ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಮಾ ಮತ್ತು ಚರ್ಮ ರೋಗ

Last Updated 21 ಜನವರಿ 2011, 11:45 IST
ಅಕ್ಷರ ಗಾತ್ರ

ಒಂಬತ್ತು ವರ್ಷದ ಬಾಲಕ ಹಿಮಾಂಶು ಬಾಲ್ಯದಿಂದಲೇ ಅಸ್ತಮಾದಿಂದ ಬಳಲುತ್ತಿದ್ದ. ಉಸಿರು ಎಳೆದುಕೊಳ್ಳುವ ಇನ್‌ಹೇಲರ್‌ಗಳು ಅವನಿಗೆ ಕೇವಲ ತಾತ್ಕಾಲಿಕ ಉಪಶಮನ ನೀಡುತ್ತಿದ್ದವು ಅಷ್ಟೆ. ಬೆಳೆಯುತ್ತಾ ಹೋದಂತೆ ಅವುಗಳ ಸೇವನೆಯ ಪ್ರಮಾಣ ಹೆಚ್ಚುತ್ತಾ ಹೋಯಿತು, ಆದರೆ ಆತನಿಗೆ ಚರ್ಮದ ಅಲರ್ಜಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ಆತನ ಸ್ಥಿತಿ ಬಿಗಡಾಯಿಸಲಾರಂಭಿಸಿತು. ಮೈ ಮೇಲಿನ ಬೊಕ್ಕೆಗಳು ಹಾಗೂ ಅಸಾಧ್ಯ ತುರಿಕೆಗಳಿಂದಾಗಿ ಜರ್ಝರಿತನಾಗಿ ಹೋದ. ಶ್ವಾಸನಾಳದ ಸೋಂಕುಗಳಾದ ಅಸ್ತಮಾ ಮುಂತಾದ ತೊಂದರೆಗಳು ಚರ್ಮದ ಸೋಂಕು ಮತ್ತು ಅಲರ್ಜಿಗಳೊಂದಿಗೆ ತಳುಕು ಹಾಕಿಕೊಂಡಿವೆ ಎಂಬುದು ಕ್ರಮೇಣ ಅವರ ಅರಿವಿಗೆ ಬಂತು, ಅಲರ್ಜಿಯ ರಾಜಧಾನಿ ಎಂದೆನಿಸಿರುವ ಬೆಂಗಳೂರಿನಂತಹಾ ನಗರಗಳಲ್ಲಿ ಈ ಎರಡೂ ಸಂಕೀರ್ಣ ಸಂಯೋಜಿತ ಸ್ವಾಸ್ಥ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಇದು ಮಕ್ಕಳಲ್ಲಿಯೇ ಹೆಚ್ಚಾಗಿ ಕಂಡು ಬರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಇದರ ತೀವ್ರತೆ ಅಧಿಕ. ಅಸ್ತಮಾದಿಂದ ಬಳಲುತ್ತಿರುವವರಲ್ಲಿಯೇ ಚರ್ಮ ಸಂಬಂಧಿತ ತೊಂದರೆಗಳು ಅಧಿಕವಾಗಿದ್ದು, ಚರ್ಮವ್ಯಾಧಿ ಪೀಡಿತರಲ್ಲಿ ಉಸಿರಾಟದ ತೊಂದರೆಗಳೂ ಅಧಿಕ. ಈ ಎರಡು ತೊಂದರೆಗಳು ಪರಸ್ಪರ ಪೂರಕವೆಂದು ಸಾಮಾನ್ಯವಾಗಿ ಜನರಿಗೆ ತಿಳಿದಿಲ್ಲ. ಸೂಕ್ತ ಚಿಕಿತ್ಸೆ ದೊರಕಿದಲ್ಲಿ ನಿವಾರಣೆ ಖಂಡಿತಾ ಸಾಧ್ಯ. ಸ್ವಾರಸ್ಯಕರ ಸಂಗತಿ ಎಂದರೆ ಚರ್ಮ ಮತ್ತು ಶ್ವಾಸನಾಳಗಳೆರಡಕ್ಕೂ ಗಾಳಿ ಸಾಮಾನ್ಯವಾಗಿ ಸಂಪರ್ಕಕ್ಕೆ ಬರುತ್ತದೆ ಎಂಬ ಅಂಶ. ಎರಡೂ ಉಸಿರಾಡುವುದರಲ್ಲಿ ತೊಡಗಿರುತ್ತವೆ ಎಂಬುದು ವಾಸ್ತವ.

ಚರ್ಮದಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಇಂಗಾಲದ ಡೈ ಆಕ್ಸೈಡ್ ಹೊರಹಾಕುವ ಸೂಕ್ಷ್ಮ ರಂಧ್ರಗಳಿರುತ್ತವೆ. ಶ್ವಾಸನಾಳಗಳದ್ದೂ ಇದೇ ಪ್ರಕ್ರಿಯೆಯೇ. ಆದರೆ, ಚರ್ಮ ಮತ್ತು ಶ್ವಾಸನಾಳಗಳ ತೊಂದರೆಗಳೂ ಅದೇ ರೀತಿ ಪರಸ್ಪರ ಸಂಬಂಧ ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ?

ಅವು ಅಂತರ್‌ಸಂಬಂಧಿತ ವೆಂಬುದನ್ನು ನಾವು ಸಾಮಾನ್ಯವಾಗಿ ತಿಳಿದಿರಬಹುದಾದರೂ, ಅಸ್ತಮ ಪೀಡಿತರ ಪೈಕಿ ಬಹುತೇಕರಿಗೆ ಚರ್ಮದ ಸೋಂಕುಗಳ ಹಾಗೂ ಚರ್ಮ ರೋಗ ಪೀಡಿತರಿಗೆ ಉಸಿರಾಟದ ತೊಂದರೆಗಳ ಸಂಭವನೀಯತೆ ಅತ್ಯಂತ ಹೆಚ್ಚು ಎಂಬುದು ಸತ್ಯ.

ಹೋಮಿಯೋಪಥಿಯ ಪ್ರಕಾರ ಯಾವುದೇ ಕಾಯಿಲೆಯು  ಔಷಧಗಳು ಅಥವಾ ನೋವು ನಿವಾರಕಗಳ ಸೇವನೆಯಿಂದ ಕಡಿಮೆಯಾದಾಗ, ಆ ಕ್ಷಣಕ್ಕೆ ಹಾಯೆನಿಸಬಹುದು. ಆದರೆ ಮಾಯವಾಯಿತೆಂದುಕೊಂಡ ನೋವು ಬೇರೆ ಯಾವುದೋ ರೂಪದಲ್ಲಿ  ಕಾಣಿಸಿಕೊಳ್ಳುತ್ತದೆ. ಚರ್ಮದ ಅಲರ್ಜಿ ಮತ್ತು ಅಸ್ತಮಾಗಳ ಅಂತರ್ ಸಂಬಂಧ ಇದರ ಒಂದು ಕ್ಲಾಸಿಕ್ ಉದಾಹರಣೆ. ಅಸ್ತಮಾದ ಲಕ್ಷಣಗಳನ್ನು ಒತ್ತಿ ಹಿಡಿದಾಗ ಚರ್ಮದ ಸೋಂಕುಗಳ ಸಾಧ್ಯತೆ ತೀವ್ರಗೊಳ್ಳುತ್ತದೆ.

ಆದರೆ, ಶಾಸ್ವಕೋಶದ ತೊಂದರೆಗಳಿಂದ ಬಳಲುತ್ತಿರುವವರಿಗೆ ಚರ್ಮದ ಸೋಂಕುಗಳು ಪ್ರಾರಂಭವಾದಾಗ, ಕಾಯಿಲೆ ಒಳಗಿನಿಂದ ಮೇಲ್ಮೈಗೆ ಬರುತ್ತಿದೆ ಎಂಬ ಅಂಶ ನಿಮಗೆ ತಿಳಿದಿರಲಿಕ್ಕಿಲ್ಲ. ಚರ್ಮದ ಸೋಂಕು ಇರುವವರಿಗೆ ಶ್ವಾಸನಾಳದ ತೊಂದರೆಗಳು ಕಾಣಿಸಿಕೊಳ್ಳತೊಡಗಿದರೆ, ರೋಗವು ಮೇಲ್ಮೈನಿಂದ ಆಳಕ್ಕೆ ಇಳಿಯುತ್ತಿದೆ ಎಂದು ಅರ್ಥ - ಇದೊಂದು ನಕಾರಾತ್ಮಕ ಲಕ್ಷಣ.

ಪರಿಹಾರ
ಚರ್ಮ ಶ್ವಾಸನಾಳಗಳೆರಡನ್ನು ಒಳಗೊಂಡಿರುವ ಚಿಕಿತ್ಸಾ ವಿಧಾನವನ್ನು ಅನುಸರಿಸಬೇಕು. ಅವುಗಳಿಗೆ ಪ್ರತ್ಯೇಕವಾದ ಚಿಕಿತ್ಸೆ ಬೇಡ. ಹೋಮಿಯೋಪಥಿ ಒಂದು ವಿಜ್ಞಾನವಾಗಿ ವ್ಯಕ್ತಿಯನ್ನು ಚಿಕಿತ್ಸಾ ಸಮಯದಲ್ಲಿ ಒಂದು ಸಮಗ್ರ ದೃಷ್ಟಿಯಿಂದ ಅವಲೋಕಿಸುವುದರಿಂದ ಚರ್ಮ ಮತ್ತು ಶ್ವಾಸಕೋಶಗಳನ್ನು ಸಂಯೋಜಿತವಾಗಿ ಪರಿಗಣಿಸುವುದರಿಂದ, ಇವೆರಡರಲ್ಲಿ ಯಾವುದನ್ನೂ ಕಡೆಗಣಿಸುವುದಿಲ್ಲ.  ರೋಗ ಪೀಡಿತರನ್ನು ಓರ್ವ ಸಮಗ್ರ ವ್ಯಕ್ತಿ ಎಂದು ಪರಿಗಣಿಸಿ ಎಲ್ಲಾ ಸಮಸ್ಯೆಗಳನ್ನೂ ನೋಡಲಾಗುತ್ತದೆ.  ಹಾಗಾಗಿ ಚಿಕಿತ್ಸೆಯು ಕೇವಲ ಚರ್ಮ ಸಮಸ್ಯೆ ಅಥವಾ ಆಸ್ತಮಾಗಳನ್ನು ಪ್ರತಿಬಂಧಿಸುವುದರ ಬದಲಿಗೆ ಯಾವುದೇ ಬಗೆಯ ಪ್ರತಿಬಂಧ ಉಂಟಾಗದಂತೆ ಔಷಧೋಪಚಾರ ನೀಡುವುದೇ ಆಗಿದೆ.

ಅಸ್ತಮಾ ಮತ್ತು ಚರ್ಮ ಸಮಸ್ಯೆಗಳ ಅಂತರ್ ಸಂಬಂಧ ಜಗತ್ತಿನಾದ್ಯಂತ ವೈದ್ಯರ ಸಮಸ್ಯೆಯಾಗಿದೆ. ಅಸ್ತಮಾ ಮತ್ತು ಅಲರ್ಜಿ ಫೌಂಡೇಷನ್ ಆಫ್ ಅಮೆರಿಕವನ್ನು (ಎಎಎಫ್‌ಎ) ಇವೆರಡರ ನಡುವಿನ ಪ್ರಬಲ ಸಮನ್ವಯದಿಂದಾಗಿ ಸ್ಥಾಪಿಸಲಾಗಿದೆ.

ಬೆಂಗಳೂರಿನಂತಹ ನಗರದಲ್ಲಿ ಹವಾಗುಣ ಮತ್ತು ಪರಿಸರ ಮಾಲಿನ್ಯದ ಏರು ಸ್ತರಗಳಿಂದ ಅಸ್ತಮಾ ಮತ್ತು ಚರ್ಮ ರೋಗಗಳು ಹೆಚ್ಚಾಗಿವೆ. ಇವು ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿರುವುದರಿಂದ, ಈ ಪೈಕಿ ಒಂದು ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಮತ್ತೊಂದು ಸಮಸ್ಯೆಯಿಂದಲೂ ಬಾಧಿತನಾಗಬಹುದು.ಆದ್ದರಿಂದ ಈ ಸಮಸ್ಯೆಯನ್ನು ಮೂಲದಿಂದಲೇ ಸಂಯೋಜಿತ ಸಮಗ್ರ ಔಷಧೋಪಚಾರದಿಂದ ಪರಿಹರಿಸಬೇಕು.

ಲೇಖಕರ ದೂರವಾಣಿ: 9632921289

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT