ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ಲೀಲ ದೃಶ್ಯ ವೀಕ್ಷಣೆ ನಾಡಿನ ದುರಂತ

Last Updated 10 ಫೆಬ್ರುವರಿ 2012, 5:50 IST
ಅಕ್ಷರ ಗಾತ್ರ

ಮೂಡಿಗೆರೆ: ವಿಧಾನಸಭೆಯಲ್ಲಿ ಕುಳಿತು ಅಶ್ಲೀಲಚಿತ್ರ ವೀಕ್ಷಿಸುವ ಶಾಸಕರು ಆಯ್ಕೆಯಾಗಿರುವುದು ನಾಡಿನ ದುರಂತ ಎಂದು ನಿಡುಮಾಮಿಡಿ ಮಾನವ ಧರ್ಮಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿಷಾದಿಸಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಗುರುವಾರದಿಂದ ಜನಪರ ವೇದಿಕೆ ಎರಡು ದಿನಗಳ ಕಾಲ ಆಯೋಜಿಸಿರುವ ಜನಪರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

 ಅಧಿಕಾರದಲ್ಲಿರುವವರು ಭ್ರಷ್ಟಾಚಾರ ನಡೆಸಿ, ಹಣ, ಅಧಿಕಾರ ಮದಗಳಿಂದ ಯಾವುದೇ ಭಯ ಇಲ್ಲದೆ ಅರಾಜಕತೆ, ಅಮಾನವೀಯತೆ, ಅನೈತಿಕತೆ ಸ್ವೇಚ್ಚಾಚಾರಗಳನ್ನು ಸೃಷ್ಟಿಸುತ್ತಿದ್ದಾರೆಂದು ಅವರು ಆತಂಕ ವ್ಯಕ್ತಪಡಿಸಿದರು.

  ಮಡೆಸ್ನಾನವನ್ನು  ಆಡಳಿತ ಪಕ್ಷದಲ್ಲಿರುವವರು ಖಂಡಿಸಲಿಲ್ಲ. ಜನನಾಯಕರ ಬೇಜವಾಬ್ದಾರಿತನ ದಿಂದ ವಿಧಾನಸಭೆ ಗೌರವ ಹಾಳುಗೆಡವಲಾಗುತ್ತಿದೆ. ಮೋಸ,  ವಂಚನೆ, ಅಪ್ರಮಾಣಿಕತೆ, ವಿಜೃಂಭಿಸುತ್ತಿದೆ.

ರಾಜಕೀಯರಂಗ ಹೊಲಸೆದ್ದು ಹೋಗಿದೆ.  ಮಾಟ,ಮಂತ್ರ, ಪೂಜೆ, ಪುನಸ್ಕರ ಹೆಸರಿನಲ್ಲಿ ಜನಸಾಮಾನ್ಯರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಶೂದ್ರ, ದಲಿತ ಸಂಸ್ಕೃತಿ ಕೀಳಲ್ಲ. ಜಗತ್ತಿನಲ್ಲಿ ಮಾನವಧರ್ಮ ಅಸ್ತಿತ್ವದಲ್ಲಿದ್ದರೆ, ಮೇಲ್ವರ್ಗದ ಮಾನವ ವಿರೋಧಿ ವರ್ತನೆಗಳಿಗೆ ಕಡಿವಾಣ ಹಾಕಬಹುದು ಎಂದರು.

ಪ್ರತಿಷ್ಠಿತ ವರ್ಗಗಳು ತಮ್ಮದಲ್ಲದ ಆಚಾರ, ವಿಚಾರಗಳಿಂದ ಸಮಾಜವನ್ನು ಅಧಃಪತನಕ್ಕೆ ತಳ್ಳುತ್ತಿವೆ. ಶೋಷಿತರ ನಿಜವಾದ ಸಾಹಿತ್ಯ, ಸಂಸ್ಕೃತಿ ಯನ್ನು ತಿರಸ್ಕರಿಸಲಾಗುತ್ತಿದೆ. ಇವುಗಳನ್ನು ಆಚರಣೆ ತರಲು ಮುಂದಾಗುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಸಮಾಜದಲ್ಲಿ ಬದಲಾವಣೆ ತರುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಶೋಷಿತ ವರ್ಗದಲ್ಲಿ ಆತ್ಮಗೌರವ ಬರಬೇಕು. ಜಾತಿ ಪದ್ಧತಿ ಅಳಿಸಿ ಹಾಕಿ ಸ್ವಾರ್ಥಪರ ಚಟುವಟಿಕೆಗೆ ತಿಲಾಂಜಲಿ ಇಡಬೇಕು. ಉತ್ತಮ ನಾಗರಿಕ ಸಮಾಜ ಸೃಷ್ಟಿಸಲು ಹೋರಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಂಜುನಾಥಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ರುದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜ್ಯೋತಿ ಹೇಮಾಶೇಖರ್, ತಾ.ಪಂ. ಸದಸ್ಯೆ ಹೂವಮ್ಮ, ಸಬ್ಲಿದೇವರಾಜ್, ಸುಧಾ, ಜಿ.ಪಂ. ಮಾಜಿ ಸದಸ್ಯ ಸಾತಿ ಸುಂದರೇಶ್, ಬ್ಯಾರಿ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ  ಹೇಮಾಶೇಖರ್, ಮಹಿಳಾ ಒಕ್ಕೂಟದ ಕಮಾಲಾಕ್ಷಮ್ಮ, ಪರಿಶಿಷ್ಟಜಾತಿ ನೌಕರರ ಸಂಘದ ಅಧ್ಯಕ್ಷ ಪುಟ್ಟಯ್ಯ, ಆಟೋಚಾಲಕರ ಸಂಘದ ಅಧ್ಯಕ್ಷ  ಪುಟ್ಟಪ್ಪ, ಸಿ.ಪಿ.ಐ.(ಎಂ.ಎಲ್.)ತಾಲ್ಲೂಕು ಅಧ್ಯಕ್ಷ ಗೋಪಾಲ್, ಕಿರುಗುಂದ ಅಬ್ಬಾಸ್, ಕೆ.ಕೆ. ರಾಮಯ್ಯ, ಹೊಸಕೆರೆ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT