ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನ ಪ್ರಕರಣ, ಚರ್ಚೆಗೆ ಯೋಗ್ಯ ವಿಷಯವಲ್ಲ- ಕಲಾಂ

Last Updated 14 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ತಮ್ಮನ್ನು ತಪಾಸಣೆಗೆ ಒಳಪಡಿಸಿದ್ದ  ಪ್ರಕರಣವನ್ನು ಮರೆತು ಬಿಡುವುದು ಲೇಸು ಎಂದು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಹೇಳಿದ್ದಾರೆ.

ಈ ಬಗ್ಗೆ ಕಲಾಂ ಅವರನ್ನು ಪ್ರಶ್ನಿಸಿದಾಗ, `ಇದು ಚರ್ಚೆಗೆ ಯೋಗ್ಯ ವಿಷಯವಲ್ಲ. ಮರೆತು ಬಿಡುವುದು ಒಳಿತು~ ಎಂದು ಉತ್ತರಿಸಿದರು.

ಇಲ್ಲಿನ ಐಐಎಂಸಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾಂ ಅವರನ್ನು ಪತ್ರಕರ್ತರು ನ್ಯೂಯಾರ್ಕ್ ಘಟನೆ ಬಗ್ಗೆ ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. ಸೆಪ್ಟೆಂಬರ್ 29ರಂದು ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಲಾಂ ಅವರು ವಿಮಾನದಲ್ಲಿ ಕುಳಿತ ನಂತರ ಪುನಃ ತಪಾಸಣೆ ನಡೆಸುವ ಅಗತ್ಯವಿದೆ ಎಂದು ಅವರ ಜ್ಯಾಕೆಟ್ ಮತ್ತು ಬೂಟುಗಳನ್ನು ತೆಗೆಸಿ ತಪಾಸಣೆಗೆ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಏರ್‌ಇಂಡಿಯಾ ಸಿಬ್ಬಂದಿ ಪ್ರತಿಭಟಿಸಿತ್ತು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಇಲಾಖೆ ಅಮೆರಿಕ ಸರ್ಕಾರಕ್ಕೆ ತನ್ನ ಅಸಮಾಧಾನ ಹಾಗೂ ಪ್ರತಿಕಾರದ ಬೆದರಿಕೆಯನ್ನು ಹಾಕಿತ್ತು. ನಂತರ ಅಮೆರಿಕ ಕಲಾಂ ಮತ್ತು ಭಾರತದ ಕ್ಷಮೆ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT