ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆ ಸೊಗಡು: ತರಕಾರಿ ಅಗ್ಗ

Last Updated 1 ಜನವರಿ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು:ಅವರೆಕಾಯಿಯ ಸೊಗಡಿಗೆ ಜನ ಮಾರುಹೋಗಿದ್ದು, ಇದರಿಂದಾಗಿ ಮಾರುಕಟ್ಟೆ­ಯಲ್ಲಿ ತರಕಾರಿಗೆ ಬೇಡಿಕೆ ತಗ್ಗಿದೆ. ಇದರಿಂದ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ತಿಂಗಳಿಂದ ತರಕಾರಿಗಳ ಬೆಲೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ.

ನವೆಂಬರ್‌ ಕೊನೆಯ ವಾರದಿಂದ ಅವರೆಕಾಯಿ ಮಾರಾಟ ಹೆಚ್ಚಾಗಿದೆ. ಜನ ಅವರೆಕಾಯಿಗೆ ಮುಗಿ ಬೀಳುತ್ತಿ­ರು­ವುದರಿಂದ ಇತರೆ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ. ಬೇಡಿಕೆ ಕಡಿಮೆ­ಯಾಗಿ­ರುವುದರಿಂದ ಬೆಲೆಯೂ ಇಳಿಮುಖವಾಗುತ್ತಿದೆ.

‘ಚಳಿಗಾಲ ಆರಂಭವಾಗುತ್ತಿದ್ದಂತೆ ಮಾರು­ಕಟ್ಟೆಗೆ ಅವರೆಕಾಯಿ ಪೂರೈಕೆ ಹೆಚ್ಚಾಗುತ್ತದೆ. ಅಲ್ಲದೆ ಅವರೆಕಾಯಿಗೆ ಬೇಡಿಕೆಯೂ ಜಾಸ್ತಿ ಆಗಿರುತ್ತದೆ. ಇತರೆ ತರಕಾರಿಗಳನ್ನು ಹೆಚ್ಚಾಗಿ ಕೊಳ್ಳಲು ಜನ ಮುಂದಾಗುವುದಿಲ್ಲ. ಹೀಗಾಗಿ ತರಕಾರಿ ಬೆಲೆ ಕಡಿಮೆಯಾಗುತ್ತದೆ. ಪ್ರತಿ ವರ್ಷವೂ ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿ ತಿಂಗಳಲ್ಲಿ ತರಕಾರಿ ಬೆಲೆ ಇಳಿಕೆ­ಯಾಗುವುದು ಸಾಮಾನ್ಯ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ಅಧ್ಯಕ್ಷೆ ಎಚ್‌.ಕೆ.ನಾಗವೇಣಿ.

‘ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಅವರೆಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆ ಹಾಗೂ ತಳ್ಳುವಗಾಡಿ­ಗಳಲ್ಲೂ ಅವರೆಕಾಯಿ ಮಾರಾಟ ಹೆಚ್ಚಾಗಿದೆ. ಇತರೆ ತರಕಾರಿಗಳಿಗೆ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಬೇಡಿಕೆ ತಗ್ಗಿದೆ. ತರಕಾರಿ ಪದಾರ್ಥಗಳ ಪೂರೈಕೆ ಹೆಚ್ಚಾಗಿದ್ದು ಬೇಡಿಕೆ ತಗ್ಗಿದೆ. ಹೀಗಾಗಿ ಬೆಲೆ ಇಳಿದಿದೆ’ ಎಂಬುದು ಅವರ ವಿವರಣೆ.

‘ಚಳಿಗಾಲದಲ್ಲಿ ಅವರೆಕಾಯಿಯೇ ವಿಶೇಷ. ತರಕಾರಿ ಬೆಲೆ ಕಡಿಮೆ­ಯಾಗಿದ್ದರೂ ಅವರೆಕಾಯಿ ಬಿಟ್ಟು ಬೇರೆ ತರಕಾರಿ ಕೊಳ್ಳಲು ಮನಸ್ಸಾಗುವುದಿಲ್ಲ. ಇತರೆ ತರಕಾರಿ ಪದಾರ್ಥಗಳು ಎಲ್ಲ ದಿನಗಳಲ್ಲೂ ಸಿಗುತ್ತವೆ. ಆದರೆ, ಅವರೆಕಾಯಿ ಎಲ್ಲ ದಿನಗಳಲ್ಲೂ ಇರುವು­ದಿಲ್ಲ. ಹೀಗಾಗಿ ಬೆಲೆಯ ಬಗ್ಗೆ ಗಮನ ಕೊಡದೆ ಹೆಚ್ಚಾಗಿ ಅವರೆಕಾಯಿಯನ್ನೇ ಖರೀದಿಸುತ್ತಿದ್ದೇನೆ’ ಎಂದಿದ್ದು ಮಲ್ಲೇಶ್ವರದ ನಿವಾಸಿ ನಿಹಾರಿಕಾ.

‘ಚಳಿಗಾಲದಲ್ಲಿ ತರಕಾರಿ ಇಳುವರಿ ಹೆಚ್ಚಾಗಿರುತ್ತದೆ. ಅವರೆಕಾಯಿ ಬೆಲೆ ₨ 27ರಿಂದ 35ರವರೆಗಿದೆ. ಆದರೂ ಜನ ಹೆಚ್ಚಾಗಿ ಅವರೆಕಾಯಿಯನ್ನೇ ಕೊಳ್ಳು­ತ್ತಿದ್ದಾರೆ. ಇತರೆ ತರಕಾರಿಗಳ ಪೂರೈಕೆಯೂ ಹೆಚ್ಚಾಗಿದೆ. ಪೂರೈಕೆ ಹೆಚ್ಚಾಗಿರುವುದರಿಂದ ಬೆಲೆ ಇಳಿದಿದೆ’ ಎಂದು ಮಲ್ಲೇಶ್ವರ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಚಂದ್ರ­ಶೇಖರ್‌ ತಿಳಿಸಿದರು.

‘ಬೆಲೆಯಲ್ಲಿ ಏರಿಳಿತವಾದರೂ ದಿನ ಬಳಕೆಯ ತರಕಾರಿಗಳಾದ ಟೊಮೆಟೊ, ಬೀನ್ಸ್‌, ಬದನೆಕಾಯಿ, ಈರುಳ್ಳಿಯ ಬೇಡಿಕೆ ಕಡಿಮೆಯಾಗುವುದಿಲ್ಲ. ಈ ತರಕಾರಿಗಳ ಬೆಲೆಯಲ್ಲಿ ಇಳಿಕೆ­ಯಾ­ಗಿದ್ದರೂ ಬೇಡಿಕೆ ಎಂದಿನಂತೆಯೇ ಇದೆ. ಮೂಲಂಗಿ, ಕ್ಯಾರೆಟ್‌, ಕೋಸು, ಸೋರೆಕಾಯಿ, ಹೀರೇಕಾರಿ ಬೆಲೆ ಕಡಿಮೆಯಾಗಿದೆ. ಆದರೆ, ಜನ ಇವನ್ನು ಕೊಳ್ಳುವುದು ಕಡಿಮೆಯಾಗಿದೆ’ ಎಂದು ಅವರು ಹೇಳಿದರು.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT