ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿಗೆ ಮುನ್ನ ಮಕರ ಜ್ಯೋತಿ- ಭಕ್ತರ ವಿಶ್ವಾಸಕ್ಕೆ ಚ್ಯುತಿಯಿಲ್ಲ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: `ಈ ಸಲವೂ ಯಥಾಪ್ರಕಾರ `ಮಕರ ಜ್ಯೋತಿ~ ದರ್ಶನವಾಗಿದೆ. ಭಾನುವಾರ ಸಂಜೆ 6.50ರ ಸುಮಾರಿಗೆ ಮೂರು ಬಾರಿ ದಿವ್ಯ `ಜ್ಯೋತಿ~ ಬೆಳಗಿದೆ. ಅಷ್ಟರಲ್ಲೇ ಇಲ್ಲಿ ಕಿಕ್ಕಿರಿದಿದ್ದ ಲಕ್ಷಾಂತರ ಅಯ್ಯಪ್ಪ ಭಕ್ತರಿಂದ `ಸ್ವಾಮಿಯೇ ಶರಣಂ ಅಯ್ಯಪ್ಪ~ ಎಂಬ ಭಕ್ತಿಪರವಶತೆಯ ಘೋಷಣೆಯೂ ಇಲ್ಲಿನ ದಟ್ಟ ಮಲೆಗಳಲ್ಲಿ ಅನುರಣಿಸಿದೆ.
 
ಅಯ್ಯಪ್ಪನ ಕೋಟ್ಯಂತರ ಭಕ್ತರ ನಂಬಿಕೆ- ವಿಶ್ವಾಸಕ್ಕೆ ಸ್ವಲ್ಪವೂ ಚ್ಯುತಿ ಬಂದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ!~ - ಆಗಷ್ಟೇ `ಮಕರ ಜ್ಯೋತಿ~ ದರ್ಶನ ಮಾಡಿದ ಅಯ್ಯಪ್ಪ ಭಕ್ತ ಕಾಸರಗೋಡಿನ ರವಿಚಂದ್ರರ ಭಕ್ತಿ-ಭಾವುಕ ನುಡಿ.

`ಅವಧಿಗೆ ಮುನ್ನವೇ ಅಂದರೆ ಶನಿವಾರ ಸಂಜೆ ಮಕರಜ್ಯೋತಿ ದರ್ಶನವಾಗಿದೆ ಎನ್ನುವ ಸುದ್ದಿ ಕಪೋಲಕಲ್ಪಿತ. ಅಯ್ಯಪ್ಪ  ಭಕ್ತರನ್ನು ಹಾದಿ ತಪ್ಪಿಸುವ ಯತ್ನವಿದ್ದು. ಅಯ್ಯಪ್ಪ ಭಕ್ತರ ಮಧ್ಯೆಯೂ ಅಂತಹ ಸುದ್ದಿ ಇದ್ದರೂ, ನಮ್ಮಂತೆ ಎಲ್ಲರೂ ಭಾನುವಾರದ ಮಕರಜ್ಯೋತಿ ದರ್ಶನದ ಕ್ಷಣಕ್ಕಾಗಿ ಕುತೂಹಲದಿಂದ ಇದ್ದೆವು. ನಮ್ಮೆಲ್ಲರ ನಿರೀಕ್ಷೆ ಹುಸಿಯಾಗಿಲ್ಲ. ಮಕರ ಜ್ಯೋತಿ ಮೂಲಕ ನಮ್ಮ ನಂಬಿಕೆ - ನಿರೀಕ್ಷೆಯ ಅಯ್ಯಪ್ಪನ ದಿವ್ಯದರ್ಶನ ಆಗಿದೆ~ ಎಂಬುದು ಅವರ ಅಭಿಪ್ರಾಯ.

ಶಬರಿಮಲೆ ಅಯ್ಯಪ್ಪ ಸನ್ನಿಧಾನದಿಂದ ದೂರವಾಣಿ ಮೂಲಕ ಭಾನುವಾರ ಸಂಜೆ `ಪ್ರಜಾವಾಣಿ~ ಜತೆ ಮಾತನಾಡಿದ ಅವರು, `ಕಳೆದ 16ವರ್ಷಗಳಿಂದ ಪ್ರತಿವರ್ಷ ಮಕರ ಜ್ಯೋತಿ ದರ್ಶನ ಮಾಡುತ್ತಲೇ ಬಂದಿ ದ್ದೇನೆ. ಈ ಬಾರಿಯೂ ಅದೇ ಅನುಭೂತಿ ಆಗಿದೆ. ನನಗೊಬ್ಬನಿಗಷ್ಟೇ ಅಲ್ಲ. ಅಯ್ಯಪ್ಪ ಸನ್ನಿಧಾನ ದರ್ಶನ ಮತ್ತು ಮಕರಜ್ಯೋತಿ ವೀಕ್ಷಣೆ ಉದ್ದೇಶದಿಂದ ಮಾಲೆ ಧರಿಸಿ ವ್ರತಾಚರಣೆಯ ನಂತರ ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸಿದ ಅಯ್ಯಪ್ಪ ಭಕ್ತರೆಲ್ಲರ ಅನುಭವವೂ ಇದೆ~ ಎಂದು ಒಂದೇ ಉಸಿರಿನಲ್ಲಿ ಹೇಳಿದರು.

ಅರಣ್ಯಪ್ರದೇಶದಲ್ಲಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಿರುವುದರಿಂದ ಈ ಬಾರಿ ಯಾತ್ರಿಗಳಿಗೆ ಶಬರಿಮಲೆ ಯಾತ್ರೆ ಕಠಿಣವೆನಿಸಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT