ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿನಗರ ಮೆಗಾಸಿಟಿ: ಶೆಟ್ಟರ್

Last Updated 13 ಏಪ್ರಿಲ್ 2013, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಅವಳಿನಗರವನ್ನು ಮೆಗಾಸಿಟಿಯಾಗಿ ಅಭಿವೃದ್ಧಿಗೊಳಿಸಲಾ ಗುತ್ತದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದರು.
ನಗರದಲ್ಲಿ ಗುರುವಾರ ಬಿಜೆಪಿ ಏರ್ಪಡಿಸಿದ `ಮುಖ್ಯಮಂತ್ರಿಗ ಳೊಂದಿಗೆ ಒಂದು ಸಂಜೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`1994 ಹಾಗೂ 1999ರಲ್ಲಿ 2 ಬಾರಿ ಶಾಸಕನಾಗಿ ಆಯ್ಕೆಯಾ ದರೂ ಕ್ಷೇತ್ರದಲ್ಲಿ ಶೇ 10ರಷ್ಟು ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ಆದರೆ ಕಳೆದ 5 ವರ್ಷಗಳಲ್ಲಿ ಅವಳಿನಗರ ಸಾಕಷ್ಟು ಅಭಿವೃದ್ಧಿ ಕಂಡಿದೆ. 67 ವಾರ್ಡುಗಳಲ್ಲಿ 8 ವಾರ್ಡುಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ವರ್ಷ 30 ವಾರ್ಡುಗಳಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸುವ ಕುರಿತು ಕಾರ್ಯ ಕೈಗೊಳ್ಳಲಾಗುತ್ತದೆ' ಎಂದು ಅವರು ಹೇಳಿದರು.

`ಬಿಜೆಪಿಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತವರು ಹೊರಗೆ ಹೋಗಿದ್ದಾರೆ. ಯಾವುದೇ ಹಗರಣಗಳಿಲ್ಲದೆ, ಕಪ್ಪು ಚುಕ್ಕೆ ಇಲ್ಲದೆ 8 ತಿಂಗಳನ್ನು ಮುಖ್ಯಮಂತ್ರಿಯಾಗಿ ಪೂರೈಸಿರುವೆ. ಜುಲೈ 12ರಿಂದ ಈ ಏಪ್ರಿಲ್ 12ಕ್ಕೆ 9 ತಿಂಗಳಾಯಿತು. ಆದರೆ ಸರ್ಕಾರ ಇಷ್ಟು ದಿನಗಳವರೆಗೆ ಉಳಿಯದೆ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದವರೇ ಹೆಚ್ಚು. ಇದರೊಂದಿಗೆ ಚಾಮರಾಜನಗರಕ್ಕೆ ಕಾಲಿಟ್ಟರೆ ಅಧಿಕಾರ ಕಳೆದುಹೋಗುತ್ತದೆ ಎಂಬ ಮೂಢನಂಬಿಕೆಯನ್ನು ಹೋಗಲಾಡಿಸಲು, ಅಲ್ಲಿಯೂ ಸಂಚರಿಸಿದೆ' ಎಂದು ಅವರು ಹೇಳಿದರು. `ಕಲಘಟಗಿ ಕ್ಷೇತ್ರಕ್ಕೆ ಇನ್ನು 2 ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಯನ್ನು ಪ್ರಕಟಿಸಲಾಗುತ್ತದೆ. ಈ ಬಾರಿ ಏಳೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತಮ ಅಂಕ: `ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆದುಕೊಟ್ಟಿದ್ದೇವೆ. ಜನರು ಚುನಾವಣೆ ಯಲ್ಲಿ ಮತದಾನ ಮಾಡುವ ಮೂಲಕ ಉತ್ತಮ ಅಂಕ ಕೊಡಬೇಕು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಕೋರಿದರು.

`ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗುವ ಮೊದಲು ಕುಡಿಯುವ ನೀರಿನ ಕೊರತೆ ಕಾಡುತ್ತಿತ್ತು. ಈಗ ಅಲ್ಲಿ ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರು ಲಭ್ಯವಾಗಿದೆ. ಹೀಗಾಗಿ ಬಿಜೆಪಿ ತನ್ನ ಸಾಮರ್ಥ್ಯದ ಮೇಲೆ ಮತ ಕೇಳುತ್ತಿದೆ' ಎಂದು ಜೋಶಿ ಹೇಳಿದರು.

ಇದಕ್ಕೂ ಮೊದಲು ಶಂಕ್ರಣ್ಣ ಮುನವಳ್ಳಿ, ಗಿರೀಶ ಉಪಾಧ್ಯಾಯ, ಪ್ರೊ.ಸಿ.ಸಿ. ದೀಕ್ಷಿತ್, ವಕೀಲ ಎಸ್.ಡಿ. ಅಕ್ಕಿ, ಕೆ.ಟಿ. ಪಾಟೀಲ ಮೊದಲಾದವರು ಮಾತನಾಡಿದರು.

`ಬಿಜೆಪಿಗೆ ಸೇರಿ ದುಡ್ಡು ಮಾಡಲೆಂದೇ ಅನೇಕರು ಬಂದರು. ಇದರಿಂದ ಬಿಜೆಪಿ ಇಮೇಜ್‌ಗೆ ಧಕ್ಕೆ ಉಂಟಾಗುತ್ತಿದೆ. ಅಂಥವರ ಬಗ್ಗೆ ನಿಗಾ ಇರಲಿ' ಎಂದು ಭಾವೈಕ್ಯ ಸಂಘದ ಪದಾಧಿಕಾರಿ ಎನ್.ವಿ. ಹೆಗಡೆ ಎಚ್ಚರಿಕೆ ನೀಡಿದರು.

ಬಿಜೆಪಿ ಸೇರ್ಪಡೆ: ಎಸ್‌ಎಸ್‌ಕೆ ಸಮಾಜದ ಮುಖಂಡ ಭಾಸ್ಕರ ಜಿತೂರಿ, ಕಾಂಗ್ರೆಸ್ ಪಕ್ಷ ತೊರೆದು ಇದೇ ಸಂದರ್ಭದಲ್ಲಿ ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT