ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆ ಸರಿಪಡಿಸಲು ಬ್ರಹ್ಮ ಬರಬೇಕಾ?

Last Updated 3 ಜೂನ್ 2011, 10:20 IST
ಅಕ್ಷರ ಗಾತ್ರ

ಹೊಸನಗರ: `ಜಿ.ಪಂ. ಅಧ್ಯಕ್ಷರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳು ಸ್ವಚ್ಛ ಮಾಡುವವರು ಇಲ್ಲದೆ ನಾರುತ್ತಿದೆ. ಈ ಬಗ್ಗೆ ಗಮನ ಕೊಡಿ ಎಂದು ನೀಡಿದ ಆದೇಶ ಗಾಳಿಗೆ ತೂರಿದ್ದೀರಾ?. ಜಡ್ಡು ಹಿಡಿದು ಹೋಗಿದೆ. ಅವ್ಯವಸ್ಥೆ ಸರಿಪಡಿಸಲು ಆ ಬ್ರಹ್ಮನೇ ಬರಬೇಕಾ?~ ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮುರ್ತಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ಪಟ್ಟಣದಲ್ಲಿ ಗುರುವಾರ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕ ಆಸ್ಪತ್ರೆಯ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತಂತೆ ಅವರು ಗಂಭೀರ ಆರೋಪ ಮಾಡಿದರು.

ಸುವರ್ಣ ಭೂಮಿ ಅರ್ಜಿ ಕೊರತೆ: ಸುವರ್ಣ ಭೂಮಿ ಯೋಜನೆಯಲ್ಲಿ ನಿಗದಿತ ಗುರಿಗಿಂತ ಕಡಿಮೆ ಅರ್ಜಿ ಬಂದಿದೆ.
 
4,725 ಅರ್ಜಿಗಳು ಸ್ವೀಕರಿಸಿದ್ದು, ಅದರಲ್ಲಿ 3,142 ಅರ್ಜಿಗಳನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ರಸಗೊಬ್ಬರ, ಬಿತ್ತನೇಬೀಜದ ಕೊರತೆ ಇಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.

ಮಣಸಟ್ಟೆ ಗ್ರಾಮದ ಅಂಗನವಾಡಿ ಕಾರ್ಯಕರ್ತರ ನೇಮಕಾತಿ ಕುರಿತಂತೆ ಸರ್ಕಾರಿ ಆದೇಶವನ್ನು ಗಾಳಿಗೆ ತೂರಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ ಅಧ್ಯಕ್ಷರು, ಅಪೂರ್ಣ ಅಂಗನವಾಡಿ ಕಟ್ಟಡಗಳನ್ನು ಕೂಡಲೆ ಪೂರ್ಣ ಮಾಡುವಂತೆ ಸೂಚಿಸಿದರು.

2009-10ನೇ ಸಾಲಿನ ಎಲ್ಲ ಹನಿ ನೀರಾವರಿ ಸಬ್ಸಿಡಿ ಹಣ ಪಾವತಿ ಮಾಡಲಾಗಿದೆ. ಅಡಿಕೆ ಮರದ ಬೇರು ಹುಳ ನಿವಾರಣೆಗೆ ಶೇಕಡಾ 50ರ ಸಬ್ಸಿಡಿ ಹಣದಲ್ಲಿ ಔಷಧಿಯನ್ನು ರೈತರಿಗೆ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.

ಸರ್ಕಾರಿ ಶಾಲೆಗಳ ಸಾಧನೆ: ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 4 ಗ್ರಾಮೀಣ ಭಾಗದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶೇಕಡಾ 100 ಫಲಿತಾಂಶ ಬಂದಿರುವುದು ಗಮನೀಯವಾಗಿದೆ. ಸಮವಸ್ತ್ರ ಪೂರ್ಣ ಪೂರೈಕೆ ಆಗಿದೆ. ಪಠ್ಯ ಪುಸ್ತಕ ಶೇಕಡಾ 75ರಷ್ಟು ಶಾಲೆಗಳಿಗೆ ಪೂರೈಕೆ ಆಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದರು.

ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಆಹಾರ ವಿತರಣೆಯ ಗುಣಮಟ್ಟ, ಪ್ರಮಾಣದ ಬಗ್ಗೆ ಗಮನ ನೀಡಬೇಕು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷೆ ತಾಕೀತು ಮಾಡಿದರು.

ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ಗಂಗಾಧರಪ್ಪ, ಸದಸ್ಯೆ ಜ್ಯೋತಿ ಚಂದ್ರಮೌಳಿ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಶಾಂತಾ ಶೇಖರಪ್ಪ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.
ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಮಣಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT