ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲ ಚಿತ್ರ ವೀಕ್ಷಣೆ: ಮುಂದುವರಿದ ಪ್ರತಿಭಟನೆ

Last Updated 10 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಧಾರವಾಡ: ಸದನದಲ್ಲಿ ಕುಳಿತು ಲೈಂಗಿಕ ದೃಶ್ಯಗಳನ್ನು ನೋಡುತ್ತಿದ್ದ ಸಚಿವರ ಕ್ರಮ ಖಂಡಿಸಿ ನಗರದಲ್ಲಿ ಪ್ರತಿಭಟನೆ ಗಳು ಗುರುವಾರವೂ ನಡೆದವು. ನಾಡಿನ ಶ್ರೀಮಂತ ಸಂಸ್ಕೃತಿಯನ್ನು ನಾಶಪಡಿಸು ತ್ತಿರುವ ಬಿಜೆಪಿ ನೇತೃತ್ವ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದವು.

ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿ ಭಟನೆ ನಡೆಸಿ ಮನವಿ ಸಲ್ಲಿಸಿತು. ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ ಮೂವ ರು ಶಾಸಕರ ಪ್ರತಿಕೃತಿಗೆ ಚಪ್ಪಲಿ ಏಟು ನೀಡಿ, ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮಂಜುಳಾ ನಾಯ್ಡು, ದೇವಕಿ ಯೋಗಾನಂದ, ಡಾ. ಶಾಂತಾ ಹಲಗಿ, ಶಾಂತಮ್ಮ ಗುಜ್ಜಳ, ಮಲ್ಲಮ್ಮ ಚಲಮಿ, ನಿರ್ಮಲಾ ಹೊಂಗಲ, ಯಶೋಧಾ ಮೋಟೆಬೆನ್ನೂರ, ಪೂಜಾ ಹಳಿಯಾಳ, ದೇವಾನಂದ ರತ್ನಾಕರ, ಎಂ.ಜಿ. ನಿಪ್ಪಾಣಿ, ಬಡಬಡೆ, ಟರೀನ್ ಪಾಲ್, ನಿಜಾಮ್ ರಾಹಿ, ದಾವಲ್ ಮತ್ತಿತರರು ಭಾಗವಹಿಸಿದ್ದರು.

ಸದನದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಮತ್ತು ಕೃಷ್ಠ ಪಾಲೇಮಾರ ಅವರ ಶಾಸಕ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ಸೇನೆಯ ಕಾರ್ಯ ಕರ್ತರು  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ ಬೊವೇರ, ಕೃಷ್ಣಾ ತಿಬೇಲಿ, ಪ್ರವೀಣ ನಡಕಟ್ಟಿ, ದಿವಾನ್ ಬಳ್ಳಾರಿ, ಶರಣಪ್ಪ ಚಿಕ್ಕಲಗಾರ, ರಾಜು ನಗಳೂರ, ಕೃಷ್ಣಾ ಗುಮ್ಮಗೋಳ, ಮಂಜುನಾಥ ವಾಲಿಕಾರ, ಇಲಿಯಾಸ್ ಸವಣೂರ, ಶ್ರೀಕಾಂತ ನಾಯಕ, ಮಂಜುನಾಥ ಹೊಂಗಲದ, ಯಾಸಿನ್ ಕರಿಗಾರ, ದತ್ತಾ ದೊಡಮನಿ, ಮತ್ತಿ ತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಖಂಡನೆ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಂಘಟನಾ ಸಮಿತಿ ಅಶ್ಲೀಲ ಚಿತ್ರಗಳನ್ನು ವೀಕ್ಷೀಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.

ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಬೇಕು. ಈ ಮೂವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾರ್ಯದರ್ಶಿ ರಾಮಾಂಜನಪ್ಪ ಆಳ್ದಳ್ಳಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT