ ದಾಳಿ ಇದಾಗಿದೆ ಎಂದು ಹೇಳಿದೆ.

ದಾಳಿ ಕುರಿತಂತೆ ಪಾಕಿಸ್ತಾನದ ಆತಂಕಕ್ಕೆ  ಪ್ರತಿಕ್ರಿಯೆ ನೀಡಿರುವ ಅಮೆರಿಕ, `ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಳಿಕ ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಅಲ್-ಖೈದಾ, ತಾಲಿಬಾನ್ ಮತ್ತು ಇತರ ಪಡೆಗಳ ವಿರುದ್ಧ ಸಶಸ್ತ್ರ ಹೋರಾಟ ನಡೆಸಲಾಗುತ್ತದೆ~ ಎಂದು   ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT