ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನದ ಗೀತೆಗೆ ಲಂಕಾ ಅಧ್ಯಕ್ಷರ ತಡೆ

Last Updated 23 ಫೆಬ್ರುವರಿ 2011, 18:15 IST
ಅಕ್ಷರ ಗಾತ್ರ

ಕೊಲಂಬೊ (ಎಎಫ್‌ಪಿ): ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿಷಯವಾಗಿ ಆಕ್ಷೇಪಾರ್ಹ ಸಾಲುಗಳನ್ನು ಹೊಂದಿದ್ದ ವಿಶ್ವಕಪ್ ಕ್ರಿಕೆಟ್ ಗೀತೆಯ ಮೇಲೆ ನಿಷೇಧ ವಿಧಿಸಿ ಶ್ರೀಲಂಕಾ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

‘ಹಾಲಿ ಚಾಂಪಿಯನ್ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಪಕ್ಷಿಗಳಿಗೆ ಆಹಾರವಾಗಲಿದೆ. ಕ್ರೈಸ್ಟ್‌ಚರ್ಚ್ ಭೂಕಂಪದಿಂದ ತತ್ತರಿಸಿರುವ ನ್ಯೂಜಿಲೆಂಡ್ ತಂಡ ದವಡೆಯನ್ನು ಮುರಿದುಕೊಳ್ಳಲಿದೆ’ ಎಂಬರ್ಥದ ಸಾಲುಗಳನ್ನು ಗೀತೆ ಒಳಗೊಂಡಿದೆ. ಆದ್ದರಿಂದ ಶ್ರೀಲಂಕಾ ಅಧ್ಯಕ್ಷರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಸಿಂಹಳಿ ಮತ್ತು ತಮಿಳು ಭಾಷೆಯ ಮಿಶ್ರಣದಲ್ಲಿರುವ ಗೀತೆಯನ್ನು ಅಧ್ಯಕ್ಷ ಮಹಿಂದಾ ರಾಜಪಕ್ಸೆ ಆಲಿಸಿದ್ದು, ಸರ್ಕಾರಿ ಸ್ವಾಮ್ಯದ ರೇಡಿಯೋ ಮತ್ತು ಟಿ.ವಿ. ಚಾನೆಲ್‌ಗಳಲ್ಲಿ ಈ ಗೀತೆಯನ್ನು ಬಿತ್ತರಿಸದಂತೆ ತಕ್ಷಣ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT