ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಪಕ ಮಾಹಿತಿ: ಸದಸ್ಯರ ತರಾಟೆ

Last Updated 7 ಏಪ್ರಿಲ್ 2011, 7:15 IST
ಅಕ್ಷರ ಗಾತ್ರ

ಲಿಂಗಸುಗೂರ: ರಾಜೀವಗಾಂಧಿ ವಸತಿ ನಿಗಮದಿಂದ ಪ್ರತಿಯೊಂದು ಕ್ಷೇತ್ರಕ್ಕೆ ಜೋಪಡಿ ರಹಿತ ಗ್ರಾಮದ ನಿರ್ಮಾ ಣಕ್ಕೆ ಒಂದು ಸಾವಿರ ಮನೆ ಮಂಜೂರು ಮಾಡಲಾಗಿದೆ. ಲಿಂಗಸು ಗೂರ ಕ್ಷೇತ್ರದ ಜಾಗೃತ ಸಮಿತಿ ಸಭೆಯನ್ನು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕರೆಯ ಲಾಗಿತ್ತು. ಸಭೆ ಆರಂಭ ಗೊಳ್ಳುತ್ತಿದ್ದಂತೆ ಬಹುತೇಕ ಸದಸ್ಯರು ಸಭೆ ಕುರಿತು ಮಾಹಿತಿ ನೀಡದಿರುವ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು.

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾನಪ್ಪ ವಜ್ಜಲ ಮಧ್ಯಪ್ರವೇಶಿಸಿ, ಜಾಗೃತ ಸಮಿತಿ ಅಥವಾ ಇತರೆ ಸಭೆಗಳಿಗೆ ಸಂಬಂಧಿಸಿ ಪ್ರತಿಯೋರ್ವ ಸದಸ್ಯರಿಗೆ ಪೂರ್ವ ನಿಯೋಜಿತವಾಗಿ ಮಾಹಿತಿ ನೀಡಬೇಕು. ಪದೆ ಪದೆ ಇಂಥ ಆರೋಪಗಳು ಕೇಳಿಬರುತ್ತಿವೆ. ಪುನಃ ಇಂಥ ಆರೋಪ ಮರುಕಳಿ ಸದಂತೆ ಎಚ್ಚರಿಕೆ ವಹಿಸಲು ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಪಂಚಾ ಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುಂದೆ ಹಾಗಾಗದಂತೆ ನೋಡಿ ಕೊಳ್ಳುವ ಭರವಸೆ ನೀಡಿದರು.

ವ್ಯವಸ್ಥಾಪಕ ಬಸವರಾಜ, ಸಿಬ್ಬಂದಿ ಮಲ್ಲಿಕಾರ್ಜುನ ಈಗಾಗಲೆ ತಾಲ್ಲೂಕಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಜೋಪಡಿ ಹೊಂದಿರುವ ಕುರಿತು ಸಮೀಕ್ಷೆ ಮಾಡಿ ಆನ್‌ಲೈನ್‌ದಲ್ಲಿ ಹಾಕಲಾಗಿದೆ. ಕ್ಷೇತ್ರಕ್ಕೆ ಬಂದಿರುವ ಒಂದು ಸಾವಿರ ಮನೆಗಳನ್ನು ಗ್ರಾಮ ಪಂಚಾಯಿತಿ ವಾರು ಆಯ್ಕೆ ಮಾಡ ಬೇಕು. ಆಯಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಅರ್ಹ ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು.

ಹಾಜರಿದ್ದ ಕೆಲ ಸದಸ್ಯರು ಸಂಖ್ಯಾವಾರು ಹಂಚಿಕೊಳ್ಳುವ ವಿಚಾರ ವ್ಯಕ್ತಪಡಿಸಿದರು. ಈ ಯೋಜನೆ ಅನುಷ್ಠಾನದ ನೀತಿ, ನಿಯಮಗಳನ್ನು ಸಭೆಗೆ ತಿಳಿಸುತ್ತಿದ್ದಂತೆ ಯಾವೊಬ್ಬ ಸದಸ್ಯರು ಚಕಾರ ವೆತ್ತಲಿಲ್ಲ. ಪ್ರತಿ ಗ್ರಾಮ ಪಂಚಾ ಯಿತಿಗೆ 50 ರಿಂದ 60 ಮನೆಗಳ ಹಂಚಿಕೆಗೆ ತೀರ್ಮಾನಿಸಲಾಯಿತು. ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಮತ್ತು ಜೋಪಡಿ ಹೊಂದಿರುವ ಸಂಖ್ಯೆ ಆಧರಿಸಿ ಪಕ್ಷಾತೀತವಾಗಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಗ್ರಾಮಗಳ ಆಯ್ಕೆ ಮಾಡಲಾಯಿತು.

ಸಭೆ ಅಧ್ಯಕ್ಷತೆಯನ್ನು ಶಾಸಕ ಮಾನಪ್ಪ ವಜ್ಜಲ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜ ಲಕ್ಷ್ಮಪ್ಪ ಮಾಕಾಪುರ, ಉಪಾಧ್ಯಕ್ಷೆ ಸಂಗಮ್ಮ ಸಿದ್ಧನಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT