ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲಕ್ಕಿಯಲ್ಲಿ ಶ್ರೀಕೃಷ್ಣ ಭಾಗವತ!

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬಾಲಕೃಷ್ಣನ ತುಂಟಾಟದಿಂದ ಗೋಪಿಕಾಸ್ತ್ರಿಯರೊಂದಿಗಿನ ಗೋಪಾಲನ ಸರಸ ಸಲ್ಲಾಪಗಳ ಸನ್ನಿವೇಶ ಒಳಗೊಂಡ ಇಪ್ಪತ್ತೆಂಟು ಚಿತ್ರಗಳು ಅವಲಕ್ಕಿಯಿಂದ ಮಾಡಲಾಗಿದೆ. ನೋಡಿದೊಡನೆ ಕಲಾವಿದನ ಕುಂಚದಿಂದ ಸೃಷ್ಟಿಯಾದ ಕಲಾಕೃತಿಯಂತೆ ಭಾಸವಾಗುವ ಈ ಚಿತ್ರಗಳು ರಂಗೋಲಿಯ ಚಿತ್ತಾರಗಳು...

ವಿದ್ಯಾರಣ್ಯಪುರದ ನಿವಾಸಿ ಎಲ್. ಸುಬ್ಬಲಕ್ಷ್ಮೀ ಅವರು ಅವಲಕ್ಕಿ ಹಾಗೂ ಡ್ರೈ ಕಲರ್ ಪುಡಿ ಬೆರೆಸಿ ರಚಿಸಿರುವ ರಂಗೋಲಿಗಳು ಥೇಟ್ ಕುಂಚದಿಂದ ಮೂಡಿದ ಕಲಾಕೃತಿಗಳಂತೆ ಆಕರ್ಷಿಸುತ್ತವೆ. 19 ದಿನಗಳಲ್ಲಿ ಬಿಡಿಸಿದ ಈ ರಂಗೋಲಿ ಚಿತ್ರಗಳು ಶ್ರೀಕೃಷ್ಣ ಭಾಗವತದ ಕಥೆಯ ಸನ್ನಿವೇಶಗಳನ್ನು ಒಳಗೊಂಡಿವೆ.

`ಶ್ರೀಕೃಷ್ಣ ಭಾಗವತ ಪುರಾಣದಲ್ಲಿ ಅವಲಕ್ಕಿಗೆ ವಿಶೇಷ ಮಹತ್ವವಿದೆ. ಆದ್ದರಿಂದ ನಾನು ಆಯ್ಕೆ ಮಾಡಿಕೊಂಡ ಮಾಧ್ಯಮವೂ ಅವಲಕ್ಕಿ. ಹಾಗಾಗಿ ಆ ಕಥಾ ವಸ್ತುವನ್ನೇ ರಂಗೋಲಿ ಚಿತ್ರಗಳಿಗೆ ಆಯ್ಕೆ ಮಾಡಿಕೊಂಡೆ' ಎಂದು ಸುಬ್ಬಲಕ್ಷ್ಮಿ ಅವರು ಕಾರಣ ನೀಡುತ್ತಾರೆ.

ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಬ್ಬಲಕ್ಷ್ಮಿ ಅವರು ಕ್ಯಾನ್‌ವಾಸ್, ಆಕ್ರಿಲಿಕ್ ಪೇಂಟಿಂಗ್‌ಅನ್ನೂ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ರಂಗೋಲಿ ಬಿಡಿಸುವ ಅಭ್ಯಾಸ ಮುಂದುವರೆಸಿದ ಇವರು, ರಂಗೋಲಿಯಲ್ಲಿಯೇ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಆ ಪ್ರಯೋಗವೇ ಅವಲಕ್ಕಿ ಹಿಟ್ಟು ಬಳಸಿಕೊಂಡು ರಚಿಸುವ ರಂಗೋಲಿ.

`ನಾನು ಮೂರನೇ ತರಗತಿ ಇದ್ದಾಗಿನಿಂದಲೂ ರಂಗೋಲಿ ಬಿಡಿಸುತ್ತಿದ್ದೇನೆ. ಆದರೆ ಅವಲಕ್ಕಿ ಬಳಸಿಕೊಂಡು ರಂಗೋಲಿ ಬಿಡಿಸಲು ಆರಂಭಿಸಿದ್ದು 2008ರಿಂದ. ಅವಲಕ್ಕಿ ಹಾಗೂ ಬಣ್ಣವನ್ನು ಮಿಕ್ಸಿಯಲ್ಲಿ ಬೆರೆಸಿ ನಂತರ ಬಳಕೆ ಮಾಡಿಕೊಳ್ಳಲಾಗುತ್ತದೆ.  336 ಅಡಿ ವಿಸ್ತೀರ್ಣದಲ್ಲಿ ರಂಗೋಲಿ ಬಿಡಿಸಲಾಗಿದೆ. ದಿನಕ್ಕೆ ಆರು ಗಂಟೆ ಈ ಕೆಲಸಕ್ಕೆ ಮೀಸಲಿಡಲಾಗಿದೆ' ಎಂದು ಹೇಳುತ್ತಾರೆ ಸುಬ್ಬಲಕ್ಷ್ಮಿ.

ಸುಬ್ಬಲಕ್ಷ್ಮಿ ಅವರು ಬಿಡಿಸಿರುವ ರಂಗೋಲಿಗಳ ಆಯುಸ್ಸು ಕೆಲವೇ ದಿನಗಳು ಮಾತ್ರ. ನೋಡುವ ಅನುಭವ ಮಾತ್ರ ಅವಿಸ್ಮರಣೀಯ. ಈ ಚಿತ್ತಾಕರ್ಷಕ ರಂಗೋಲಿಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೂ ಅವಕಾಶ ಮಾಡಿಕೊಟ್ಟಿದ್ದಾರೆ. ಡಿಸೆಂಬರ್ 10ರವರಗೆ ಪ್ರದರ್ಶನವಿರುತ್ತದೆ.

ಸ್ಥಳ: ನಂ. 9, ಶ್ರೀನಿಧಿ ಬಡಾವಣೆ, 9ನೇ ಬಿ ಮುಖ್ಯರಸ್ತೆ, ವಿದ್ಯಾರಣ್ಯಪುರ. ಮಾಹಿತಿಗೆ: 94490 55383.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT